Asianet Suvarna News Asianet Suvarna News

ಪೆಟ್ರೋಲ್ ದರ ಕೊಂಚ ಇಳಿಕೆ, ನಿಮ್ಮೂರಿನಲ್ಲೆಷ್ಟು?

ತೈಲವನ್ನು ಜಿಎಸ್ಟಿ ವ್ಯಾಪ್ತಿಗೆ ತರಬೇಕು ಎಂಬ ಮಾತುಗಳು ಒಂದು ಕಡೆ ಕೇಳಿಬರುತ್ತಿವೆ. ನಿರಂತರವಾಗಿ ಏರುತ್ತಿದ್ದ ತೈಲ ದರ ಕಳೆದ 15 ದಿನಗಳಲ್ಲಿ ಇಳಿಕೆ ಹಾದಿಯಲ್ಲೇ ಮುಂದುವರಿದಿದೆ. ಶುಕ್ರವಾರ ಸಹ ತೖಲ ದರದಲ್ಲಿ ಗಣನೀಯ ಇಳಿಕೆಯಾಗಿದೆ.

Petrol Prices Cut Up To 18 Paise, Diesel Stays Uniform, June 22

ನವದೆಹಲಿ (ಜೂ.22) ತೈಲವನ್ನು ಜಿಎಸ್ಟಿ ವ್ಯಾಪ್ತಿಗೆ ತರಬೇಕು ಎಂಬ ಮಾತುಗಳು ಒಂದು ಕಡೆ ಕೇಳಿಬರುತ್ತಿವೆ. ನಿರಂತರವಾಗಿ ಏರುತ್ತಿದ್ದ ತೈಲ ದರ ಕಳೆದ 15 ದಿನಗಳಲ್ಲಿ ಇಳಿಕೆ ಹಾದಿಯಲ್ಲೇ ಮುಂದುವರಿದಿದೆ. ಶುಕ್ರವಾರ ಸಹ ತೖಲ ದರದಲ್ಲಿ ಗಣನೀಯ ಇಳಿಕೆಯಾಗಿದೆ.

ಪೆಟ್ರೋಲ್ 18 ಪೖಸೆ ಇಳಿಕೆ ಕಂಡಿದ್ದರೆ ಡಿಸೇಲ್ ಯಥಾ ಸ್ಥಿತಿ ಕಾಪಾಡಿಕೊಂಡಿದೆ. ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಮಾತನಾಡಿತ್ತ ತೈಲದ ಮೇಲಿನ ಅಬಕಾರಿ ಸುಂಕ ಇಳಿಸಲು ಸಾಧ್ಯವಿಲ್ಲ ಎಂದಿದ್ದರು. ಆದರೂ ಸಹ ಅಂತಾರಾಷ್ಟ್ರೀಯ ಮಾರುಕಟ್ಟೆಯ ಆಧಾರದಲ್ಲಿ ತೖಲ ದರ ಇಳಿಕೆಯಾಗಿದೆ.

ಬೆಂಗಳೂರಿನಲ್ಲಿ ದರ ಎಷ್ಟಿದೆ? ಬೆಂಗಳೂರಿನಲ್ಲಿ ಲೀಟರ್ ಪೆಟ್ರೋಲ್ ಗೆ 77.25 ರೂ.ನೀಡಬೇಕು. ಅದೆ ಒಂದು ಲೀಟರ್ ಡೀಸೆಲ್ ಗೆ 68.73 ರೂ ನೀಡಬೇಕಿದೆ. ಬೆಂಗಳೂರಿಗೆ ಹೋಲಿಕೆ ಮಾಡಿದರೆ ಕೋಲ್ಕತ್ತಾ ಮತ್ತು ಮುಂಬೈನಲ್ಲಿ ಗ್ರಾಹಕರು ಹೆಚ್ಚಿನ ಹಣ ನೀಡಬೇಕಾಗಿದೆ.

Follow Us:
Download App:
  • android
  • ios