2022ರ ಆರ್ಥಿಕ ವರ್ಷದಲ್ಲಿ ಪ್ರಧಾನಿ ಮೋದಿ ಆಸ್ತಿ, ಸಂಭಾವನೆ, ಬ್ಯಾಂಕ್ ಬ್ಯಾಲೆನ್ಸ್ ಎಷ್ಟಿದೆ?
ಪ್ರಧಾನಿ ನರೇಂದ್ರ ಮೋದಿ ವಿಶ್ವದ ಅತ್ಯಂತ ಜನಪ್ರಿಯ ನಾಯಕ. ಪ್ರಧಾನಿ ಮೋದಿ 2022ರ ಆರ್ಥಿಕ ವರ್ಷದಲ್ಲಿನ ಆಸ್ತಿ, ಬ್ಯಾಂಕ್ ಬ್ಯಾಲೆನ್ಸ್ ಎಷ್ಟಿದೆ? ಕಳೆದ ಆರ್ಥಿಕ ವರ್ಷದಲ್ಲಿ ಮೋದಿಯ ಹಣಕಾಸು ವಹಿವಾಟಿನ ಮಾಹಿತಿ ಇಲ್ಲಿದೆ.
ನವದೆಹಲಿ(ಮಾ.10): ಪ್ರಧಾನಿ ನರೇಂದ್ರ ಮೋದಿ ನಾಯಕತ್ವದಲ್ಲಿ ಭಾರತ ತ್ವರಿತಗತಿಯಲ್ಲಿ ಅಭಿವದ್ಧಿ ಕಾಣುತ್ತಿದೆ. ಹೊಸ ಭಾರತ ನಿರ್ಮಾಣವಾಗಿದೆ. ಹೀಗಾಗಿ ಮೋದಿ ಅತ್ಯಂತ ಜನಪ್ರಿಯ ನಾಯಕನಾಗಿ ಹೊರಹೊಮ್ಮಿದ್ದಾರೆ. ಈ ಜನಪ್ರಿಯ ನಾಯಕನ ಬಳಿರುವ ಆಸ್ತಿ ಎಷ್ಟು? ಬ್ಯಾಂಕ್ ಬ್ಯಾಲೆನ್ಸ್ ಎಷ್ಟಿದೆ? ಈ ಕುತೂಹಲಗಳಿಗೆ ಉತ್ತರ ಸಿಕ್ಕಿದೆ. 2022ರ ಆರ್ಥಿಕ ವರ್ಷದಲ್ಲಿ ಮೋದಿ ಆಸ್ತಿ ಕುರಿತು ಮಾಹಿತಿ ಬಹಿರಂಗವಾಗಿದೆ. 2022ನೇ ಸಾಲಿನಲ್ಲಿ ಪ್ರಧಾನಿ ಮೋದಿ ಚರಾಸ್ತಿ 2.23 ಕೋಟಿ ರೂಪಾಯಿ. 2021ರ ಆರ್ಥಿಕ ವರ್ಷಕ್ಕೆ ಹೋಲಿಸಿದರೆ 26.13 ಲಕ್ಷ ರೂಪಾಯಿ ಏರಿಕೆಯಾಗಿದೆ.
ಪ್ರಧಾನಿ ಮೋದಿಯ ಚರಾಸ್ತಿಯ ಪೈಕಿ ಬ್ಯಾಂಕ್‌ನಲ್ಲಿ FDR ಹಾಗೂ MOD ರೂಪದಲ್ಲಿ 21,033,226 ರೂಪಾಯಿ ಹೂಡಿಕೆ ಮಾಡಿದ್ದಾರೆ. ಪ್ರಧಾನಿ ಮೋದಿ ಬಳಿ ಇರುವ ನಗದು ಮೊತ್ತ 35,250 ರೂಪಾಯಿ. ಇನ್ನು ಗುಜರಾತ್‌ನ ಗಾಂಧಿನಗರದ ಎಸ್‌ಬಿಐ ಬ್ಯಾಂಕ್‌ನಲ್ಲಿ 46,555 ರೂಪಾಯಿ ಉಳಿತಾಯ ಮಾಡಿದ್ದಾರೆ. ಇನ್ನು ಪೋಸ್ಟ್ ಆಫೀಸ್ ರಾಷ್ಟ್ರೀಯ ಉಳಿತಾಯ ಸರ್ಟಿಫಿಕೇಟ್ ಮೂಲಕ 9,05,105 ರೂಪಾಯಿ ಹೂಡಿಕೆ ಮಾಡಿದ್ದಾರೆ. ಜೀವ ವಿಮೆಯಲ್ಲಿ 1,89,305 ರೂಪಾಯಿ ಮೋದಿ ಹೂಡಿಕೆ ಮಾಡಿದ್ದಾರೆ.
ಮೋದಿ ರೋಡ್ ಶೋನಲ್ಲಿ 40 ಸಾವಿರ ಮಂದಿ ಭಾಗಿ: ಜನರನ್ನು ಕರೆತರಲು 4 ಸಾವಿರ ಬಸ್ ವ್ಯವಸ್ಥೆ
2017-18ರ ಸಾಲಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಸಂಭಾವನೆ 19.92 ಲಕ್ಷ ರೂಪಾಯಿ. ಇನ್ನು 2013-14ರ ಸಾಲಿನಲ್ಲಿ ಅಂದರೆ ಮೋದಿ ಸಂಭಾವನೆ 9.69 ಲಕ್ಷ ರೂಪಾಯಿ. ಪ್ರಧಾನಿ ಮೋದಿಯ ಸಂಭಾವನೆ, ಸ್ಥಿರಾಸ್ತಿ ಹಾಗೂ ಚರಾಸ್ತಿ ಕುರಿತು ಮಾಹಿತಿಗಳು ಮೈನೇತಾ ಇನ್ಫೋದಲ್ಲಿ ಲಭ್ಯವಿದೆ.
ಪ್ರಧಾನಿ ಮೋದಿ 45 ಗ್ರಾಂ ತೂಕದ ಚಿನ್ನದ ಉಂಗುರ ಹೊಂದಿದ್ದಾರೆ. ಇದರ ಮೌಲ್ಯ 1.73 ಲಕ್ಷ ರೂಪಾಯಿ. ಪ್ರಧಾನಿ ನರೇಂದ್ರ ಮೋದಿ ಯಾವುದೇ ಸ್ಥಿರಾಸ್ತಿ ಹೊಂದಿಲ್ಲ. ಗಾಂಧಿನಗರದಲ್ಲಿದ್ದ ನಿವೇಶನಭೂಮಿಯನ್ನು ಮೋದಿ ದಾನ ಮಾಡಿದ್ದಾರೆ. ಇನ್ನು ಬಾಂಡ್, ಷೇರು, ಮ್ಯೂಚ್ವಲ್ ಫಂಡ್ ಸೇರಿದಂತೆ ಇನ್ನಿತರ ಯಾವುದೇ ರೀತಿಯಲ್ಲಿ ಮೋದಿ ಹೂಡಿಕೆ ಮಾಡಿಲ್ಲ. ಪ್ರಧಾನಿ ಮೋದಿ ಯಾವುದೇ ಸ್ವಂತ ಕಾರು ಹೊಂದಿಲ್ಲ. ಇದೇ ವೇಳೆ ಯಾವುದೇ ಸಾಲವನ್ನು ಪಡೆದಿಲ್ಲ.
ಕೇಂದ್ರ ಬಿಜೆಪಿ ಸರ್ಕಾರ ನಿರ್ಮಿಸಿದ ರಸ್ತೆ ಉದ್ಘಾಟನೆಗೆ ಸಜ್ಜು, ಕಾಂಗ್ರೆಸ್ ಜೆಡಿಎಸ್‌ಗೆ ಬೇಕಿದೆ ಶ್ರೇಯಸ್ಸು!
ಮೋದಿ ಏಕೈಕ ಸಂಭಾವನೆ ಪ್ರಧಾನಿ ವೇತನ. ಇದನ್ನು ಹೊರತ ಪಡಿಸಿದರೆ ಪ್ರಧಾನಿ ಮೋದಿಗೆ ಇತರ ಯಾವುದೇ ಮೂಲಗಳಿಂದ ಯಾವುದೇ ಆದಾಯವಿಲ್ಲ ಪ್ರಧಾನಿ ಮೋದಿಯ ಆಸ್ತಿ ವಿಚಾರ ಈಗಾಗಲೇ ಹಲವು ಭಾರಿ ಸದ್ದು ಮಾಡಿದೆ.ಇತ್ತ ಮೋದಿ ಜನಪ್ರಿಯತೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಮೋದಿ ನಾಯಕತ್ವದಲ್ಲಿ ಹೊಸ ಭಾರತ ನಿರ್ಮಾಣವಾಗುತ್ತಿದೆ. ವಿಶ್ವನಾಯಕರೇ ಇದೀಗ ಮೋದಿ ನಾಯಕತ್ವವನ್ನು ಮೆಚ್ಚಿಕೊಂಡಿದ್ದಾರೆ. ಇಷ್ಟೇ ಅಲ್ಲ ಹಲವು ದೇಶಗಳು ಸಮಸ್ಯೆಗಳಿಗೆ ಭಾರತ ಮಧ್ಯಪ್ರವೇಶಿಸಬೇಕು ಎಂದು ಬಯಸುತ್ತಿದೆ