ಬೆಂಗಳೂರಿನಲ್ಲಿ ತಿಂಗಳಿಗೆ ಬರೋಬ್ಬರಿ 6 ಕೋಟಿ ರೂ ಬಾಡಿಗೆಗೆ ಕಚೇರಿ ಪಡೆದ ಕ್ವಾಲ್‌ಕಾಮ್ ಇಂಡಿಯಾ!

ಬೆಂಗಳೂರಿನ ಬಾಗ್‌ಮನೆ ಕ್ಯಾಪಿಟಲ್-ಆಂಕೋರ್ ಹೆಸರಿನ ಕಟ್ಟಡದ 6.21 ಲಕ್ಷ ಚದರ ಅಡಿ ಕಚೇರಿ ಜಾಗವನ್ನು ಕ್ವಾಲ್‌ಕಾಮ್ ಇಂಡಿಯಾ ಎಂಬ ಐಟಿ ಸಂಸ್ಥೆಗೆ ಬಾಡಿಗೆಗೆ ನೀಡಿದ್ದಾರೆ. ಇದರ ಬಾಡಿಗೆ ತಿಂಗಳಿಗೆ  5.90 ಕೋಟಿ ರೂ. 

Qualcomm India leases office space in Bengaluru nearly six crore monthly rent gow

ಟೆಕ್‌ ಹಬ್ ಬೆಂಗಳೂರಿನಲ್ಲಿ ಅನೇಕ ಅಂತರಾಷ್ಟ್ರೀಯ ಕಂಪೆನಿಗಳು ಕಾರ್ಯನಿರ್ವಹಿಸುತ್ತದೆ. ಇದೀಗ ಬೆಂಗಳೂರು ಮೂಲದ ಬಾಗ್‌ಮನೆ ಡೆವಲಪರ್‌ಗಳು ಬೆಂಗಳೂರಿನ ಬಾಗ್‌ಮನೆ ಕ್ಯಾಪಿಟಲ್-ಆಂಕೋರ್ ಹೆಸರಿನ ಕಟ್ಟಡದ 6.21 ಲಕ್ಷ ಚದರ ಅಡಿ ಕಚೇರಿ ಜಾಗವನ್ನು ಕ್ವಾಲ್‌ಕಾಮ್ ಇಂಡಿಯಾ ಎಂಬ ಐಟಿ ಸಂಸ್ಥೆಗೆ ಬಾಡಿಗೆಗೆ ನೀಡಿದ್ದಾರೆ. 6.21 ಲಕ್ಷ ಚದರ ಅಡಿ ಬಾಡಿಗೆಗೆ  ಪಡೆದಿರುವ ಈ ಜಾಗಕ್ಕೆ ತಿಂಗಳಿಗೆ 5.90 ಕೋಟಿ ರೂ.ಗೆ ಬಾಡಿಗೆ ಎಂದು  ಪ್ರಾಪ್‌ಸ್ಟಾಕ್ ದಾಖಲೆಗಳು ಬಹಿರಂಗಪಡಿಸಿವೆ.

ಈ ಒಪ್ಪಂದಲ್ಲಿ ನೆಲದ ಜೊತೆಗೆ 12 ಮಹಡಿಗಳು ಒಳಗೊಂಡಿದೆ ಮತ್ತು ಗುತ್ತಿಗೆ ಅವಧಿಯು ಏಪ್ರಿಲ್ 2024 ರಿಂದ ಪ್ರಾರಂಭವಾಗಲಿದೆ. 108 ತಿಂಗಳುಗಳ ಬಾಡಿಗೆಗೆ ಒಪ್ಪಂದ ಮಾಡಿಕೊಳ್ಳಲಾಗಿದೆ ಅಂದರೆ ಸುಮಾರು 9 ವರ್ಷಗಳ ಕಾಲ ಬಾಡಿಗೆಗೆ ನೀಡಲಾಗಿದೆ ಎಂದು ದಾಖಲೆಗಳು ಬಹಿರಂಗಪಡಿಸಿವೆ.

ಫೋರ್ಬ್ಸ್ ಶ್ರೀಮಂತರ ಪಟ್ಟಿಯಲ್ಲಿ ಇನ್ಫಿ ನಾರಾಯಣಮೂರ್ತಿಯವರನ್ನು ಹಿಂದಿಕ್ಕಿದ ಕನ್ನಡದ ಸಹೋದರರು!

 

ಇದು ಸೆಮಿಕಂಡಕ್ಟರ್ ಮತ್ತು ಸಾಫ್ಟ್‌ವೇರ್ ತಯಾರಕ ಕ್ವಾಲ್ಕಾಮ್  10 ತಿಂಗಳುಗಳಲ್ಲಿ ಪಡೆದ ಮೂರನೇ ಅತಿದೊಡ್ಡ ಕಚೇರಿ ವ್ಯವಹಾರವಾಗಿದೆ. ಡಾಟಾ ಅನಾಲಿಟಿಕ್ಸ್ ಸಂಸ್ಥೆಯಾದ ಪ್ರಾಪ್‌ಸ್ಟಾಕ್ ಹಂಚಿಕೊಂಡಿರುವ ಗುತ್ತಿಗೆ ದಾಖಲೆಯಲ್ಲಿ ಉಲ್ಲೇಖಿಸಲಾದಂತೆ ಪ್ರತಿ ಮೂರು ವರ್ಷಗಳಿಗೊಮ್ಮೆ ಬಾಡಿಗೆ ಹೆಚ್ಚಳ ಸೇರಿದಂತೆ ದೀರ್ಘಾವಧಿಯ ಗುತ್ತಿಗೆಗಾಗಿ ಕಂಪನಿಯು ಪ್ರತಿ ಚದರ ಅಡಿಗೆ  95 ರೂ ಅನ್ನು ಪಾವತಿಸುತ್ತದೆ.

ಕಳೆದ ವರ್ಷದ ಕೊನೆಯಲ್ಲಿ, ಕ್ವಾಲ್‌ಕಾಮ್‌ ಸಂಸ್ಥೆಯು ಹೈದರಾಬಾದ್‌ನಲ್ಲಿರುವ ರಿಯಾಲ್ಟಿ ಡೆವಲಪರ್ ಕೆ ರಹೇಜಾ ಕಾರ್ಪ್‌ನ ಮಾಹಿತಿ ತಂತ್ರಜ್ಞಾನ ಪಾರ್ಕ್‌ನಲ್ಲಿ ಸಂಪೂರ್ಣ 20 ಅಂತಸ್ತಿನ ವಾಣಿಜ್ಯ ಗೋಪುರದ ಮೇಲೆ 1.8 ಮಿಲಿಯನ್ ಚದರ ಅಡಿಗಿಂತಲೂ ಹೆಚ್ಚು ವಿಸ್ತಾರವನ್ನು ಬಾಡಿಗೆಗೆ ತೆಗೆದುಕೊಂಡಿತು. ಇದು ಕ್ವಾಲ್‌ಕಾಮ್‌ನ ಅತಿ ದೊಡ್ಡ ಕಚೇರಿಯಾಗಿದೆ. ಇನ್ನು ಚೆನ್ನೈನ ರಾಮಾನುಜನ್ ಐಟಿ ಪಾರ್ಕ್‌ನಲ್ಲಿ 7,00,000 ಚದರ ಅಡಿಗಳನ್ನು ಪಡೆದಿದೆ. ಹೈದರಾಬಾದ್‌ನಲ್ಲಿನ ಅನೇಕ ಕಚೇರಿಗಳನ್ನು ಹೊರತುಪಡಿಸಿ ಕ್ವಾಲ್ಕಾಮ್ ಮುಂಬೈ, ಬೆಂಗಳೂರು ಮತ್ತು ದೆಹಲಿಯಲ್ಲಿ ಕಚೇರಿಗಳನ್ನು ಹೊಂದಿದೆ.

ಕೇವಲ 1 ರೂ ನಲ್ಲಿದ್ದ ಅನಿಲ್‌ ಅಂಬಾನಿ ಷೇರುಗಳ ಬೆಲೆ ಬಾರೀ ಜಿಗಿತ, 6 ತಿಂಗಳಲ್ಲಿ ಡಬಲ್!

ಇದಕ್ಕೂ ಮೊದಲು, ಗೂಗಲ್ ಬೆಂಗಳೂರಿನಲ್ಲಿ 29 ಲಕ್ಷ ಚದರ ಅಡಿ (ಚದರ ಅಡಿ) ಜಾಗವನ್ನು ಆರು ಪ್ರತ್ಯೇಕ ಒಪ್ಪಂದಗಳ ಮೂಲಕ ಪ್ರತಿ ಚದರ ಅಡಿಗೆ 58 ರೂ ನಿಂದ  230 ರೂ. ಮಾಸಿಕ ಬಾಡಿಗೆಗೆ ನೀಡಿತ್ತು. ಇದರ ನಂತರ ಅಮೆಜಾನ್ ಡೆವಲಪ್‌ಮೆಂಟ್ ಸೆಂಟರ್  ಗೆ ಗುತ್ತಿಗೆ ನೀಡಲಾಗಿದೆ. ಐದು ವರ್ಷಗಳ ಕಾಲ ಬೆಂಗಳೂರಿನಲ್ಲಿ 6.59 ಲಕ್ಷ ಚದರ ಅಡಿ ಕಚೇರಿ ಸ್ಥಳಾವಕಾಶ ಮತ್ತು ತಿಂಗಳಿಗೆ ಪ್ರತಿ ಚದರ ಅಡಿಗೆ ರೂ 72.74 ದರದಲ್ಲಿ ಬಾಡಿಗೆ ನೀಡಲಾಗುತ್ತಿದೆ.

Latest Videos
Follow Us:
Download App:
  • android
  • ios