ನವದೆಹಲಿ[ಏ.16]: ಮದ್ಯದ ದೊರೆ ವಿಜಯ್‌ ಮಲ್ಯ ಹಾಗೂ ವಜ್ರೋದ್ಯಮಿ ನೀರವ್‌ ಮೋದಿ ಅವರಷ್ಟೇ ಅಲ್ಲದೆ, ಭಾರತದಲ್ಲಿ ಕ್ರಿಮಿನಲ್‌ ಪ್ರಕರಣ ಎದುರಿಸುತ್ತಿರುವ ಇನ್ನೂ 36 ಭಾರತೀಯ ಉದ್ಯಮಿಗಳು ವಿದೇಶದಲ್ಲಿ ತಲೆ ಮರೆಸಿಕೊಂಡಿದ್ದಾರೆ ಎಂಬ ಮಾಹಿತಿಯನ್ನು ಜಾರಿ ನಿರ್ದೇಶನಾಲಯ(ಇ.ಡಿ) ಹೊರಗೆಡವಿದೆ.

ವಿವಿಐಪಿ ಚಾಪರ್‌ ಅಗಸ್ಟಾವೆಸ್ಟ್‌ಲೆಂಡ್‌ ಹಗರಣ ಪ್ರಕರಣದಲ್ಲಿ ಬಂಧಿತನಾಗಿರುವ ಯುದ್ಧ ಪರಿಕರಗಳ ಖರೀದಿ ಮಧ್ಯವರ್ತಿ ಸುಶೇನ್‌ ಮೋಹನ್‌ ಗುಪ್ತಾ ಕೋರಿದ ಜಾಮೀನು ಅರ್ಜಿಯನ್ನು ಇ.ಡಿ ವಿರೋಧಿಸಿತು. ಕ್ರಿಮಿನಲ್‌ ಪ್ರಕರಣ ಎದುರಿಸುತ್ತಿರುವ ಕಾರಣಕ್ಕೆ ವಿದೇಶದಲ್ಲಿ ತಲೆಮರೆಸಿಕೊಂಡಿರುವ 36 ಉದ್ಯಮಿಗಳಂತೆ, ಸುಶೇನ್‌ ಗುಪ್ತಾ ಸಹ ವಿದೇಶಕ್ಕೆ ಪಾರಾಗಲು ಮುಂದಾಗಿರಬಹುದು ಎಂದಿದ್ದಾರೆ

ಅಲ್ಲದೆ, ಸುಶೇನ್‌ ಡೈರಿಯಲ್ಲಿ ಅತಿ ಹೆಚ್ಚು ಬಾರಿ ಬಳಕೆಯಾಗಿರುವ ‘ಆರ್‌ಜಿ’ ಎಂದರೆ ಏನು ಎಂಬುದರ ತನಿಖೆ ನಡೆಯುತ್ತಿದೆ. ಇಂಥ ಸಂದರ್ಭದಲ್ಲಿ ಸುಶೇನ್‌ಗೆ ಜಾಮೀನು ನೀಡುವುದು ಸಮಂಜಸವಲ್ಲ ಎಂದು ವಿಶೇಷ ನ್ಯಾಯಾಧೀಶ ಅರವಿಂದ್‌ ಕುಮಾರ್‌ ಅವರಿಗೆ ಇ.ಡಿ ಮನವರಿಕೆ ಮಾಡಿಕೊಟ್ಟಿತು. ಈ ಕುರಿತಾದ ಆದೇಶವನ್ನು ನ್ಯಾಯಾಲಯ ಏ.20ಕ್ಕೆ ಕಾಯ್ದಿರಿಸಿದೆ.

ದೇಶದಲ್ಲಿ ಏ.11ರಿಂದ ಮೇ.19ರವೆರೆಗೆ ಏಳು ಹಂತಗಳಲ್ಲಿ ಮತದಾನ. ಕರ್ನಾಟಕದಲ್ಲಿ ಏ.18 ಹಾಗೂ ಏ.23ರಂದು ಎರಡು ಹಂತಗಳಲ್ಲಿ ಮತದಾನ. ಭಾರತದಲ್ಲಿ 543 ಲೋಕಸಭಾ ಕ್ಷೇತ್ರ, ಕರ್ನಾಟಕದಲ್ಲಿ 28.