ಮುಂಬೈ(ಏ.24): ಕ್ರೆಡಿಟ್‌ ಕಾರ್ಡ್‌ ಸೇವೆ ನೀಡುವ ಕಂಪನಿಗಳಾದ ಅಮೆರಿಕನ್‌ ಎಕ್ಸ್‌ಪ್ರೆಸ್‌ ಮತ್ತು ಡೈನ​ರ್‍ಸ್ ಕ್ಲಬ್‌ ಇಂಟರ್‌ನ್ಯಾಷನಲ್‌ಗೆ ಮೇ 1ರಿಂದ ಹೊಸದಾಗಿ ದೇಶೀಯ ಗ್ರಾಹಕರಿಗೆ ಸೇವೆ ನೀಡುವುದಕ್ಕೆ ಆರ್‌ಬಿಐ ನಿರ್ಬಂಧ ಹೇರಿದೆ.

ಪಾವತಿ ದತ್ತಾಂಶ ಮಾಹಿತಿಗೆ ಸಂಬಂಧಿಸಿದ ನಿರ್ದೇಶನಗಳನ್ನು ಸಮರ್ಪಕವಾಗಿ ಪಾಲಿಸದೇ ಇರುವ ಕಾರಣಕ್ಕೆ ಈ ನಿರ್ಬಂಧ ಹೇರಲಾಗಿದೆ. ಅಮೆರಿಕನ್‌ ಎಕ್ಸ್‌ಪ್ರೆಸ್‌ ಭಾರತದಲ್ಲಿ 15.6 ಲಕ್ಷ ಮಂದಿಗೆ ಕ್ರೆಡಿಟ್‌ ಕಾರ್ಡ್‌ ಸೇವೆ ನೀಡುತ್ತಿದ್ದು, 7ನೇ ಅತಿದೊಡ್ಡ ಕ್ರೆಡಿಕಟ್‌ ಕಾರ್ಡ್‌ ನೀಡಿಕೆದಾರ ಸಂಸ್ಥೆ ಎನಿಸಿಕೊಂಡಿದೆ.

ಇನ್ನೊಂದೆಡೆ ಡೈನರಸ್‌ ಕ್ಲಬ್‌ ಭಾರತದಲ್ಲಿ ಎಚ್‌ಡಿಎಫ್‌ಸಿ ಬ್ಯಾಂಕ್‌ ಜೊತೆ ಒಪ್ಪಂದ ಮಾಡಿಕೊಂಡಿದೆ.