ಚುನಾವಣೆ ಗಿಫ್ಟ್: ಬಿಪಿಎಲ್ ಮಹಿಳೆಯರಿಗೆ ಫ್ರೀ ಮೊಬೈಲ್!

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 4, Sep 2018, 3:37 PM IST
Rajasthan government to provide free mobile phones to women of BPL families
Highlights

ಎಲ್ಲಾ ಬಿಪಿಎಲ್ ಮಹಿಳೆಯರಿಗೆ ಫ್ರೀ ಮೊಬೈಲ್! ಪ್ರಧಾನಿ ಮೋದಿ ಟಿಜಿಟಲ್ ಇಂಡಿಯಾ ಅಭಿಯಾನಕ್ಕೆ ಪ್ರೋತ್ಸಾಹ! ರಾಜಸ್ಥಾನ ಸರ್ಕಾರದಿಂದ ಉಚಿತ ಮೊಬೈಲ್ ಘೋಷಣೆ! ಬಾಮಶಾ ಯೋಜನೆಯಡಿ ಉಚಿತ ಮೊಬೈಲ್ ಕೊಡುಗೆ
ಯೋಜನೆ ಘೋಷಿಸಿದ ರಾಜಸ್ಥಾನ ಸಿಎಂ ವಸುಂದರಾ ರಾಜೇ  

ಜೈಪುರ್(ಸೆ.4): ಪ್ರಧಾನಿ ನರೇಂದ್ರ ಮೋದಿ ಅವರ ಡಿಜಿಟಲ್ ಇಂಡಿಯಾ ಅಭಿಯಾನ ಪ್ರೋತ್ಸಾಹಿಸುವ ನಿಟ್ಟಿನಲ್ಲಿ,  ರಾಜಸ್ತಾನ ಸರ್ಕಾರ ಶೀಘ್ರದಲ್ಲಿಯೇ ಬಾಮಶಾ ಯೋಜನೆಯಡಿ  ಬಿಪಿಎಲ್ ಕುಟುಂಬದ ಮಹಿಳೆಯರಿಗೆ ಉಚಿತವಾಗಿ ಮೊಬೈಲ್ ಪೋನ್ ನೀಡುವುದಾಗಿ ಘೋಷಿಸಿದೆ. ಹೇಳಿದೆ.

ರಾಜಸ್ತಾನ ರಾಜ್ಯವನ್ನು ಹೊರ ಜಗತ್ತಿಗೆ ಸಂಪರ್ಕಿಸುವ ನಿಟ್ಟಿನಲ್ಲಿ 5 ಸಾವಿರ ಗ್ರಾಮ ಪಂಚಾಯಿತಿಗಳಿಗೆ ಉಚಿತವಾಗಿ ವೈಫೈ ಸೌಲಭ್ಯ ಕಲ್ಪಿಸುವುದಾಗಿ ಸರ್ಕಾರ ತಿಳಿಸಿದೆ. ಈ  ಕಾರ್ಯಕ್ರಮ ಸೆಪ್ಟೆಂಬರ್ 1 ರಿಂದ ಆರಂಭಗೊಂಡಿದ್ದು, ಸೆಪ್ಟೆಂಬರ್ 30 ರಂದು ಅಂತ್ಯಗೊಳ್ಳಲಿದೆ.

ಸರ್ಕಾರ ಅನುಷ್ಠಾನಗೊಳಿಸಿರುವ  ಯೋಜನೆಗಳ ಅನುಕೂಲಗಳನ್ನು  ಪ್ರಾಮಾಣಿಕವಾಗಿ ಫಲಾನುಭವಿಗಳಿಗೆ ದೊರಕಿಸುವುದು ಈ ಯೋಜನೆಯ ಗುರಿಯಾಗಿದ್ದು, ಬಡತನ ರೇಖೆಗಿಂತ ಕೆಳಗಿರುವ ಮಹಿಳೆಯರು ಪೋನ್ ಗಳನ್ನು ಪಡೆಯಲಿದ್ದಾರೆ.

ಮೊಬೈಲ್ ಪೋನ್ ಗಳಲ್ಲಿರುವ ಬಟನ್  ಒತ್ತುವ ಮೂಲಕ ಬಡವರು ಸಹ ಎಲ್ಲಾ ಸವಲತ್ತುಗಳನ್ನು ಪಡೆಯಲು ಅನುಕೂಲವಾಗುವಂತಹ ಹೊಸ ಅಪ್ಲಿಕೇಷನ್ ವೊಂದನ್ನು  ಅಳವಡಿಸಲು ಪ್ರಯತ್ನಿಸಲಾಗುತ್ತಿದೆ ಎಂದು ಸಿಎಂ ವಸುಂಧರಾ ರಾಜೇ ಮಾಹಿತಿ ನೀಡಿದ್ದಾರೆ. ಡಿಜಿಟಲ್ ಪಾವತಿಗಾಗಿ ಆಗಸ್ಟ್ 29 ರಂದು  ಬಾಮಶಾ ವ್ಯಾಲೆಟ್ ಮೊಬೈಲ್ ನ್ನು ವಸುಂಧರಾ ರಾಜೇ  ಬಿಡುಗಡೆ ಮಾಡಿದ್ದರು.

loader