ಬೆಂಗಳೂರಿನಲ್ಲಿ ಮತ್ತಷ್ಟು ಇಳಿದಿದೆ ಪೆಟ್ರೋಲ್, ಡೀಸೆಲ್ ಬೆಲೆ!

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 4, Dec 2018, 1:41 PM IST
Petrol Cheaper In Delhi  Fuel Prices Continue To Tumble
Highlights

ಕಳೆದ ಎರಡು ತಿಂಗಳಿನಿಂದ ನಿರಂತರವಾಗಿ ಪೆಟ್ರೋಲ್, ಡೀಸೆಲ್ ದರ ಇಳಿಯುತ್ತಿದ್ದು,  ಇದೀಗ ಮತ್ತೊಮ್ಮೆ ಬೆಲೆ ಕಡಿತವಾಗಿದೆ. 

ನವದೆಹಲಿ : ಕೆಲವು ದಿನಗಳ ಕಾಲ ನಿರಂತರವಾಗಿ ಏರಿಕೆ ಕಂಡಿದ್ದ ಪೆಟ್ರೋಲ್, ಡೀಸೆಲ್ ಬಲೆ ಇದೀಗ ಇಳಿಮುಖದ ಹಾದಿಯಲ್ಲಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಕುಸಿಯುತ್ತಿರುವುದರಿಂದ, ಸತತವಾಗಿ ತೈಲ ಬೆಲೆ ಇಳಿಯುತ್ತಿದ್ದು, ಬೆಂಗಳೂರಿನಲ್ಲಿಯೂ ಕಳೆದ ಹತ್ತು ತಿಂಗಳಲ್ಲಿಯೇ ಪೆಟ್ರೋಲ್, ಡೀಸೆಲ್ ಬೆಲೆ ಕನಿಷ್ಠವಾಗಿದೆ.

ಮಂಗಳವಾರ ರಾಷ್ಟ್ರ ರಾಜಧಾನಿ ದಿಲ್ಲಿಯಲ್ಲಿ ಪೆಟ್ರೋಲ್ ದರ  21 ಪೈಸೆ ಇಳಿದಿದ್ದು, ಇದರಿಂದ ಪ್ರತೀ ಲೀಟರ್ ಗೆ  71.72 ರು.ಗಳಾಗಿದೆ. ಇನ್ನು ಡೀಸೆಲ್ ದರ 27 ಪೈಸೆ ಇಳಿಕೆಯಾಗಿದ್ದು ಇದರಿಂದ ಪ್ರತೀ ಲೀಟರ್ ಡೀಸೆಲ್ ಬೆಲೆ 66.39 ರು.ಗಳಷ್ಟಾಗಿದೆ.  

ಇನ್ನು ವಾಣಿಜ್ಯ ನಗರಿ ಮುಂಬೈನಲ್ಲಿಯೂ ಕೂಡ ಪೆಟ್ರೋಲ್ ಡೀಸೆಲ್ ದರದಲ್ಲಿ ಇಳಿಕೆಯಾಗಿ ಪ್ರತೀ ಲೀಟರ್ ಪೆಟ್ರೋಲ್ ದರ 77.29, ಡೀಸೆಲ್ ದರ 69.48 ರುಗಳಾಗಿದೆ. ಬೆಂಗಳೂರಿನಲ್ಲಿಯೂ ದರ ಇಳಿಕೆಯಾಗಿದ್ದು, ಪ್ರತೀ ಲೀಟರ್ ಪೆಟ್ರೋಲ್ ಬೆಲೆ 72. 79 ಹಾಗೂ ಪ್ರತೀ ಲೀಟರ್ ಡೀಸೆಲ್ ಬೆಲೆ 67 ರು.ಗಳಾಗಿದೆ. 90ರು.ಗಳಿಗೂ ಹೆಚ್ಚಾಗಿದ್ದ ಪೆಟ್ರೋಲ್ ಬೆಲೆ ಇದೀಗ 70 ರು.ಗಳ ಆಸು ಪಾಸಿಗೆ ತಲುಪಿದೆ. 

ಸೆಪ್ಟೆಂಬರ್ ತಿಂಗಳಲ್ಲಿ ದರ ಏರಿಕೆ ಬಿಸಿಯಿಂದ ಕಂಗಾಲಾಗಿದ್ದ ಗ್ರಾಹಕರಿಗೆ ಕಳೆದ 50 ದಿನಗಳಿಂದ ನಿರಂತರವಾಗಿ ಇಳಿಕೆಯಾಗುತ್ತಿರುವ  ತೈಲ ದರವು  ರಿಲೀಫ್ ನೀಡಿದೆ. 

loader