ನವದೆಹಲಿ :  ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರ ಇಳಿಕೆಯಾಗುತ್ತಿರುವ ನಿಟ್ಟಿನಲ್ಲಿ ಇದೀಗ ಮತ್ತೊಮ್ಮೆ ತೈಲ ದರ ಇಳಿದಿದೆ. 

ಪ್ರತೀ ಲೀಟರ್ ಪೆಟ್ರೋಲ್ ಮೇಲೆ 20 ಪೈಸೆ ಇಳಿದಿದ್ದು ಪ್ರತೀ ಲೀಟರ್ 19 ಪೈಸೆ ಇಳಿಕೆಯಾಗಿದೆ. ಸದ್ಯ ದಿಲ್ಲಿಯಲ್ಲಿ ಪೆಟ್ರೋಲ್ ದರ ಪ್ರತೀ ಲೀಟರ್ ಗೆ 76.52 ರು.ಗಳಿದ್ದು, ಡೀಸೆಲ್ ದರ 71.39ರು.ಗಳಾಗಿದೆ. 

ಕಳೆದ ಒಂದು ತಿಂಗಳಿನಿಂದ ನಿರಂತರವಾಗಿ ತೈಲ ದರ ಇಳಿಕೆಯಾಗುತ್ತಿದ್ದು ಇದುವರೆಗೂ ಒಟ್ಟು ಪೆಟ್ರೋಲ್ ದರ 6 ರು. ಹಾಗೂ ಡೀಸೆಲ್ ದರ 3 ರು ಇಳಿದಿದೆ. 

ಆಗಸ್ಟ್ ನಲ್ಲಿ ದೇಶದಲ್ಲಿ ಪೆಟ್ರೋಲ್ ಡೀಸೆಲ್ ದರ ಭಾರೀ ಪ್ರಮಾಣದಲ್ಲಿ ಏರಿಕೆಯಾಗಿ ಶಾಕ್ ನೀಡಿತ್ತು. ಆದರೆ ಇದೀಗ ನಿರಂತರವಾಗಿ ಇಳಿಯುತ್ತಿದ್ದು ಇದರಿಂದ ಗ್ರಾಹಕರ ಮೊಗದಲ್ಲಿ ಮಂದಹಾಸ ಮೂಡಿದೆ.