ಮುಂಬೈ(ಸೆ.24): ವಾಣಿಜ್ಯ ನಗರಿ ಮುಂಬೈಯಲ್ಲಿ ಸೋಮವಾರ ಪ್ರತಿ ಲೀಟರ್ ಪೆಟ್ರೋಲ್ ಬೆಲೆ 90 ರೂ. ಗಡಿ ದಾಟಿದೆ. 

ಪೆಟ್ರೋಲ್ ಬೆಲೆ ಇಂದು 11 ಪೈಸೆಯಷ್ಟು ಏರಿಕೆಯಾಗಿದ್ದು, ಈ ಮೂಲಕ ಸಾರ್ವಕಾಲಿಕ ದಾಖಲೆ ಬರೆದಿದೆ. ದೇಶದಲ್ಲಿಯೇ ಅತೀ ಹೆಚ್ಚು ವ್ಯಾಟ್ ವಿಧಿಸುವ ಮುಂಬೈ ನಗರದಲ್ಲಿ ಪೆಟ್ರೋಲ್ ಬೆಲೆ 90 ರೂ ಆಗಿದೆ. 

ಇದೇ ವೇಳೆ  ಡೀಸೆಲ್ ದರ ಕೂಡ  78.58 ರೂ. ಮುಟ್ಟಿದೆ. ಶನಿವಾರ ಮುಂಬೈ ನಲ್ಲಿ ಪೆಟ್ರೋಲ್ ದರ ರೂ.89.97 ಹಾಗೂ ಡೀಸೆಲ್ ದರ ರೂ.78.53 ಇತ್ತು. ಇನ್ನು ರಾಜಧಾನಿ ದೆಹಲಿಯಲ್ಲಿಯೂ ಕೂಡ ಪೆಟ್ರೋಲ್ ದರ 11 ಪೈಸೆ ಏರಿಕೆಯಾಗಿದೆ. ಇದೀಗ ದೆಹಲಿಯಲ್ಲಿ ಪೆಟ್ರೋಲ್ ದರ 82.72 ರೂ. ರಷ್ಟಿದೆ. ಡೀಸೆಲ್ ದರ 5 ಪೈಸೆ ಹೆಚ್ಚಳವಾಗಿದೆ. ಪ್ರಸ್ತುತ ಡೀಸೆಲ್ ದರ 74.02 ರೂ. ತಲುಪಿದೆ.

ಇನ್ನು ಬೆಂಗಳೂರಿನಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಬೆಲೆ 83.37ರೂ. ಹಾಗೂ ಡೀಸೆಲ್ ಬೆಲೆ ಪ್ರತಿ ಲೀಟರ್ ಗೆ 74.40 ರೂ. ರಷ್ಟಿದೆ.