ಹಬ್ಬದ ಸಂದರ್ಭದಲ್ಲಿ ಜನತೆಗೆ ನೆಮ್ಮದಿ ತಂದ ಕೇಂದ್ರ! ಪೆಟ್ರೋಲ್, ಡೀಸೆಲ್ ದರದಲ್ಲಿ ತುಸು ಇಳಿಕೆ ಮಾಡಿದ ಸರ್ಕಾರ! ಆಗಸದತ್ತ ಮುಖ ಮಾಡಿದ್ದ ತೈಲದರಗಳು! ಪೆಟ್ರೋಲ್ 21 ಪೈಸೆ ಮತ್ತು ಡೀಸೆಲ್ ದರದಲ್ಲಿ 11 ಪೈಸೆಯಷ್ಟು ಇಳಿಕೆ

ನವದೆಹಲಿ(ಅ.18): ಹಬ್ಬದ ನಿಮಿತ್ತ ಕೇಂದ್ರ ಸರ್ಕಾರ ಜನತೆಗೆ ಕೊಂಚ ನೆಮ್ಮದಿ ನೀಡಿದ್ದು, ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ತುಸು ಇಳಿಕೆ ಮಾಡಿದೆ.

ನಿರಂತರವಾಗಿ ಆಗಸದತ್ತ ಮುಖ ಮಾಡಿದ್ದ ತೈಲೋತ್ಪನ್ನಗಳ ದರ ಕೊನೆಗೂ ಅಲ್ಪ ಪ್ರಮಾಣದಲ್ಲಿ ಇಳಿಕೆಯಾಗಿದೆ.

Scroll to load tweet…

ದೇಶದ ಪ್ರಮುಖ ಮಹಾನಗರಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರ ಅಲ್ಪ ಪ್ರಮಾಣದಲ್ಲಿ ಇಳಿಕೆಯಾಗಿದ್ದು, ಪ್ರತೀ ಲೀಟರ್ ಪೆಟ್ರೋಲ್ ದರದಲ್ಲಿ 21 ಪೈಸೆ ಮತ್ತು ಡೀಸೆಲ್ ದರದಲ್ಲಿ 11 ಪೈಸೆಯಷ್ಟು ಇಳಿಕೆ ಕಂಡುಬಂದಿದೆ.

ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಪ್ರತೀ ಲೀಟರ್ ಪೆಟ್ರೋಲ್ ದರ 82.62ರೂ. ಗೆ ಇಳಿಕೆಯಾಗಿದ್ದು, ಡೀಸೆಲ್ ದರ 75.58 ರೂ.ಗೆ ಇಳಿಕೆಯಾಗಿದೆ. ಇನ್ನು ವಾಣಿಜ್ಯ ರಾಜಧಾನಿ ಮುಂಬೈನಲ್ಲಿ ಪೆಟ್ರೋಲ್ 88.08 ರೂ ಮತ್ತು ಡೀಸೆಲ್ 79.24 ರೂಗೆ ಇಳಿಕೆಯಾಗಿದೆ.