ನವದೆಹಲಿ(ಡಿ.06): ನಿನ್ನೆ ಯಾವುದೇ ಬದಲಾವಣೆ ಕಾಣದೆ ಸ್ಥಿರವಾಗಿದ್ದ ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಇಂದು ಮತ್ತೆ ಇಳಿಕೆ ಕಂಡು ಬಂದಿದೆ. ದೇಶದ ಮಹಾನಗರಗಳಲ್ಲಿ ಇಂದು ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಗಮನಾರ್ಹ ಇಳಿಕೆ ಕಂಡು ಬಂದಿದೆ.

ದೇಶದ ಮಹಾನಗರಗಳಲ್ಲಿ ಪೆಟ್ರೋಲ್ ಬೆಲೆ 39-42 ಪೈಸೆ ಇಳಿಕೆಯಾಗಿದ್ದು, ಡೀಸೆಲ್ ಬೆಲೆಯಲ್ಲಿ 42-46 ಪೈಸೆ ಇಳಿಕೆ ಕಂಡು ಬಂದಿದೆ. ಅದರಂತೆ ದೇಶದ ಮಹಾನಗರಗಳಲ್ಲಿ ಇಂದಿನ ಪೆಟ್ರೋಲ್, ಡೀಸೆಲ್ ಬೆಲೆಯತ್ತ ಗಮನಹರಿಸುವುದಾದರೆ..


ರಾಷ್ಟ್ರ ರಾಜಧಾನಿ ನವದೆಹಲಿ-

ಪೆಟ್ರೋಲ್ ದರ: 71.32 ರೂ.

ಡೀಸೆಲ್ ದರ: 65.96 ರೂ.

ವಾಣಿಜ್ಯ ರಾಜಧಾನಿ ಮುಂಬೈ-

ಪೆಟ್ರೋಲ್ ದರ: 76.90 ರೂ.

ಡೀಸೆಲ್ ದರ: 69.09 ರೂ.

ಪ.ಬಂಗಾಳ ರಾಜಧಾನಿ ಕೋಲ್ಕತ್ತಾ-

ಪೆಟ್ರೋಲ್ ದರ: 73.99 ರೂ.

ಡೀಸೆಲ್ ದರ: 69.63 ರೂ.

ತಮಿಳುನಾಡು ರಾಜಧಾನಿ ಚೆನ್ನೈ-

ಪೆಟ್ರೋಲ್ ದರ: 73.36 ರೂ.

ಡೀಸೆಲ್ ದರ: 67.63 ರೂ.

ರಾಜ್ಯ ರಾಜಧಾನಿ ಬೆಂಗಳೂರು-

ಪೆಟ್ರೋಲ್ ದರ: 71.87 ರೂ.

ಡೀಸೆಲ್ ದರ: 66.30  ರೂ.

ಒಟ್ಟಿನಲ್ಲಿ ಈ ಹಿಂದೆ ತಜ್ಞರು ಅಂದಾಜಿಸದಂತೆ ಡಿಸೆಂಬರ್ ತಿಂಗಳಲ್ಲಿ ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಗಮನಾರ್ಹ ಇಳಿಕೆಯಾಘುತ್ತಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ಇಳಿಕೆಯಾಗುವ ಆಶಾಭಾವನೆ ಮೂಡಿದೆ.