ನೌಕರರ ಭವಿಷ್ಯ ನಿಧಿ ಸಂಘಟನೆ (EPFO) 2024-25ನೇ ಸಾಲಿಗೆ EPF ಮೇಲಿನ ಬಡ್ಡಿ ದರವನ್ನು 8.25% ನಲ್ಲಿಯೇ ಉಳಿಸಲು ನಿರ್ಧರಿಸಿದೆ. ಈ ನಿರ್ಧಾರವನ್ನು ಫೆಬ್ರವರಿ 28 ರಂದು ನಡೆದ ಸಭೆಯಲ್ಲಿ ತೆಗೆದುಕೊಳ್ಳಲಾಗಿದೆ.
PF Interest Rate : ಕೆಲಸ ಮಾಡುವ ಕೋಟ್ಯಂತರ ನೌಕರರಿಗೆ ಸಿಹಿ ಸುದ್ದಿ ಇದೆ. ಮಾರುಕಟ್ಟೆಯಲ್ಲಿನ ಕುಸಿತ ಮತ್ತು ಬಾಂಡ್ ಇಳುವರಿ ನಷ್ಟದ ನಡುವೆಯೂ ನೌಕರರ ಭವಿಷ್ಯ ನಿಧಿ ಸಂಘಟನೆ (EPFO) ಬಡ್ಡಿ ದರವನ್ನು 8.25% ನಲ್ಲಿಯೇ ಇರಿಸಲು ತೀರ್ಮಾನ ಮಾಡಿದೆ. ಫೆಬ್ರವರಿ 28 ರಂದು 2024-25ನೇ ಸಾಲಿನ ಬಡ್ಡಿ ದರದ (Interest Rate) ಬಗ್ಗೆ ನಡೆದ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಇಪಿಎಫ್‌ಒ 2024-25 ಕ್ಕೆ ನೌಕರರ ಭವಿಷ್ಯ ನಿಧಿ (EPF) ಠೇವಣಿಗಳ ಮೇಲೆ ಶೇಕಡಾ 8.25 ರಷ್ಟು ಬಡ್ಡಿಯನ್ನು ಪಡೆಯುವುದನ್ನು ಮುಂದುವರಿಸುತ್ತದೆ. ಫೆಬ್ರವರಿ 2024 ರಲ್ಲಿ, EPF ಮೇಲಿನ ಬಡ್ಡಿ ದರವನ್ನು 2022-23 ರಲ್ಲಿ 8.15% ರಿಂದ 2023-24 ಕ್ಕೆ 8.25% ಕ್ಕೆ ಹೆಚ್ಚಿಸಲಾಗಿತ್ತು.
ಮಾರ್ಚ್ 2022 ರಲ್ಲಿ EPFO, 2021-22 ಕ್ಕೆ EPF ಮೇಲಿನ ಬಡ್ಡಿದರವನ್ನು ನಾಲ್ಕು ದಶಕಗಳ ಕನಿಷ್ಠ ಮಟ್ಟವಾದ 8.1% ಕ್ಕೆ ಇಳಿಸಿತು, 2020-21 ರಲ್ಲಿ 8.5% ರಿಂದ ಇದು ಕೆಳಗೆ ಇಳಿಸಿತ್ತು. EPFO ದ ಅತ್ಯುನ್ನತ ನಿರ್ಧಾರ ತೆಗೆದುಕೊಳ್ಳುವ ಸಂಸ್ಥೆಯಾದ ಸೆಂಟ್ರಲ್ ಬೋರ್ಡ್ ಆಫ್ ಟ್ರಸ್ಟಿಗಳು (CBT) ಶುಕ್ರವಾರ ನಡೆದ ಸಭೆಯಲ್ಲಿ 2024-25 ಕ್ಕೆ EPF ಮೇಲೆ 8.25% ಬಡ್ಡಿದರವನ್ನು ನೀಡಲು ನಿರ್ಧರಿಸಿದೆ.
2020-21ರ ಸಾಲಿಗೆ EPF ನೀಡಿದ್ದ 8.1% ಬಡ್ಡಿದರವು 1977-78 ರ ನಂತರದ ಅತ್ಯಂತ ಕಡಿಮೆ ಎನಿಸಿತ್ತು. ಆಗ EPF ಬಡ್ಡಿದರವು 8% ರಷ್ಟಿತ್ತು. ಸರ್ಕಾರವು ಹಣಕಾಸು ಸಚಿವಾಲಯದ ಮೂಲಕ ಅನುಮೋದನೆ ನೀಡಿದ ನಂತರವೇ ಇಪಿಎಫ್‌ಒ ಬಡ್ಡಿದರವನ್ನು ನೀಡುತ್ತದೆ.
ಮಾರ್ಚ್ 2020 ರಲ್ಲಿ, ಇಪಿಎಫ್‌ಒ ಭವಿಷ್ಯ ನಿಧಿ ಠೇವಣಿಗಳ ಮೇಲಿನ ಬಡ್ಡಿದರವನ್ನು 2019-20 ಕ್ಕೆ ಏಳು ವರ್ಷಗಳ ಕನಿಷ್ಠ ಮಟ್ಟವಾದ 8.5% ಕ್ಕೆ ಇಳಿಸಿತ್ತು. ಅದಕ್ಕೂ ಹಿಂದಿ ವರ್ಷದಲ್ಲಿ ಅಂದರೆ, 2018-19 ಕ್ಕೆ ನೀಡಲಾದ 8.65% ರಿಂದ ಭಾರೀ ಪ್ರಮಾಣದಲ್ಲಿ ಕೆಳಗೆ ಇಳಿಸಿತ್ತು. ಇಪಿಎಫ್‌ಒ ತನ್ನ ಚಂದಾದಾರರಿಗೆ 2016-17 ರಲ್ಲಿ 8.65% ಮತ್ತು 2017-18 ರಲ್ಲಿ 8.55% ಬಡ್ಡಿದರವನ್ನು ನೀಡಿತ್ತು.
ಇಪಿಎಫ್‌ಎ ಪೆನ್ಶನ್ ಲೆಕ್ಕಾಚಾರ: 10 ವರ್ಷ ಕೆಲಸ ಮಾಡಿದ್ರೆ ಎಷ್ಟು ಪಿಂಚಣಿ ಸಿಗುತ್ತೆ?
2015-16 ರಲ್ಲಿ ಬಡ್ಡಿದರವು 8.8% ಕ್ಕೆ ಸ್ವಲ್ಪ ಹೆಚ್ಚಾಗಿತ್ತು. ನಿವೃತ್ತಿ ನಿಧಿ ಸಂಸ್ಥೆಯು 2013-14 ಮತ್ತು 2014-15 ರಲ್ಲಿ 8.75% ಬಡ್ಡಿದರವನ್ನು ನೀಡಿತು, ಇದು 2012-13 ಕ್ಕೆ 8.5% ಕ್ಕಿಂತ ಹೆಚ್ಚಾಗಿದೆ. 2011-12 ರಲ್ಲಿ ಬಡ್ಡಿದರವು 8.25% ಆಗಿತ್ತು.
