Drop in Petrol price: ರಾಷ್ಟ್ರರಾಜಧಾನಿಯಲ್ಲಿ ಪೆಟ್ರೋಲ್ ಬೆಲೆಯಲ್ಲಿಇಳಿಕೆ
ದೆಹಲಿ ವಾಹನ ಸವಾರರಿಗೆ ಡಿಸೆಂಬರ್ ತಿಂಗಳ ಮೊದಲ ದಿನವೇ ಸರ್ಕಾರ ಶುಭ ಸುದ್ದಿ ನೀಡಿದೆ. ಪೆಟ್ರೋಲ್ ಬೆಲೆಯಲ್ಲಿ ಲೀಟರ್ ಗೆ 8ರೂ. ಇಳಿಕೆ ಮಾಡಿದೆ. ದೆಹಲಿ ಸರ್ಕಾರ ಪೆಟ್ರೋಲ್ ಮೇಲಿನ ವ್ಯಾಟ್ ಕಡಿತಗೊಳಿಸಿದ ಕಾರಣ ಬೆಲೆಯಲ್ಲಿಇಳಿಕೆಯಾಗಿದೆ.
ನವದೆಹಲಿ (ಡಿ.1): ದೆಹಲಿ (Delhi) ಸರ್ಕಾರ ಪೆಟ್ರೋಲ್ (Petrol) ಮೇಲಿನ ವ್ಯಾಟ್ (VAT) ಅನ್ನು ಶೇ.30ರಿಂದ ಶೇ.19.40ಕ್ಕೆ ಇಳಿಕೆ ಮಾಡಿದೆ. ಇದ್ರಿಂದ ರಾಷ್ಟ್ರ ರಾಜ್ಯಧಾನಿಯಲ್ಲಿ ಪೆಟ್ರೋಲ್ ಬೆಲೆಯಲ್ಲಿ ಲೀಟರ್ ಗೆ 8ರೂ.ಇಳಿಕೆಯಾಗಿದೆ. ಹೊಸ ದರವು ಇಂದು (ಡಿ.1) ಮಧ್ಯರಾತ್ರಿಯಿಂದ ಜಾರಿಯಾಗಲಿದೆ. ಕಳೆದ 27 ದಿನಗಳಿಂದ ದೇಶಾದ್ಯಂತ ಪೆಟ್ರೋಲ್ ದರದಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ನವೆಂಬರ್ 4ರಂದು ಕೇಂದ್ರ ಸರ್ಕಾರ (Central Government) ಪೆಟ್ರೋಲ್ (Petrol) ಹಾಗೂ ಡೀಸೆಲ್ (Diesel) ಮೇಲಿನ ಅಬಕಾರಿ ಸುಂಕ(excise duty ) ಕಡಿತಗೊಳಿಸಿದ ಕಾರಣ ಗಣನೀಯ ಏರಿಕೆ ದಾಖಲಿಸಿದ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯಲ್ಲಿ ಸ್ಥಿರತೆ ಕಂಡುಬಂದಿತ್ತು. ಭಾರತೀಯ ತೈಲ ನಿಗಮದ ( Indian Oil Corporation) ಪ್ರಕಾರ ದೆಹಲಿಯಲ್ಲಿ ಪ್ರಸ್ತುತ ಪೆಟ್ರೋಲ್ ಬೆಲೆ ಲೀಟರ್ ಗೆ 103.9ರೂ. ಇದೆ. ಡೀಸೆಲ್ ಬೆಲೆ ಲೀಟರ್ ಗೆ 86.67ರೂ. ಇದೆ.
ಮುಂಬೈಯಲ್ಲಿ ಅಧಿಕ ದರ
ದೇಶದಲ್ಲಿ ಇತರ ಮಹಾನಗರಗಳಿಗೆ ಹೋಲಿಸಿದ್ರೆ ಮುಂಬೈಯಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಹೆಚ್ಚಿದೆ. ಮುಂಬೈಯಲ್ಲಿ(Mumbai) ಪೆಟ್ರೋಲ್ ದರ ಲೀಟರ್ ಗೆ 109.98ರೂ. ಇದ್ರೆ, ಡೀಸೆಲ್ ದರ ಲೀಟರ್ ಗೆ 94.14ರೂ. ಇದೆ. ಪೆಟ್ರೋಲ್ ಹಾಗೂ ಡೀಸೆಲ್ ದರ ದೇಶಾದ್ಯಂತ ಒಂದೇ ಆಗಿರೋದಿಲ್ಲ. ರಾಜ್ಯದಿಂದ ರಾಜ್ಯಕ್ಕೆ ಬದಲಾಗುತ್ತದೆ. ಇದಕ್ಕೆ ಕಾರಣ ರಾಜ್ಯ ಸರ್ಕಾರಗಳು ಇಂಧನದ ಮೇಲೆ ವಿಧಿಸೋ ತೆರಿಗೆಗಳು ಹಾಗೂ ವ್ಯಾಟ್. ಎಷ್ಟು ಶೇಕಡ ವ್ಯಾಟ್ ವಿಧಿಸಲಾಗಿದೆ ಎಂಬುದರ ಆಧಾರದ ಮೇಲೆ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯಲ್ಲಿ ಬದಲಾವಣೆಯಾಗುತ್ತದೆ. ಜೊತೆಗೆ ಡೀಲರ್ ಗಳ ಕಮೀಷನ್ ಕೂಡ ಬೆಲೆ ಮೇಲೆ ಪರಿಣಾಮ ಬೀರುತ್ತವೆ. ಇಂಧನಗಳ ಮೇಲೆ ವಿಧಿಸೋ ತೆರಿಗೆಗಳಿಂದ ಸರ್ಕಾರಕ್ಕೆ ದೊಡ್ಡ ಮೊತ್ತದ ಆದಾಯ ಸೃಷ್ಟಿಯಾಗುತ್ತದೆ. ಇದೇ ಕಾರಣಕ್ಕೆ ಸರ್ಕಾರಗಳು ತೆರಿಗೆ ಕಡಿತಗೊಳಿಸಲು ಹಿಂದೇಟು ಹಾಕುತ್ತವೆ. ಇನ್ನು ಪೆಟ್ರೋಲ್ ಹಾಗೂ ಡೀಸೆಲ್ ದರ ಪ್ರತಿದಿನ ಪರಿಷ್ಕರಣೆಗೊಳಪಡುತ್ತದೆ. ಸರ್ಕಾರಿ ಸ್ವಾಮ್ಯದ ಇಂಡಿಯನ್ ಆಯಿಲ್( Indian Oi), ಭಾರತ್ ಪೆಟ್ರೋಲಿಯಂ(Bharat Petroleum) ಹಾಗೂ ಹಿಂದೂಸ್ತಾನ ಪೆಟ್ರೋಲಿಯಂ( Hindustan Petroleum) ಪ್ರತಿದಿನ ಬೆಳಗ್ಗೆ 6 ಗಂಟೆಗೆ ಪೆಟ್ರೋಲ್ ದರವನ್ನು ಪರಿಷ್ಕರಣೆ ಮಾಡುತ್ತವೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ (Crude Oil) ಬೆಲೆ ಹಾಗೂ ರೂಪಾಯಿ-ಡಾಲರ್ ಎಕ್ಸ್ ಚೇಂಜ್ ದರವನ್ನು ಪರಿಗಣಿಸಿ ಪೆಟ್ರೋಲ್ ಬೆಲೆಯನ್ನು ಪ್ರತಿದಿನ ಪರಿಷ್ಕರಣೆ ಮಾಡಲಾಗುತ್ತದೆ.
ಬೆಲೆ ಏರಿಕೆ ಬಿಸಿ, ಗ್ಯಾಸ್ ಸಿಲಿಂಡರ್ ಬೆಲೆ ಮತ್ತೆ 103.50ರೂ. ಹೆಚ್ಚಳ!
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬೆಲೆಯೇರಿಕೆ
ಜಾಗತಿಕ ಮಾರುಕಟ್ಟೆಯಲ್ಲಿ ತೈಲ ಬೆಲೆ ಶೇ.2ಕ್ಕಿಂತ ಅಧಿಕ ಏರಿಕೆ ಕಂಡಿದೆ. ಈ ಹಿಂದಿನ ನಷ್ಟಗಳನ್ನು ತುಂಬಿಕೊಳ್ಳಲು ಕಚ್ಚಾ ತೈಲ ಪೂರೈಕೆದಾರರು ಬೆಲೆಯಲ್ಲಿ ಏರಿಕೆ ಮಾಡಿದ್ದಾರೆ. ಜಗತ್ತಿನಾದ್ಯಂತ ಓಮಿಕ್ರಾನ್ ವೈರಸ್ ಹಾವಳಿ ಹೆಚ್ಚುತ್ತಿದ್ದು, ಇಂಧ ಬೇಡಿಕೆಯ ಮೇಲೆ ಇದು ಹೇಗೆ ಪರಿಣಾಮ ಬೀರಲಿದೆ ಎಂಬ ಬಗ್ಗೆ ಪ್ರಮುಖ ತೈಲ ಉತ್ಪಾದಕರು ಚರ್ಚೆ ನಡೆಸಲು ಈಗಾಗಲೇ ಸಿದ್ಧತೆ ಮಾಡಿಕೊಂಡಿದ್ದಾರೆ. ಯುರೋಪ್ ತೈಲ ಮಾರುಕಟ್ಟೆ ಬ್ರೆಂಟ್ ಕ್ರೂಡ್ ಫ್ಯೂಚರ್ಸ್ (Brent crude futures) ಬುಧವಾರ (ಡಿ.1) ಪ್ರತಿ ಬ್ಯಾರಲ್ ಬೆಲೆಯಲ್ಲಿ ಶೇ.2.7 ಏರಿಕೆ ಮಾಡಿದೆ. ನಿನ್ನೆ (ನ.30)ಕ್ಕೆ ಪ್ರತಿ ಬ್ಯಾರಲ್ ಬೆಲೆಯಲ್ಲಿ ಶೇ.3.9 ಇಳಿಕೆಯಾಗಿತ್ತು. ಅದೇ ರೀತಿ ಅಮೆರಿಕದ ವೆಸ್ಟ್ ಟೆಕ್ಸಾಸ್ ಇಂಟರ್ಮೇಡಿಯೆಟ್ (WTI) ಬ್ಯಾರಲ್ ಗೆ ಶೇ.2.6ರಷ್ಟು ಏರಿಕೆ ಮಾಡಿದೆ. ನಿನ್ನೆ (ನ.30)ಕ್ಕೆ ಪ್ರತಿ ಬ್ಯಾರಲ್ ಬೆಲೆಯಲ್ಲಿ ಶೇ.5.4 ಇಳಿಕೆಯಾಗಿತ್ತು.
ಪೆಟ್ರೋಲ್, ಡೀಸೆಲ್ ಸುಂಕದಿಂದ ಕೇಂದ್ರ ಸರ್ಕಾರಕ್ಕೆ ಡಬಲ್ ಆದಾಯ!