Asianet Suvarna News Asianet Suvarna News

ಬ್ಯಾಂಕ್‌ನಿಂದ 94 ಕೋಟಿ ಕದ್ದ ಸೈಬರ್ ಕಳ್ಳ: ಬೆಚ್ಚಿ ಬಿದ್ದ ಭಾರತ!

ಬ್ಯಾಂಕ್ ಸರ್ವರ್ ಹ್ಯಾಕ್ ಮಾಡಿ 94 ಕೋಟಿ ರೂ. ದರೋಡೆ! ಪುಣೆಯ ಕಾಸ್ಮೋಸ್ ಬ್ಯಾಂಕ್ ನ 94 ಕೋಟಿ ರೂ.ಗೆ ಕನ್ನ! ಎರಡು ಕಂತಿನಲ್ಲಿ ಹಣ ದೋಚಿದ ಸೈಬರ್ ಕಳ್ಳ! ಹಾಂಗ್ ಕಾಂಗ್ ಬ್ಯಾಂಕ್ ಗೆ ವರ್ಗಾವಣೆ  

Pune-based Cosmos Bank loses Rs 94 crore in cyber attack
Author
Bengaluru, First Published Aug 14, 2018, 5:06 PM IST

ಪುಣೆ(ಆ.14): ಪುಣೆಯ ಕಾಸ್ಮಾಸ್ ಬ್ಯಾಂಕ್‌ನ ಹಲವು ಬ್ರಾಂಚ್‌ಗಳಿಗೆ ಸೈಬರ್ ಕಳ್ಳನೋರ್ವ ಕನ್ನ ಹಾಕಿದ್ದು, ಈ ಹಣವನ್ನು ಹಾಂಕ್‌ಕಾಂಗ್ ಮತ್ತು ಭಾರತದ ಕೆಲ ಬ್ಯಾಂಕ್ ಖಾತೆಗಳಿಗೆ ವರ್ಗಾವಣೆ ಮಾಡಿದ್ದಾನೆ. 

ಕಳೆದ ಆಗಸ್ಟ್ 11ರಂದು ಬ್ಯಾಂಕ್ ಸರ್ವರ್ ಹ್ಯಾಕ್ ಮಾಡಿ ಬರೋಬ್ಬರಿ 78 ಕೋಟಿ ರೂ. ದೋಚಲಾಗಿದೆ. ಇನ್ನು ಆಗಸ್ಟ್ 13ರಂದು ಮತ್ತೊಮ್ಮೆ ಹ್ಯಾಕ್ ಮಾಡಿ 14 ಕೋಟಿ ರೂ. ದೋಚಲಾಗಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಬ್ಯಾಂಕ್ ಅಧಿಕಾರಿಗಳು ಚತುಶ್ರಂಗಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. 

ಕಾಸ್ಮಾಸ್ ಸಹಕಾರಿ ಬ್ಯಾಂಕ್ ಭಾರತದ ಹಳೆಯ ನಗರ ಸಹಕಾರಿ ಬ್ಯಾಂಕುಗಳಲ್ಲಿ ಒಂದಾಗಿದೆ. ಪುಣೆ ಮೂಲದ ಈ ಬ್ಯಾಂಕ್ 2006ರ ಜನವರಿ 18ರಂದು ಶತಮಾನೋತ್ಸವವನ್ನು ಆಚರಿಸಿಕೊಂಡಿತ್ತು.

Follow Us:
Download App:
  • android
  • ios