Asianet Suvarna News Asianet Suvarna News

‘ಶೀಘ್ರದಲ್ಲೇ ಪೆಟ್ರೋಲ್ ಬೆಲೆ ಗ್ಯಾರಂಟೀ 100 ರೂ. ಆಗತ್ತೆ’!

ಮೋದಿ ಸರ್ಕಾರದ ವಿರುದ್ಧ ಹರಿಹಾಯ್ದ ಆಂಧ್ರ ಸಿಎಂ! ತೈಲದರ ಏರಿಕೆಗೆ ಮೋದಿ ನೀತಿಯೇ ಕಾರಣ ಎಂದ ನಾಯ್ಡು! ಪೆಟ್ರೋಲ್ ಬೆಲೆ 100 ರೂ. ತಲುಪಿದರೂ ಅಚ್ಚರಿಯಿಲ್ಲ! ದೇಶದ ಅರ್ಥ ವ್ಯವಸ್ಥೆ ಪಾತಾಳಕ್ಕೆ ಕುಸಿದಿದೆ ಎಂದ ನಾಯ್ಡು
 

Petrol to be Rs 100 a litre: Chandrababu Naidu dig at centre
Author
Bengaluru, First Published Sep 4, 2018, 12:21 PM IST

ಹೈದರಾಬಾದ್(ಸೆ.4): ನೋಡ್ತಾ ಇರಿ ಶೀಘ್ರದಲ್ಲೇ ಪೆಟ್ರೋಲ್ ಬೆಲೆ ಲೀಟರ್ ಗೆ ನೂರು ರೂ. ಆಗುತ್ತೆ ಎಂದು ಆಂಧ್ರಪ್ರದೇಶ ಸಿಎಂ ಚಂದ್ರಬಾಬು ನಾಯ್ಡು ವ್ಯಂಗ್ಯವಾಡಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದಿರುವ ನಾಯ್ಡು, ದೇಶದ ಅರ್ಥ ವ್ಯವಸ್ಥೆ ತೀರ ಹದಗೆಡುತ್ತಿದ್ದು, ನಾವು ಎತ್ತ ಸಾಗುತ್ತಿದ್ದೇವೆ ಎಂಬ ಆತಂಕ ಎದುರಾಗಿದೆ ಎಂದು ಹೇಳಿದ್ದಾರೆ.

ಡಾಲರ್ ಎದುರು ರೂಪಾಯಿ ಮೌಲ್ಯ ನಿರಂತರ ಕುಸಿತ, ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ನಿರಂತರ ಏರಿಕೆಯಿಂದಾಗಿ ದೇಶದಲ್ಲಿ ಪೆಟ್ರೋಲ್ ಬೆಲೆ ಲೀಟರ್‌ಗೆ 100 ರೂ. ಆದರೂ ಅಚ್ಚರಿಪಡಬೇಕಿಲ್ಲ ಎಂದು ನಾಯ್ಡು ಅಭಿಪ್ರಾಯಪಟ್ಟಿದ್ದಾರೆ.

ಕಳೆದ ಎರಡು ವರ್ಷಗಳಲ್ಲಿ ದೇಶದ ಅರ್ಥ ವ್ಯವಸ್ಥೆ ಪಾತಾಳಕ್ಕೆ ಕುಸಿದಿದ್ದು, ಇದಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರ ಅಸಮರ್ಪಕ ಆರ್ಥಿಕ ನೀತಿಗಳೇ ಕಾರಣ ಎಂದು ನಾಯ್ಡು ಆರೋಪಿಸಿದ್ದಾರೆ. 

2014ರ ಲೋಕಸಭೆ ಚುನಾವಣೆ ಬಳಿಕ ಮೋದಿ ನೇತೃತ್ವದ ಎನ್ ಡಿಎ ಸರ್ಕಾರದ ಭಾಗವಾಗಿದ್ದ ಚಂದ್ರಬಾಬು ನಾಯ್ಡು ನೇತೃತ್ವದ ಟಿಇಡಿಪಿ, ಆಂಧ್ರಕ್ಕೆ ವಿಶೇಷ ಸ್ಥಾನಮಾನ ವಿಷಯದಲ್ಲಿ ಮನಸ್ತಾಪದ ಹಿನ್ನೆಯಲ್ಲಿ ಇತ್ತೀಚಿಗಷ್ಟೇ ಮೈತ್ರಿಕೂಟದಿಂದ ಹೊರ ಬಿದ್ದಿತ್ತು. 

Follow Us:
Download App:
  • android
  • ios