ಭಾರತದ ಆರ್ಥಿಕತೆ ಸದೃಢ ಎಂದ ಪ್ರಧಾನಿ ಮೋದಿ| ದ.ಕೊರಿಯಾ ಪ್ರವಾಸದಲ್ಲಿ ಪ್ರಧಾನಿ ನರೇಂದ್ರ ಮೋದಿ| ಶೀಘ್ರವೇ 5 ಟ್ರಿಲಿಯನ್ ಡಾಲರ್ ಆರ್ಥಿಕತೆಯ ದೇಶವಾಗಿ ಭಾರತ| ಭಾರತ-ಕೊರಿಯಾ ಉದ್ಯಮಗೋಷ್ಠಿಯಲ್ಲಿ ಮಾತನಾಡಿದ ಪ್ರಧಾನಿ|
ಸಿಯೋಲ್(ಫೆ.21): ಭಾರತದ ಆರ್ಥಿಕತೆ ಸದೃಢವಾಗಿದ್ದು, ಶೀಘ್ರವೇ 5 ಟ್ರಿಲಿಯನ್ ಡಾಲರ್ ಆರ್ಥಿಕತೆಯ ದೇಶವಾಗಿ ಹೊರಹೊಮ್ಮಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ದಕ್ಷಿಣ ಕೊರಿಯಾಗೆ ಭೇಟಿ ನೀಡಿರುವ ಪ್ರಧಾನಿ ನರೇಂದ್ರ ಮೋದಿ, ಭಾರತ-ಕೊರಿಯಾ ಉದ್ಯಮಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ್ದಾರೆ.
ಮುಕ್ತ ಆರ್ಥಿಕತೆಯಾಗಿರುವ ಭಾರತ ಕಳೆದ 4 ವರ್ಷಗಳಲ್ಲಿ 250 ಬಿಲಿಯನ್ ಡಾಲರ್ ನಷ್ಟು ವಿದೇಶಿ ನೇರ ಬಂಡವಾಳ ಹೂಡಿಕೆಯನ್ನು ಆಕರ್ಷಿಸಿದೆ ಎಂದು ಪ್ರಧಾನಿ ಈ ವೇಳೆ ಹೇಳಿದರು.
ಭಾರತವನ್ನು ಹೊರತುಪಡಿಸಿ ವರ್ಷದಿಂದ ವರ್ಷಕ್ಕೆ ವಿಶ್ವದ ಯಾವುದೇ ದೊಡ್ಡ ಆರ್ಥಿಕತೆಯೂ ಸಹ ಶೇ.7 ರಷ್ಟು ಬೆಳವಣಿಗೆ ಸಾಧಿಸಿಲ್ಲ ಎಂದು ಮೋದಿ ಈ ವೇಳೆ ನುಡಿದರು.
ಉದ್ಯಮ ಸ್ಥಾಪನೆ ಸರಳೀಕರಣದ ವಿಷಯದಲ್ಲಿ ಭಾರತ 77 ನೇ ಸ್ಥಾನದಲ್ಲಿದೆ. ಮುಂದಿನ ವರ್ಷ ಟಾಪ್ 50 ದೇಶಗಳ ಪೈಕಿ ಭಾರತ ಸ್ಥಾನ ಪಡೆಯಲಿದೆ ಎಂದು ಮೋದಿ ಭರವಸೆ ವ್ಯಕ್ತಪಡಿಸಿದರು
