* ಕೇಂದ್ರ ತೆರಿಗೆ ಕಡಿತವಾದರೂ ನಗರದಲ್ಲಿ .100 ರೊಳಗೆ ಇಳಿಯದ ಪೆಟ್ರೋಲ್!* ಮೂಲ ದರದಲ್ಲಿ ವ್ಯತ್ಯಾಸ* ಮತ್ತೆ 87 ಪೈಸೆ ಏರಿದ ಪೆಟ್ರೋಲ್ ಬೆಲೆ ಇದರಿಂದ 100ರೊಳಗೆ ಇಳಿಯದ ಬೆಲೆ
ಬೆಂಗಳೂರು(ಮೇ.23): ಕೇಂದ್ರ ಸರ್ಕಾರವು ಪ್ರತಿ ಲೀಟರ್ ಪೆಟ್ರೋಲ್ ಮೇಲಿನ ಅಬಕಾರಿ ಸುಂಕ .8 ಸೇರಿದಂತೆ .9.50 ತೆರಿಗೆ ಕಡಿತ ಕಡಿಮೆ ಮಾಡಿದ್ದರೂ ಪೆಟ್ರೋಲ್‌ನ ಮೂಲ ಬೆಲೆಯಲ್ಲಿ ಆದ ವ್ಯತ್ಯಾಸದಿಂದಾಗಿ ಬೆಂಗಳೂರಿನಲ್ಲಿ .100ಕ್ಕಿಂತ ಕಡಿಮೆ ಇರಬೇಕಿದ್ದ ಲೀಟರ್ ಪೆಟ್ರೋಲ್ ಬೆಲೆ ಭಾನುವಾರ .101.94 ಹಾಗೂ ಡೀಸೆಲ್ .87.89 ಗಳಷ್ಟಾಗಿದೆ.
ಶನಿವಾರ ಪ್ರತಿ ಲೀಟರ್‌ಗೆ .56.95 ರಷ್ಟಿದ್ದ ಪೆಟ್ರೋಲ್ ಮೂಲ ದರ ಭಾನುವಾರದ ವೇಳೆಗೆ 0.87 ಹೆಚ್ಚಳವಾಗಿ .57.82ಕ್ಕೆ ತಲುಪಿದೆ. ಹೆಚ್ಚಳವಾಗಿರುವ 0.87ಕ್ಕೆ ಶೇ.90ರಷ್ಟುತೆರಿಗೆ ಹೆಚ್ಚಳವೂ ಜತೆಯಾಗಿ ಒಂದೂವರೆ ರುಪಾಯಿಗೂ ಹೆಚ್ಚು ಬೆಲೆ ಹೆಚ್ಚಳವಾಗಿದೆ. ಈ ಮೂಲ ಬೆಲೆಗೆ ಕೇಂದ್ರದ ಅಬಕಾರಿ ಸುಂಕ, ರಾಜ್ಯದ ಮಾರಾಟ ತೆರಿಗೆ, ಡಿಸ್ಟ್ರಿಬ್ಯೂಟರ್ ಕಮಿಷನ್ ಎಲ್ಲವೂ ಸೇರ್ಪಡೆಯಾಗಿ ಪ್ರತಿ ಲೀಟರ್‌ಗೆ .101.94ಕ್ಕೆ ತಲುಪಿದೆ ಎಂದು ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ವಾಸ್ತವವಾಗಿ ಕೇಂದ್ರ ಸರ್ಕಾರ ಪ್ರತಿ ಲೀಟರ್ ಪೆಟ್ರೋಲ್ ಮೇಲೆ ಇಳಿಕೆ ಮಾಡಿರುವ .9.50 ತೆರಿಗೆಗೆ ರಾಜ್ಯ ಸರ್ಕಾರ ವಿಧಿಸುತ್ತಿದ್ದ ಶೇ.25.94ರಷ್ಟುತೆರಿಗೆ ಹೆಚ್ಚುವರಿಯಾಗಿ ಕಡಿತಗೊಳ್ಳಬೇಕು. ಇದರಂತೆ ಶನಿವಾರದವರೆಗೆ ಪ್ರತಿ ಲೀಟರ್ ಪೆಟ್ರೋಲ್‌ಗೆ .22.14 (ಕರ್ನಾಟಕ ಮಾರಾಟ ತೆರಿಗೆ - ಕೆಎಸ್‌ಟಿ) ವಿಧಿಸುತ್ತಿದ್ದ ರಾಜ್ಯ ಸರ್ಕಾರ ಭಾನುವಾರ ಈ ಪ್ರಮಾಣವನ್ನು .20.14ಕ್ಕೆ ಇಳಿಸಿದೆ. ತನ್ಮೂಲಕ ಕೇಂದ್ರದ ತೆರಿಗೆ ಇಳಿಕೆ ಜತೆಗೆ ರಾಜ್ಯದಲ್ಲೂ .2 ಹೆಚ್ಚುವರಿಯಾಗಿ ಇಳಿಕೆಯಾಗಿದೆ.
ಇನ್ನು ಕೇಂದ್ರವು ಪ್ರತಿ ಲೀಟರ್ ಡೀಸೆಲ್‌ಗೆ .6 ಇಳಿಕೆ ಮಾಡಿದೆ. ಈ .6ಕ್ಕೆ ಡೀಸೆಲ್ ಮೇಲೆ ರಾಜ್ಯ ಸರ್ಕಾರ ವಿಧಿಸುತ್ತಿದ್ದ ಮಾರಾಟ ತೆರಿಗೆ ಶೇ.14.34ರಷ್ಟುಹೆಚ್ಚುವರಿಯಾಗಿ ಕಡಿಮೆಯಾಗಿದ್ದು, ಪರಿಣಾಮ ಶನಿವಾರ ಪ್ರತಿ ಲೀಟರ್ ಡೀಸೆಲ್‌ಗೆ .11.61 ಗಳಷ್ಟಿದ್ದ ಕೆಎಸ್‌ಟಿ ಭಾನುವಾರ .10.68ಕ್ಕೆ ಇಳಿಕೆಯಾಗಿದೆ. ಪರಿಣಾಮ ಶನಿವಾರ .94.78 ರಷ್ಟಿದ್ದ ಪ್ರತಿ ಲೀಟರ್ ಡೀಸೆಲ್ ದರ ಭಾನುವಾರ .87.89ಕ್ಕೆ ಇಳಿಕೆಯಾಗಿದೆ.
ಮಾರಾಟ ತೆರಿಗೆ ಪರಿಷ್ಕರಣೆ: ಶಿಖಾ
ಪೆಟ್ರೋಲ್, ಡೀಸೆಲ್ ಮೇಲೆ ಕೇಂದ್ರ ಸರ್ಕಾರ ಅಬಕಾರಿ ಸುಂಕ ಕಡಿತಗೊಳಿಸಿರುವುದರಿಂದ ಕಡಿತಗೊಂಡಿರುವ ಸುಂಕದ ಮೊತ್ತದ ಮೇಲೆ ಅನ್ವಯವಾಗುತ್ತಿದ್ದ ಕರ್ನಾಟಕ ಮಾರಾಟ ತೆರಿಗೆಯನ್ನು ಪರಿಷ್ಕರಣೆ ಮಾಡಿದ್ದು, ಮಾರಾಟ ತೆರಿಗೆ ರಾಜ್ಯದಲ್ಲಿ ಹೆಚ್ಚುವರಿಯಾಗಿ ಕಡಿಮೆಯಾಗಿದೆ.
-ಸಿ.ಶಿಖಾ, ಆಯುಕ್ತೆ, ವಾಣಿಜ್ಯ ತೆರಿಗೆ ಇಲಾಖೆ.
ತೆರಿಗೆ ಲೆಕ್ಕಾಚಾರ ಹೇಗೆ?
ಕೇಂದ್ರ ಸುಂಕ ಕಡಿತ ಅನ್ವಯವಾಗುವ ಮೊದಲು ಶನಿವಾರ ಪ್ರತಿ ಲೀಟರ್ ಪೆಟ್ರೋಲ್ ಮೂಲ ಬೆಲೆ 56.95 ರು. ಇತ್ತು. ಇದರ ಮೇಲೆ ಕೇಂದ್ರ ಅಬಕಾರಿ ಸುಂಕ 27.90 ರು., ಎಫ್‌ಡಿಝಡ್ (ಫಿಕ್ಸ್$್ಡ ಡೆಲಿವರಿ ಜೋನ್), ಡೆಲಿವರಿ ಹಾಗೂ ಇತರೆ ಶುಲ್ಕ 0.52 ರು., ರಾಜ್ಯದ ಮಾರಾಟ ತೆರಿಗೆ (ಕೆಎಸ್‌ಟಿ) 22.14 ರು., ಡಿಸ್ಟ್ರಿಬ್ಯೂಟರ್‌ಗಳ ಕಮಿಷನ್ 3.56 ರು. ಸೇರಿ ಸೇರಿ ಒಟ್ಟು 111.07 ರು. ಇತ್ತು.
ಕೇಂದ್ರವು ಸುಂಕ ಕಡಿತಗೊಳಿಸಿದ ಬಳಿಕ ಅಂದರೆ ಭಾನುವಾರ ಪೆಟ್ರೋಲ್‌ನ ಮೂಲ ಬೆಲೆ ಲೀಟರ್‌ಗೆ 57.82 ರು., ಅಬಕಾರಿ ಸುಂಕ 19.90 ರು., ಎಫ್‌ಡಿಝಡ್ ಹಾಗೂ ಡೆಲಿವರಿ, ಇತರೆ ಶುಲ್ಕ 0.52 ರು., ಕೆಎಸ್‌ಟಿ 20.14 ರು., ಡಿಸ್ಟ್ರಿಬ್ಯೂಟರ್‌ಗಳ ಕಮಿಷನ್ 3.56 ರು. ಸೇರಿ ಒಟ್ಟಾರೆ 101.94 ರು. ಆಗಿದೆ.
ಇನ್ನು ಡೀಸೆಲ್ ಪೈಕಿ ಶನಿವಾರ ಪ್ರತಿ ಲೀಟರ್ ಡೀಸೆಲ್ ಮೂಲ ಬೆಲೆ 58.60 ರು., 21.80 ರು. ಕೇಂದ್ರದ ಅಬಕಾರಿ ಸುಂಕ, ಎಫ್‌ಡಿಝಡ್ ಹಾಗೂ ಡೆಲಿವರಿ ಶುಲ್ಕ ಇತರೆ 0.52 ರು., ಕೆಎಸ್‌ಟಿ 11.61 ರು., ಡಿಸ್ಟ್ರಿಬ್ಯೂಟರ್ ಕಮಿಷನ್ ಶುಲ್ಕ 2.24 ರು. ಸೇರಿ ಪ್ರತಿ ಲೀಟರ್‌ಗೆ 94.78 ರು. ಇತ್ತು.
ಪರಿಷ್ಕೃತ ತೆರಿಗೆ ಅನ್ವಯದ ಬಳಿಕ ಭಾನುವಾರ ಡೀಸೆಲ್‌ನ ಮೂಲ ಬೆಲೆ 58.66 ರು., ಕೇಂದ್ರ ಅಬಕಾರಿ ಸುಂಕ 15.80 ರು., ಎಫ್‌ಡಿಝಡ್ ಹಾಗೂ ಡೆಲಿವರಿ, ಇತರೆ ಶುಲ್ಕ 0.52 ರು., ಕೆಎಸ್‌ಟಿ 10.68 ರು., ಡಿಸ್ಟ್ರಿಬ್ಯೂಟರ್ ಕಮಿಷನ್ 2.23 ರು. ಸೇರಿ ಡೀಸೆಲ್ ಬೆಲೆ 87.89 ರು.ಗೆ ಇಳಿಕೆಯಾಗಿದೆ.
