ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಜೊತೆಗಿನ ಒಪ್ಪಂದ ಕಡಿದುಕೊಂಡ ಪೇಟಿಎಂ; ಬಿಎಸ್ ಇ ಫೈಲ್ಲಿಂಗ್ ನಲ್ಲಿ ಮಾಹಿತಿ ಬಹಿರಂಗ

ಪೇಟಿಎಂ ಪಾವತಿ ಆಪ್ ಬಳಕೆದಾರರನ್ನು ಉಳಿಸಿಕೊಳ್ಳಲು ಮುಂದಾಗಿರುವ ಒನ್ 97 ಕಮ್ಯೂನಿಕೇಷನ್ ಲಿಮಿಟೆಡ್ , ವಿವಿಧ ಅಂತರ-ಕಂಪನಿ ಒಪ್ಪಂದಗಳನ್ನು ಸ್ಥಗಿತಗೊಳಿಸೋದಾಗಿ ಶುಕ್ರವಾರ ಮಾಹಿತಿ ನೀಡಿದೆ. ಇದರಿಂದ ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಜೊತೆಗಿನ ಒಪ್ಪಂದವನ್ನು ಪೇಟಿಎಂ ಕಡಿದುಕೊಂಡಂತಾಗಿದೆ. 

Paytm cuts ties with Paytm Payments Bank ends inter company pacts after RBIs crackdown anu

ನವದೆಹಲಿ (ಮಾ.1): ಪೇಟಿಎಂ ಹಾಗೂ ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಲಿಮಿಟೆಡ್ (ಪಿಪಿಬಿಎಲ್) ಮಾತೃಸಂಸ್ಥೆ ಒನ್ 97 ಕಮ್ಯೂನಿಕೇಷನ್ ಲಿಮಿಟೆಡ್ ವಿವಿಧ ಅಂತರ-ಕಂಪನಿ ಒಪ್ಪಂದಗಳನ್ನು ಸ್ಥಗಿತಗೊಳಿಸೋದಾಗಿ ಶುಕ್ರವಾರ ಮಾಹಿತಿ ನೀಡಿದೆ. ಇದರಿಂದ ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಜೊತೆಗಿನ ಒಪ್ಪಂದವನ್ನು ಪೇಟಿಎಂ ಕಡಿದುಕೊಂಡಿದೆ. ಪೇಟಿಎಂ ಪಾವತಿ ಆಪ್ ಬಳಕೆದಾರರನ್ನು ಉಳಿಸಿಕೊಳ್ಳಲು ಈ ನಿರ್ಧಾರ ಕೈಗೊಂಡಿರುವ ಸಾಧ್ಯತೆಯಿದೆ. ಬಾಂಬೈ ಸ್ಟಾಕ್ ಎಕ್ಸ್ ಚೇಂಜ್ ಫೈಲ್ಲಿಂಗ್ ನಲ್ಲಿ ಕಂಪನಿ ಈ ವಿಚಾರ ತಿಳಿಸಿದೆ. ಭಾರತೀಯ ರಿಸರ್ವ್ ಬ್ಯಾಂಕ್ ಇತ್ತೀಚೆಗೆ ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಮೇಲೆ ನಿರ್ಬಂಧಗಳನ್ನು ವಿಧಿಸಿತ್ತು. ಅಲ್ಲದೆ, ಮಾ.15ರ ನಂತರ ಗ್ರಾಹಕರ ಖಾತೆಗಳು ಹಾಗೂ ವ್ಯಾಲೆಟ್‌ಗಳಿಗೆ ಹಣ ಸ್ವೀಕರಿಸದಂತೆ,ಹೊಸ ಖಾತೆ ಅಥವಾ ಹೊಸ ಠೇವಣಿ ಪ್ರಾರಂಭಿಸದಂತೆ ಪೇಟಿಎಂ ಬ್ಯಾಂಕ್‌ಗೆ ನಿರ್ಬಂಧ ಹೇರಿದೆ. ಇನ್ನೂ ಕೆಲವು ತಿಂಗಳುಗಳ ಕಾಲ ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಆರ್ ಬಿಐ ನಿಗಾದಲ್ಲೇ ಇರಲಿದೆ. ಹೀಗಾಗಿ ಕಂಪನಿ ಪೇಟಿಎಂ ವ್ಯಾಲೆಟ್ ನ  ಕಾರ್ಯನಿರ್ವಹಣೆ ಮೇಲೆ ಇದು ಯಾವುದೇ ಪರಿಣಾಮ ಬೀರದಂತೆ ತಡೆಯಲು ಇವೆರಡರ ನಡುವಿನ ಸಂಪರ್ಕ ಕಡಿತಕ್ಕೆ ಮುಂದಾಗಿದೆ. ಅಲ್ಲದೆ, ಇತರ ಬ್ಯಾಂಕ್ ಗಳ ಜೊತೆಗೆ ಹೊಸ ಒಪ್ಪಂದಕ್ಕೆ ಸಹಿ ಹಾಕುವ ಜೊತೆಗೆ ಗ್ರಾಹಕರು ಹಾಗೂ ವ್ಯಾಪಾರಿಗಳಿಗೆ ಅಡಚಣೆರಹಿತ ವಹಿವಾಟುಗಳನ್ನು ಒದಗಿಸೋದಾಗಿ ಕಂಪನಿ ಈ ಹಿಂದೆಯೇ ಮಾಹಿತಿ ನೀಡಿತ್ತು.

'ಅವಲಂಬನೆ ತಗ್ಗಿಸುವ ಪ್ರಕ್ರಿಯೆಯ ಭಾಗವಾಗಿ ಪೇಟಿಎಂ ಹಾಗೂ ಪಿಪಿಬಿಎಲ್ ನಡುವಿನ  ವಿವಿಧ ಅಂತರ ಕಂಪನಿ ಒಪ್ಪಂದಗಳನ್ನು ಸ್ಥಗಿತಗೊಳಿಸುವ ಒಮ್ಮತದ ತೀರ್ಮಾನಕ್ಕೆ ಬರಲಾಗಿದೆ ಎಂದು ಬಿಎಸ್ ಇ ಫೈಲ್ಲಿಂಗ್ ನಲ್ಲಿ ಒನ್ 97 ಕಮ್ಯೂನಿಕೇಷನ್ ಲಿಮಿಟೆಡ್ ತಿಳಿಸಿದೆ. ಪಿಪಿಬಿಎಲ್ ಆಡಳಿತ, ಅದರ ಷೇರುದಾರರ ಸ್ವಾತಂತ್ರ್ಯವನ್ನು ಬೆಂಬಲಿಸಲು ಷೇರುದಾರರ ಒಪ್ಪಂದ (SHA)ಸರಳಗೊಳಿಸಲು ಪಿಪಿಬಿಎಲ್ ಷೇರುದಾರರು ಒಪ್ಪಿಗೆ ಸೂಚಿಸಿದ್ದಾರೆ. '2024ರ ಮಾರ್ಚ್1ರಂದು ಒಪ್ಪಂದಗಳ ಮುಕ್ತಾಯ ಹಾಗೂ ಎಸ್ ಎಚ್ ಎ ತಿದ್ದುಪಡಿಗೆ ಒಸಿಎಲ್ ಮಂಡಳಿ  ಅನುಮೋದನೆ ನೀಡಿದೆ' ಎಂದು ಫೈಲ್ಲಿಂಗ್ ನಲ್ಲಿ ತಿಳಿಸಲಾಗಿದೆ.

ನೀವು ಪಾವತಿಗೆ ಪೇಟಿಎಂ UPI ಬಳಸುತ್ತಿದ್ದೀರಾ? ಹಾಗಾದರೆ ನಿಮಗಿದೆ ಆರ್‌ಬಿಐ ಸಂದೇಶ!

ಪೇಟಿಎಂ ಆಪ್, ಪೇಟಿಎಂ ಸೌಂಡ್ ಬಾಕ್ಸ್, ಪೇಟಿಎಂ ಕ್ಯುಆರ್ ಹಾಗೂ ಪೇಟಿಎಂ ಕಾರ್ಡ್ ಮಷಿನ್ ಗಳು ಮಾರ್ಚ್ 15ರ ಬಳಿಕವೂ ಕಾರ್ಯನಿರ್ವಹಿಸಲಿವೆ. ಈ ಬಗ್ಗೆ ಈಗಾಗಲೇ ಆರ್ ಬಿಐ ಕೂಡ ಸ್ಪಷ್ಟನೆ ನೀಡಿದೆ.  ಮಾ.15ರ ನಂತರ ಗ್ರಾಹಕರ ಖಾತೆಗಳು ಹಾಗೂ ವ್ಯಾಲೆಟ್‌ಗಳಿಗೆ ಹಣ ಸ್ವೀಕರಿಸದಂತೆ ಪೇಟಿಎಂ ಬ್ಯಾಂಕ್‌ಗೆ ನಿರ್ಬಂಧ ಹೇರಿರುವ ರಿಸರ್ವ್‌ ಬ್ಯಾಂಕ್, ಪೇಟಿಎಂ ಆ್ಯಪ್‌ನ ಮೂಲಕ ಯುಪಿಐ ಸೇವೆ ಮುಂದುವರಿಕೆಯಾಗುವಂತೆ ನೋಡಿಕೊಳ್ಳಲು ನೆರವಾಗುವಂತೆ ನ್ಯಾಷನಲ್‌ ಪೇಮೆಂಟ್ಸ್‌ ಕಾರ್ಪೋರೆಷನ್‌ (ಎನ್‌ಪಿಸಿಐ)ಗೆ ಸೂಚಿಸಿದೆ. ಯುಪಿಐ ಗ್ರಾಹಕರು ತಡೆರಹಿತ ಸೇವೆಯನ್ನು ಪಡೆಯುವ ಸಲುವಾಗಿ ‘ಥರ್ಡ್ ಪಾರ್ಟಿ ಅಪ್ಲಿಕೇಷನ್‌ ಪ್ರೊವೈಡರ್‌’ ಆಗುವ ಬೇಡಿಕೆಯನ್ನು ಪರಿಶೀಲಿಸುವಂತೆ ರಿಸರ್ವ್‌ ಬ್ಯಾಂಕ್‌ ನಿರ್ದೇಶಿಸಿದೆ. 

ಹಾಲಿ ಇರುವ ಠೇವಣಿದಾರರು ಹಣ ವಾಪಸು ಪಡೆಯಲು ಯಾವುದೇ ನಿರ್ಬಂಧ ಇರುವುದಿಲ್ಲ. ಪೇಟಿಎಂ ಬ್ಯಾಂಕ್‌ ಕೆವೈಸಿ ನಿಯಮ ಪಾಲಿಸಿಲ್ಲ ಹಾಗೂ ಅಕ್ರಮ ಹಣ ವರ್ಗ ಮಾಡಿದೆ ಎಂದು ಆರೋಪಿಸಿ ಆರ್‌ಬಿಐ ನಿರ್ಬಂಧ ಹೇರಿದೆ. ಈಗಾಗಲೇ ಪೇಟಿಎಂ ಫಾಸ್ಟ್ಯಾಗ್‌ನ್ನು ಇಂಡಿಯನ್‌ ಹೈವೇಸ್‌ ಮ್ಯಾನೇಜ್‌ಮೆಂಟ್‌ ಕಂಪನಿ ಲಿ. (ಐಎಚ್‌ಎಂಸಿಎಲ್‌) ಅಧಿಕೃತ ಬ್ಯಾಂಕ್ ಪಟ್ಟಿಯಿಂದ ತೆಗೆದು ಹಾಕಿದೆ. ಮಾರ್ಚ್ 15ರ ಬಳಿಕ ಪೇಟಿಎಂ ಫಾಸ್ಟ್ಯಾಗ್ ನಿಷ್ಕ್ರೀಯಗೊಳ್ಳಲಿದೆ. 

ಮಾ.15ರ ಬಳಿಕವೂ ಕಾರ್ಯನಿರ್ವಹಿಸಲಿದೆ ಪೇಟಿಎಂ ಕ್ಯುಆರ್ ಕೋಡ್, ಸೌಂಡ್ ಬಾಕ್ಸ್ : ಸಿಇಒ ವಿಜಯ್ ಶಂಕರ್ ಶರ್ಮಾ ಸ್ಪಷ್ಟನೆ

ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಅಧ್ಯಕ್ಷ ಹಾಗೂ ಮಂಡಳಿಯ ಸದಸ್ಯ ಸ್ಥಾನದಿಂದ ವಿಜಯ್‌ ಶೇಖರ್‌ ಶರ್ಮ ಇತ್ತೀಚೆಗೆ ಕೆಳಗಿಳಿದಿದ್ದಾರೆ.  ಪೇಟಿಎಂ ಪೇಮೆಂಟ್ಸ್‌ ಬ್ಯಾಂಕ್‌ನ ಬಹುಪಾಲು ಷೇರುಗಳು ಇದರ ಸಂಸ್ಥಾಪಕರೂ ಆಗಿರುವ ವಿಜಯ್‌ ಶೇಖರ್‌ ಶರ್ಮ ಅವರ ಬಳಿಯಲ್ಲಿಯೇ ಇವೆ. ಒನ್‌ 97 ಕಮ್ಯುನಿಕೇಷನ್‌ನ ಮಾಲೀಕತ್ವದಲ್ಲಿರುವ ಪೇಟಿಎಂ ಪೇಮೆಂಟ್ಸ್‌ ಬ್ಯಾಂಕ್‌ ಈಗಾಗಲೇ ತನ್ನ ನಿರ್ದೇಶಕರ ಮಂಡಳಿಯನ್ನು ಪುನರ್‌ರಚನೆ ಮಾಡುತ್ತಿರುವುದಾಗಿ ತಿಳಿಸಿದೆ. 


 

Latest Videos
Follow Us:
Download App:
  • android
  • ios