ಸರ್ಕಾರಿ ಉದ್ಯೋಗಿಗಳೇ ಗಮನಿಸಿ, ಜ.1ರಿಂದ ಎನ್ ಪಿಎಸ್ ನಿಯಮದಲ್ಲಿ ಬದಲಾವಣೆ

ಎನ್ ಪಿಎಸ್ ಖಾತೆಯಲ್ಲಿನ ಭಾಗಶಃ ಹೂಡಿಕೆ ಹಿಂತೆಗೆತ ನಿಯಮದಲ್ಲಿ ಜನವರಿ 1ರಿಂದ ಬದಲಾವಣೆ ಆಗಲಿದೆ. ಈ ಬದಲಾವಣೆ ಸರ್ಕಾರಿ ನೌಕರರಿಗೆ ಮಾತ್ರ ಅನ್ವಯಿಸಲಿದೆ. ಹಾಗಾದ್ರೆ ಆ ಬದಲಾವಣೆ ಏನು? ಇಲ್ಲಿದೆ ಮಾಹಿತಿ. 

NPS partial withdrawal rule tweaked from January 1 check how to apply for premature withdrawals

ನವದೆಹಲಿ (ಡಿ.28): ಎಲ್ಲ ಸರ್ಕಾರಿ ಉದ್ಯೋಗಿಗಳು ರಾಷ್ಟ್ರೀಯ ಪಿಂಚಣಿ ವ್ಯವಸ್ಥೆ  (ಎನ್ ಪಿಎಸ್ ) ಹೂಡಿಕೆಯಲ್ಲಿ ಭಾಗಶಃ ಮೊತ್ತವನ್ನು ಹಿಂಪಡೆಯುವ ಮನವಿಯನ್ನು ಕಡ್ಡಾಯವಾಗಿ ಸಂಬಂಧಪಟ್ಟ ನೋಡಲ್ ಅಧಿಕಾರಿಗಳ ಮೂಲಕವೇ ಸಲ್ಲಿಕೆ ಮಾಡಬೇಕು ಎಂದು ಪಿಂಚಣಿ ನಿಧಿ ನಿಯಂತ್ರಕ ಮತ್ತು ಅಭಿವೃದ್ಧಿ ಪ್ರಾಧಿಕಾರ (ಪಿಎಫ್ ಆರ್ ಡಿಎ) ತಿಳಿಸಿದೆ. ಈ ನಿಯಮವು 2023ರ ಜನವರಿ 1ರಿಂದಲೇ ಅನ್ವಯಿಸಲಿದೆ ಎಂದು ಪಿಎಫ್ ಆರ್ ಡಿಎ ಹೇಳಿದೆ.  ಈ ನಿಯಮವು ಕೇಂದ್ರ ಸರ್ಕಾರ, ರಾಜ್ಯ ಸರ್ಕಾರ ಹಾಗೂ ಕೇಂದ್ರ/ರಾಜ್ಯ ಸ್ವಯತ್ತ ಸಂಸ್ಥೆಗಳ ಉದ್ಯೋಗಿಗಳಿಗೆ ಅನ್ವಯಿಸಲಿದೆ. ಹೀಗಾಗಿ ಇನ್ನು ಮುಂದೆ ಈ ಉದ್ಯೋಗಿಗಳು ಭಾಗಶಃ ವಿತ್ ಡ್ರಾ ಮಾಡಲು ಅಗತ್ಯವಾದ ದಾಖಲೆಗಳನ್ನು ನೋಡಲ್ ಅಧಿಕಾರಿಗಳಿಗೆ ಸಲ್ಲಿಕೆ ಮಾಡಬೇಕು. ಈ ಹಿಂದೆ ಕೋವಿಡ್ ಹಿನ್ನೆಲೆಯಲ್ಲಿ ಚಂದಾದಾರರು ಎನ್ ಪಿಎಸ್ ನಿಂದ ಭಾಗಶಃ ವಿತ್ ಡ್ರಾ ಮಾಡಲು ಸ್ವ ಘೋಷಣೆ ನೀಡಿದ್ರೆ ಸಾಕು ಎಂಬ ನಿಯಮವನ್ನು ಪಿಎಫ್ ಆರ್ ಡಿಎ 2021ರ ಜನವರಿ 14ರಂದು ಪರಿಚಯಿಸಿತ್ತು. ಕೋವಿಡ್ ಕಾರಣದಿಂದ ಲಾಕ್ ಡೌನ್ ಮತ್ತಿತರ ಸಮಸ್ಯೆಗಳು ಎದುರಾದ ಹಿನ್ನೆಲೆಯಲ್ಲಿ ಉದ್ಯೋಗಿಗಳಿಗೆ ನೆರವಾಗಲಿ ಎಂಬ ಉದ್ದೇಶದಿಂದ ಪಿಎಫ್ ಆರ್ ಡಿಎ ಈ ನಿಯಮದಲ್ಲಿ ಬದಲಾವಣೆ ಮಾಡಿತ್ತು. 

ಇನ್ನು ಕೆಲವು ರಾಜ್ಯ ಸರ್ಕಾರಗಳು ಹಳೆಯ ಮಾದರಿಯ ಪಿಂಚಣಿ ವ್ಯವಸ್ಥೆ ಅಥವಾ ಒಪಿಎಸ್ ಮರು ಜಾರಿಗೆ ಸಜ್ಜಾಗಿದ್ದು, ತಮ್ಮ ಉದ್ಯೋಗಿಗಳು ಹೂಡಿಕೆ ಮಾಡಿರುವ ಹಣವನ್ನು ಹಿಂದೆ ನೀಡುವಂತೆ ಪಿಎಫ್ ಆರ್ ಡಿಎಗೆ ಮನವಿ ಮಾಡಿವೆ. ಇದೇ ಸಮಯದಲ್ಲಿ ಪಿಎಫ್ ಆರ್ ಡಿಎ ನಿಯಮ ಬದಲಾವಣೆ ಮಾಡಿದೆ.  ಈ ಬಗ್ಗೆ ಪಿಎಫ್ ಆರ್ ಡಿಎ ಡಿಸೆಂಬರ್ 23ರಂದು ಸುತ್ತೋಲೆ ಹೊರಡಿಸಿದೆ. 

ಅಂಚೆ ಕಚೇರಿ ಈ ಯೋಜನೆಯಲ್ಲಿ ಹೂಡಿಕೆ ಮಾಡಿದ್ರೆ ಸಿಗುತ್ತೆ ಬ್ಯಾಂಕ್ ಎಫ್ ಡಿಗಿಂತ ಅಧಿಕ ಬಡ್ಡಿ!

ಈಗ ಹೇಗಿದೆ?
ಪ್ರಸ್ತುತ ಪಿಎಫ್ ಆರ್ ಡಿಎ 2021ರ ಜನವರಿ 14ರಂದು ಬಿಡುಗಡೆ ಮಾಡಿರುವ ಸುತ್ತೋಲೆಯಲ್ಲಿರುವ ನಿಯಮವನ್ನೇ ಅನುಸರಿಸಲಾಗುತ್ತಿದೆ. ಅಂದರೆ ಸ್ವಯಂ ದೃಢೀಕರಣದ ಮೂಲಕ ಸರ್ಕಾರಿ ಉದ್ಯೋಗಿಗಳು ಎನ್ ಪಿಎಸ್ ನಿಂದ ಭಾಗಶಃ ವಿತ್ ಡ್ರಾ ಮಾಡಿಕೊಳ್ಳಬಹುದು. ಕೋವಿಡ್ ಹಿನ್ನೆಲೆಯಲ್ಲಿ ಉದ್ಯೋಗಿಗಳಿಗೆ ಮನೆಯಿಂದ ಹೊರಬರಲು ಸಾಧ್ಯವಾಗದಂತಹ ಪರಿಸ್ಥಿತಿಯಿತ್ತು. ಅಲ್ಲದೆ, ಅವರ ಸುರಕ್ಷತೆಯನ್ನು ಕೂಡ ಗಮನದಲ್ಲಿಟ್ಟುಕೊಂಡು ಸ್ವಯಂ ದೃಢೀಕರಣದ ಮೂಲಕ ಎನ್ ಪಿಎಸ್ ನಿಂದ ಭಾಗಶಃ ವಿತ್ ಡ್ರಾಗೆ ಅವಕಾಶ ನೀಡಲಾಗಿತ್ತು. ನೋಡಲ್ ಅಧಿಕಾರಿಗಳ ಮೇಲಿನ ಹೊರೆ ತಗ್ಗಿಸಲು ಕೂಡ ಈ ಕ್ರಮ ಕೈಗೊಳ್ಳಲಾಗಿತ್ತು. ಎನ್ ಪಿಎಸ್ ಖಾತೆದಾರರ ಮನವಿಯನ್ನು ಆನ್ ಲೈನ್ ಮೂಲಕ ನೋಡಲ್ ಅಧಿಕಾರಿಗಳ ದೃಢೀಕರಣದ ಅಗತ್ಯವಿಲ್ಲದೆ ವಿಲೇವಾರಿ ಮಾಡಲಾಗುತ್ತಿತ್ತು. ಇದ್ರಿಂದ ಲಾಕ್ ಡೌನ್ ಸಮಯದಲ್ಲಿ ಉದ್ಯೋಗಿಗಳಿಗೆ ಎನ್ ಪಿಎಸ್ ನಿಂದ ಹಣ ವಿತ್ ಡ್ರಾ ಮಾಡೋದು ಸುಲಭ ಹಾಗೂ ಅನುಕೂಲಕರವಾಗಿತ್ತು. 

ಯಾರು ಅವಧಿಗೂ ಮುನ್ನ ವಿತ್ ಡ್ರಾ ಮಾಡ್ಬಹುದು?
ಎನ್ ಪಿಎಸ್ ಖಾತೆ ತೆರೆದು ಮೂರು ವರ್ಷಗಳು ಪೂರ್ಣಗೊಂಡ ಬಳಿಕವಷ್ಟೇ ಅವಧಿಗೂ ಮುನ್ನ ಹೂಡಿಕೆಯಲ್ಲಿ ಭಾಗಶಃ ವಿತ್ ಡ್ರಾಗೆ ಅವಕಾಶವಿದೆ. ಆದರೆ, ವಿತ್ ಡ್ರಾ ಮೊತ್ತ ಒಟ್ಟು ಹೂಡಿಕೆ ಮೊತ್ತದ ಶೇ.25ರಷ್ಟನ್ನು ಮೀರಬಾರದು. ಇನ್ನು ಈ ವಿತ್ ಡ್ರಾ ಅನ್ನು ಮಕ್ಕಳ ಉನ್ನತ ಶಿಕ್ಷಣ, ಮಕ್ಕಳ ವಿವಾಹ, ಮನೆ ಖರೀದಿ ಅಥವಾ ನಿರ್ಮಾಣ ಹಾಗೂ ಗಂಭೀರ ಕಾಯಿಲೆಗಳ ಚಿಕಿತ್ಸೆ ಉದ್ದೇಶಕ್ಕಾಗಿ ಮಾತ್ರ ಭಾಗಶಃ ವಿತ್ ಡ್ರಾ ಮಾಡಲು ಅವಕಾಶ ನೀಡಲಾಗಿದೆ. ಇನ್ನು ಎನ್ ಪಿಎಸ್ ಪೂರ್ಣ ಅವಧಿಯಲ್ಲಿ ಕೇವಲ ಮೂರು ಬಾರಿ ಮಾತ್ರ ಭಾಗಶಃ ವಿತ್ ಡ್ರಾ ಮಾಡಲು ಅವಕಾಶ ಕಲ್ಪಿಸಲಾಗಿದೆ. 

ಗೃಹಿಣಿಯರೇ, ಹೊಸ ವರ್ಷಕ್ಕೆ ಈ 6 ಟಿಪ್ಸ್ ಅನುಸರಿಸಿ, ಹಣ ಉಳಿಸಿ

ಖಾಸಗಿ ಕ್ಷೇತ್ರದವರಿಗೆ ಸಮಸ್ಯೆಯಿಲ್ಲ
ಖಾಸಗಿ ಕ್ಷೇತ್ರದ ಉದ್ಯೋಗಿಗಳಿಗೆ ಸ್ವಯಂ ದೃಢೀಕರಣದ ಮೂಲಕ ಎನ್ ಪಿಎಸ್ ಭಾಗಶಃ ಹಿಂಪಡೆಯುವ ನಿಯಮ ಮುಂದುವರಿಯಲಿದೆ. ಎನ್ ಪಿಎಸ್ ನಲ್ಲಿ ಸ್ವಇಚ್ಛೆಯಿಂದ ಹೂಡಿಕೆ ಮಾಡುವ ಉದ್ಯೋಗಿಗಳು ಈ ಹಿಂದಿನಂತೆ ಸ್ವಯಂ ದೃಢೀಕರಣದ ಮೂಲಕ ಮನವಿ ಸಲ್ಲಿಸಿ ಭಾಗಶಃ ವಿತ್ ಡ್ರಾ ಮಾಡಿಕೊಳ್ಳಬಹುದು. 

Latest Videos
Follow Us:
Download App:
  • android
  • ios