Asianet Suvarna News Asianet Suvarna News

ಸಹ​ಕಾ​ರ ಬ್ಯಾಂಕ್‌​ ಹುದ್ದೆ​ ಶಾಸ​ಕ, ಸಂಸ​ದ​ರಿಗೆ ಬೇಡ: ಆರ್‌ಬಿಐ

* ಸಹ​ಕಾ​ರ ಬ್ಯಾಂಕ್‌​ ಹುದ್ದೆ​ ಶಾಸ​ಕ, ಸಂಸ​ದ​ರಿಗೆ ಬೇಡ

* ಹುದ್ದೆ ಹೊಂದುವವರಿಗೆ ಸ್ನಾತಕೋತ್ತರ ಶಿಕ್ಷಣ ಕಡ್ಡಾಯ

* ಆರ್‌ಬಿಐ ಹೊಸ ಮಾರ್ಗಸೂಚಿ

RBI Bars MPs MLAs From Holding MD Post In Urban Cooperative Banks pod
Author
Bangalore, First Published Jun 28, 2021, 8:02 AM IST

ಮುಂಬೈ(ಜೂ.28): ಸಹಕಾರ ಬ್ಯಾಂಕ್‌ ಮುಖ್ಯಸ್ಥರ ಹುದ್ದೆಗಳಿಗೆ ಸಂಬಂಧಿಸಿದಂತೆ ರಿಸವ್‌ರ್‍ ಬ್ಯಾಂಕ್‌ (ಆರ್‌ಬಿಐ) ಮಹತ್ತರ ಬದಲಾವಣೆ ಮಾಡಿದೆ. ಪ್ರಾಥ​ಮಿ​ಕ ಪಟ್ಟಣ ಸಹ​ಕಾರಿ ಬ್ಯಾಂಕ್‌​ಗ​ಳಿಗೆ ವ್ಯವ​ಸ್ಥಾ​ಪಕ ನಿರ್ದೇ​ಶ​ಕರು (ಎಂಡಿ) ಮತ್ತು ಪೂರ್ಣಾ​ವ​ಧಿಯ ನಿರ್ದೇ​ಶ​ಕ​ (​ಡಬ್ಲ್ಯು​ಟಿ​ಡಿ)ರ ಹುದ್ದೆ​ಗ​ಳಿಗೆ ನೇಮ​ಕ​ವಾ​ಗು​ವ​ವ​ರಿಗೆ ಇರ​ಬೇ​ಕಾದ ಶೈಕ್ಷ​ಣಿಕ ಮತ್ತು ವಯೋ​ಮಿತಿ ಅರ್ಹ​ತೆ​ಗಳ ಬಗ್ಗೆ ಮಾರ್ಗಸೂಚಿ ಹೊರಡಿಸಿದೆ. ಇದೇ ವೇಳೆ, ಸಂಸ​ದರು, ಶಾಸ​ಕರು ಮತ್ತು ನಗರಾಡಳಿತದ ಸದ​ಸ್ಯ​ರಿಗೆ ಈ ಹುದ್ದೆ​ಗ​ಳನ್ನು ನೀಡದಂತೆ ನಿರ್ಬಂಧ ವಿಧಿ​ಸಿದೆ.

ಈ ಪ್ರಕಾರ, ‘ಈ ಹುದ್ದೆ​ಗ​ಳನ್ನು ಅಲಂಕ​ರಿ​ಸು​ವ​ವ​ರು ಆರ್ಥಿಕತೆಗೆ ಸಂಬಂಧಿ​ಸಿದ ಶಿಕ್ಷ​ಣ​ದಲ್ಲಿ ಸ್ನಾತ​ಕೋತ್ತರರ ಪದವೀಧ​ರ​ರಾ​ಗಿ​ರ​ಬೇ​ಕು. ಚಾರ್ಟ​ರ್ಡ್‌/ಕಾಸ್ಟ್‌ ಅಕೌಂಟೆಂಟ್‌ ಅಥವಾ ಎಂಬಿಎ ಅಥವಾ ಬ್ಯಾಂಕಿಂಗ್‌​ನಲ್ಲಿ ಡಿಪ್ಲೋಮಾ ಅಥವಾ ಸಹ​ಕಾರಿ ಉದ್ಯಮ ವ್ಯವ​ಸ್ಥಾ​ಪ​ನೆ​ಯಲ್ಲಿ ಡಿಪ್ಲೋಮಾ ಪೂರ್ಣ​ಗೊ​ಳಿ​ಸಿ​ರ​ಬೇಕು. ಜೊತೆಗೆ ಈ ಹುದ್ದೆ​ಗ​ಳಿಗೆ ನೇಮ​ಕ​ವಾ​ಗುವ ವ್ಯಕ್ತಿಯು 35 ವರ್ಷ​ಕ್ಕಿಂತ ಕಡಿಮೆ ಅಥವಾ 70 ವರ್ಷ ಮೇಲಿ​ರ​ಬಾ​ರದು. ಬ್ಯಾಂಕಿಂಗ್‌ ವಲಯದಲ್ಲಿ ಅಥವಾ ಬ್ಯಾಂಕೇತರ ಹಣಕಾಸು ಕಂಪನಿಗಳ ಮಧ್ಯಮ ಸ್ತರದ ಆಡಳಿತದಲ್ಲಿ 8 ವರ್ಷ ಅನುಭವ ಹೊಂದಿರಬೇಕು’ ಎಂದು ತಿಳಿ​ಸ​ಲಾ​ಗಿದೆ.

ಸಂಸದ, ಶಾಸಕರು ಹಾಗೂ ನಗರಾಡಳಿತದ ಸದಸ್ಯರಲ್ಲದೇ. ವ್ಯಾಪಾರ, ವಾಣಿಜ್ಯ ಅಥವಾ ಕಂಪನಿಗಳಲ್ಲಿ ಹೂಡಿಕೆ ಹೊಂದಿದವರು ಕೂಡ ಈ ಹುದ್ದೆಗಳಿಗೆ ಅರ್ಹರಲ್ಲ ಎಂದು ಆರ್‌ಬಿಐ ಹೇಳಿದೆ.

ನೇಮಕ ಆದವರು 5 ವರ್ಷ ಹುದ್ದೆ ಹೊಂದಿರಬಹುದು ಹಾಗೂ ಮರುನೇಮಕಕ್ಕೆ ಅರ್ಹರು. ಎಂಡಿ ಹಾಗೂ ಪೂರ್ಣಾವಧಿ ನಿರ್ದೇಶಕರ ಅವಧಿ 15 ವರ್ಷ ಮೀರಕೂಡದು. ಒಂದು ವೇಳೆ ಅಗತ್ಯ ಬಿದ್ದರೆ 3 ವರ್ಷದ ಅಂತರದ ಬಳಿಕ ನೇಮಕಗೊಳ್ಳಬಹುದು ಎಂದು ತಿಳಿಸಲಾಗಿದೆ.

Follow Us:
Download App:
  • android
  • ios