ಪೆಟ್ರೋಲ್‌ ಬೆಲೆ ಬೆಂಗಳೂರಲ್ಲಿ 70ಕ್ಕಿಂತ ಕೆಳಗೆ: 2018ರ ಕನಿಷ್ಠ| ಬೆಂಗಳೂರಲ್ಲಿ ಪೆಟ್ರೋಲ್‌ 69.82 ರು., ಡೀಸೆಲ್‌ಗೆ 63.67 ರು.

ನವದೆಹಲಿ[ಡಿ.30]: ಪ್ರತೀ ಲೀಟರ್‌ ಪೆಟ್ರೋಲ್‌ ಮತ್ತು ಡೀಸೆಲ್‌ ದರಗಳು ಕ್ರಮವಾಗಿ 30 ಪೈಸೆ ಮತ್ತು 32 ಪೈಸೆ ಇಳಿಕೆಯಾದ ಪರಿಣಾಮ ಸಿಲಿಕಾನ್‌ ಸಿಟಿ ಬೆಂಗಳೂರು ಸೇರಿದಂತೆ ದೇಶದ ವಿವಿಧ ಭಾಗಗಳಲ್ಲಿ ಉಭಯ ತೈಲಗಳ ಬೆಲೆ 2018ರ ಕನಿಷ್ಠ ದರ ದಾಖಲಿಸಿವೆ. ಪೆಟ್ರೋಲ್‌ ಬೆಲೆ ಇತ್ತೀಚಿನ ತಿಂಗಳಲ್ಲಿ ಇದೇ ಮೊದಲ ಬಾರಿ ಬೆಂಗಳೂರಲ್ಲಿ 70ರ ಗಡಿಗಿಂತ ಕೆಳಗೆ ಇಳಿದಿದೆ.

ಬೆಂಗಳೂರಿನಲ್ಲಿ ಶುಕ್ರವಾರ 70.11 ರು. ಇದ್ದ ಪೆಟ್ರೋಲ್‌ ದರ ಶನಿವಾರ 29 ಪೈಸೆ ಇಳಿದಿದ್ದು, 69.82 ರು.ಗೆ ನಿಗದಿಯಾಗಿತ್ತು. ಅದೇ ರೀತಿ 30 ಪೈಸೆ ಇಳಿಕೆಯಾಗಿರುವ ಡೀಸೆಲ್‌ ದರವು 63.67 ರು.ಗೆ ಇಳಿದಿತ್ತು. ಇನ್ನು ರಾಷ್ಟ್ರ ರಾಜಧಾನಿ ದೆಹಲಿಯಲ್ಲಿಯೂ 29 ಪೈಸೆ ಇಳಿಕೆಯಾದ ಪೆಟ್ರೋಲ್‌ ದರ 69.26 ರು.ಗೆ ನಿಗದಿಯಾಗಿತ್ತು.