Asianet Suvarna News Asianet Suvarna News

5 ಟ್ರಿಲಿಯನ್ ಸ್ವರ್ಗದಿಂದ ಬರುತ್ತಾ?: ಪ್ರಣಬ್ ದಾ ಎತ್ತಿದರು ಬೆತ್ತ!

ಮೋದಿ ಸರ್ಕಾರಕ್ಕೆ ಚಾಟಿ ಬೀಸಿದ ಪ್ರಣಬ್ ಮುಖರ್ಜಿ| ‘5 ಟ್ರಿಲಿಯನ್ ಡಾಲರ್ ಎಕಾನಾಮಿ ಎಂದರೆ ಹುಡುಗಾಟವೇ’?| 5 ಟ್ರಿಲಿಯನ್ ಡಾಲರ್ ಸ್ವರ್ಗದಿಂದ ಬರುತ್ತಾ ಎಂದು ಕೇಳಿದ ಮಾಜಿ ರಾಷ್ಟ್ರಪತಿ| ಯೋಜನಾ ಆಯೋಗದ ರದ್ದತಿಗೆ ಪ್ರಣಬ್ ಮುಖರ್ಜಿ ಅಸಮಾಧಾನ| ಹಿಂದಿನ ಸರ್ಕಾರಗಳ ಸಾಧನೆ ಕಡೆಗಣಿಸದಿರಿ ಎಂದ ಮಾಜಿ ರಾಷ್ಟ್ರಪತಿ| ಐಐಟಿ, ಇಸ್ರೋ ಸಂಸ್ಥೆಗಳನ್ನು ನೆಹರೂ ಸ್ಥಾಪಿಸಿದ್ದು ಎಂದ ಪ್ರಣಬ್| ‘ಸರ್ಕಾರ ಸದೃಢ ಆರ್ಥಿಕತೆ ಬಗ್ಗೆ ಮಾತನಾಡುತ್ತಿರುವುದು ಅಚ್ಚರಿ ತಂದಿದೆ’|

Pranab Mukherjee Delivered Sharp Critique on Govt Over Economy
Author
Bengaluru, First Published Jul 19, 2019, 2:29 PM IST

ನವದೆಹಲಿ(ಜು.19): ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ 5 ಟ್ರಿಲಿಯನ್ ಡಾಲರ್ ಆರ್ಥಿಕತೆಯ ವಾಗ್ದಾನವನ್ನು ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಟೀಕಿಸಿದ್ದಾರೆ.

2024ರ ವೇಳೆಗೆ ಭಾರತವನ್ನು 5 ಟ್ರಿಲಿಯನ್ ಡಾಲರ್ ಆರ್ಥಿಕತೆಯ ದೇಶವನ್ನಾಗಿ ಮಾಡುವುದಾಗಿ ಕೇಂದ್ರ ಸರ್ಕಾರ ಹೇಳಿದೆ. 5 ಟ್ರಿಲಿಯನ್ ಡಾಲರ್ ಏನು ಸ್ವರ್ಗದಿಂದ ಬರುತ್ತದೆಯೇ ಎಂದು ಪ್ರಣಬ್ ಪ್ರಶ್ನಿಸಿದ್ದಾರೆ. 

ಇದೇ ವೇಳೆ ಯೋಜನಾ ಆಯೋಗವನ್ನು ರದ್ದುಗೊಳಿಸಿರುವ ಮೋದಿ ಸರ್ಕಾರದ ನಿರ್ಧಾರವನ್ನೂ ಪ್ರಣಬ್ ಟೀಕಿಸಿದ್ದಾರೆ. ಆರ್ಥಿಕತೆಗೆ ಸುಭದ್ರ ಅಡಿಪಾಯ ಹಾಕಬಲ್ಲ ಸಂಸ್ಥೆಯನ್ನು ರದ್ದುಗೊಳಿಸಿ, ಸದೃಢ ಆರ್ಥಿಕತೆಯನ್ನು ಸಾಧಿಸುವ ಮಾತುಗಳನ್ನಾಡುವುದು ಅಚ್ಚರಿಯ ಸಂಗತಿ ಎಂದು ಅವರು ಹರಿಹಾಯ್ದಿದ್ದಾರೆ.

ದೇಶ ಇಷ್ಟು ಸದೃಢ ಆರ್ಥಿಕ ವ್ಯವಸ್ಥೆಯನ್ನು ಹೊಂದಿರಬೇಕಾದರೆ ಈ ಹಿಂದಿನ ಸರ್ಕಾರಗಳು ಈ ನಿಟ್ಟಿನಲ್ಲಿ ಕೈಗೊಂಡ ಸುಧಾರಣಾ ಕ್ರಮಗಳೇ ಕಾರಣ ಎಂದು ಮಾಜಿ ರಾಷ್ಟ್ರಪತಿ ಅಭಿಪ್ರಾಯಪಟ್ಟಿದ್ದಾರೆ.

ದೇಶದ ಮೊದಲ ಪ್ರಧಾನಿ ಪಂಡಿತ್ ಜವಾಹರಲಾಲ್ ನೆಹರೂ ಈ ದೇಶದಲ್ಲಿ ಐಐಟಿ, ಇಸ್ರೋದಂತ ಅದ್ಭುತ ಸಂಸ್ಥೆಗಳನ್ನು ಕಟ್ಟಿ ಬೆಳೆಸಿದರು. ಮುಂದಿನ ಸರ್ಕಾರಗಳು ಅವುಗಳನ್ನು ಪೋಷಿಸಿ ಬೆಳೆಸಿದ ಪರಿಣಾಮ ದೇಶ ಇಂದು ಈ ಸ್ಥಿತಿಗೆ ಬಂದು ನಿಂತಿದೆ ಎಂದು ಪ್ರಣಬ್ ಹೇಳಿದ್ದಾರೆ.

ಯೋಜನಾ ಆಯೋಗವನ್ನೇ ರದ್ದುಪಡಿಸಿರುವ ಪ್ರಸ್ತುತ ಸರ್ಕಾರ, ಸದೃಢ ಆರ್ಥಿಕತೆ ಬಗ್ಗೆ ಮಾತನಾಡುತ್ತಿರುವುದು ನಿಜಕ್ಕೂ ಅಚ್ಚರಿಯ ಸಂಗತಿ ಎಂದು ಪ್ರಣಬ್ ಮುಖರ್ಜಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Follow Us:
Download App:
  • android
  • ios