ವೈಯಕ್ತಿಕವಾಗಿ 1 ಕೋಟಿ ಆದಾಯವಿರುವವರು 48,416 ರಿಂದ 81,344 ಹೆಚ್ಚಾಗಿದ್ದಾರೆ. ಇದು ಶೇಕಡವಾರು ಪ್ರಮಾಣ ಶೇ.68 ಏರಿಕೆಯಾಗಿದೆ. ಆದಾಯ ತೆರಿಗೆ ರಿಟರ್ನ್ಸ್ ಪಾವತಿಸುವವರು ಶೇ.80 ಹೆಚ್ಚಳವಾಗಿದ್ದು 4 ಹಣಕಾಸು ವರ್ಷಗಳಲ್ಲಿ 6.85 ಕೋಟಿ ಮಂದಿ ತೆರಿಗೆ ಪಾವತಿಸಿದ್ದಾರೆ.

ನವದೆಹಲಿ[ಅ.22]: ದೇಶದಲ್ಲಿ ಕೋಟ್ಯಾಧೀಶರ ಸಂಖ್ಯೆ ಕಳೆದ 4 ವರ್ಷಗಳಲ್ಲಿ ಶೇ.60 ರಷ್ಟು ಏರಿಕೆಯಾಗಿದೆ. ವಾರ್ಷಿಕ ಒಂದು ಕೋಟಿ ರೂ. ಆದಾಯವಿದ್ದು ತೆರಿಗೆ ಪಾವತಿಸುವವರು 1.40 ಲಕ್ಷ ಇದ್ದಾರೆ ಎಂದು ಪ್ರತ್ಯಕ್ಷ ತೆರಿಗೆಗಳ ಕೇಂದ್ರೀಯ ಮಂಡಳಿ ವರದಿ ಬಿಡುಗಡೆ ಮಾಡಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

1 ಕೋಟಿ ವರಮಾನವಿರುವವರು 2014-15ರ ಹಣಕಾಸು ವರ್ಷದಲ್ಲಿ 88,649 ಮಂದಿ ತೆರಿಗೆ ಪಾವತಿಸಿದ್ದು, 2017-18ರಲ್ಲಿ 1,40,139 ಆದಾಯ ತೆರಿಗೆ ಪಾವತಿಸಿದ್ದಾರೆ. 

ವೈಯಕ್ತಿಕವಾಗಿ 1 ಕೋಟಿ ರೂ. ಆದಾಯವಿರುವವರು 48,416 ರಿಂದ 81,344 ಹೆಚ್ಚಾಗಿದ್ದಾರೆ. ಇದು ಶೇಕಡವಾರು ಪ್ರಮಾಣ ಶೇ.68 ಏರಿಕೆಯಾಗಿದೆ. ಆದಾಯ ತೆರಿಗೆ ರಿಟರ್ನ್ಸ್ ಪಾವತಿಸುವವರು ಶೇ.80 ಹೆಚ್ಚಳವಾಗಿದ್ದು 4 ಹಣಕಾಸು ವರ್ಷಗಳಲ್ಲಿ 6.85 ಕೋಟಿ ಮಂದಿ ತೆರಿಗೆ ಪಾವತಿಸಿದ್ದಾರೆ.