13 ದಿನಗಳ ಬಳಿಕ ಸ್ಥಿತ್ಯಂತರ ಕಂಡ ಪೆಟ್ರೋಲ್, ಡೀಸೆಲ್ ದರ! ಇಂದು ತೈಲದರದಲ್ಲಿ ಯಾವುದೇ ಬದಲಾವಣೆ ಇಲ್ಲ! ದೇಶದ ಮಹಾನಗರಗಳಲ್ಲಿ ಬದಲಾವಣೆ ಕಾಣದ ಪೆಟ್ರೋಲ್, ಡೀಸೆಲ್ ದರ

ನವದೆಹಲಿ(ಅ.31): ಸತತ 13 ದಿನಗಳಿಂದ ಇಳಿಕೆಯತ್ತ ಮುಖ ಮಾಡಿದ ತೈಲದರ ಇಂದು ಯಾವುದೇ ಬದಲಾವಣೆ ಕಾಣದೆ ಸ್ಥಿತ್ಯಂತರವಾಗಿದೆ. ದೇಶದ ಮಹಾನಗರಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರದಲ್ಲಿ ಯಾವುದೇ ಬದಲಾವಣೆಯಾಗಿಲ್ಲ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಈ ಹಿನ್ನೆಲೆಯಲ್ಲಿ ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಪೆಟ್ರೋಲ್ ದರ ನಿನ್ನೆಯಷ್ಟೇ ಅಂದರೆ 79.55 ರೂ. ಆಗಿದೆ. ಅದರಂತೆ ವಾಣಿಜ್ಯ ರಾಜಧಾನಿ ಮುಂಬೈನಲ್ಲಿ 85.04 ರೂ. ಆಗಿದೆ.

ಆದರೆ ಡೀಸೆಲ್ ದರದಲ್ಲಿ ಕೊಂಚ ಇಳಿಕೆ ಕಂಡು ಬಂದಿದ್ದು, ಡೀಸೆಲ್ ದರದಲ್ಲಿ 7 ಪೈಸೆಯಷ್ಟು ಇಳಿಕೆ ಕಂಡು ಬಂದಿದೆ. ಅದರಂತೆ ನವದೆಹಲಿಯಲ್ಲಿ ಡೀಸೆಲ್ ದರ 73.78 ರೂ. ಮುಂಬೈನಲ್ಲಿ 77.32 ರೂ. ಇದೆ.

ಇನ್ನು ಚೆನ್ನೈನಲ್ಲಿ ಪೆಟ್ರೋಲ್ ದರ 82.65 ರೂ. ಮತ್ತು ಡೀಸೆಲ್ ದರ 78 ರೂ. ಆಗಿದೆ. ಅದರಂತೆ ಕೋಲ್ಕತ್ತಾದಲ್ಲಿ ಪೆಟ್ರೋಲ್ ದರ 81.43 ರೂ. ಮತ್ತು ಡೀಸೆಲ್ ದರ 75.63 ರೂ. ಇದೆ.

ಇನ್ನು ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಪೆಟ್ರೋಲ್ ದರ 80.17 ರೂ. ಇದ್ದು, ಡೀಸೆಲ್ ದರ 74.16 ರೂ. ಇದೆ.