Asianet Suvarna News Asianet Suvarna News

ಹೆಣ್ಣು ಮಕ್ಕಳಿಗೆ ಶಿಕ್ಷಣ ನಿರಾಕರಣೆ: 30 ಟ್ರಿಲಿಯನ್ ಡಾಲರ್ ನಷ್ಟ!

ಹೆಣ್ಣು ಮಕ್ಕಳಿಗೆ ಶಿಕ್ಷಣ ನಿರಾಕರಣೆ

ಜಾಗತಿಕ 30 ಟ್ರಿಲಿಯನ್ ಡಾಲರ್ ನಷ್ಟ

ಬೆಚ್ಚಿ ಬೀಳಿಸಿದ ವಿಶ್ವಬ್ಯಾಂಕ್ ವರದಿ

ಜಾಗತಿಕ ಮಾನವ ಸಂಪನ್ಮೂಲ ನಷ್ಟ 

Not educating girls costs global economy USD 15-30 trillion: World Bank

ವಾಷಿಂಗ್ಟನ್(ಜು.12): ಹೆಣ್ಣುಮಕ್ಕಳಿಗೆ  ಶಿಕ್ಷಣ ನಿರಾಕರಣೆ ಜಾಗತಿಕ ಆರ್ಥಿಕತೆಗೆ 15ರಿಂದ 30 ಟ್ರಿಲಿಯನ್ ಡಾಲರ್ ನಷ್ಟ ಸಂಭವಿಸಲು ಕಾರಣವಾಗಿದೆ ಎಂದು ವಿಶ್ವಬ್ಯಾಂಕ್ ಹೇಳಿದೆ.

ಕಡಿಮೆ ಆದಾಯವಿರುವ ರಾಷ್ಟ್ರಗಳಲ್ಲಿ ತುಂಬ ಕಡಿಮೆ ಪ್ರಮಾಣದ ಬಾಲಕಿಯರು ಪ್ರಾಥಮಿಕ ಶಿಕ್ಷಣವನ್ನು ಪೂರ್ಣಗೊಳಿಸುತ್ತಿದ್ದಾರೆ. ಎಂದು ‘ಕಳೆದುಹೋದ ಅವಕಾಶಗಳು: ಬಾಲಕಿಯರ ಶಿಕ್ಷಣಕ್ಕೆ ಮಾಡದಿರುವ ವೆಚ್ಚ’ ಕುರಿತ ವರದಿಯಲ್ಲಿ ಹೇಳಲಾಗಿದೆ.

ಹೆಣ್ಣು ಮಕ್ಕಳು 12 ವರ್ಷದವರೆಗೂ ಶಿಕ್ಷಣ ಪೂರ್ಣಗೊಳಿಸದಿರುವುದರಿಂದ ಮಾನವ ಸಂಪನ್ಮೂಲ ನಷ್ಟವಾಗುತ್ತಿದ್ದು, ಇದರಿಂದಾಗಿ ಜಾಗತಿಕವಾಗಿ 15ರಿಂದ 30 ಟ್ರಿಲಿಯನ್  ಡಾಲರ್ ನಷ್ಟ ಆಗುತ್ತಿದೆ ಎಂದು ವಿಶ್ವಸಂಸ್ಥೆಯ ಮಲಾಲಾ ದಿನ ಆಚರಣೆ ಕಾರ್ಯಕ್ರಮದಲ್ಲಿ ಬಿಡುಗಡೆಗೊಳಿಸಿದ ವರದಿಯಲ್ಲಿ ಹೇಳಲಾಗಿದೆ.

ಹೆಣ್ಣು ಮಕ್ಕಳ ಪ್ರೌಢ ಶಿಕ್ಷಣದಲ್ಲಿ ಹೆಚ್ಚಿನ ಹೂಡಿಕೆ ಮಾಡಬೇಕಾದ ಅಗತ್ಯವಿದೆ.  ಇದಕ್ಕೆ ಈ ವರದಿಯೇ ಹೆಚ್ಚಿನ ಸಾಕ್ಷ್ಯಧಾರವಾಗಿದೆ ಎಂದು ಮಲಾಲಾ ನಿಧಿ ಸಹ ಸಂಸ್ಥಾಪಕರು ಹೇಳಿದ್ದಾರೆ. ವರದಿ ಪ್ರಕಾರ, ಪ್ರಸ್ತುತ ವಿಶ್ವದಾದ್ಯಂತ 6 ರಿಂದ 17 ವರ್ಷದೊಳಗಿನ  132 ಮಿಲಿಯನ್ ಹುಡುಗಿಯರು ಶಾಲೆಗೆ ಹೋಗುತ್ತಿಲ್ಲ. ಈ ಪೈಕಿ ಶೇ, 75 ರಷ್ಟು ವಯಸ್ಕರಾಗಿದ್ದಾರೆ.

ಜಾಗತಿಕ ಪ್ರಗತಿಗೆ ಅನುಗುಣವಾಗಿ ಲಿಂಗ ತಾರತಮ್ಯ ತೊಡೆದು ಹಾಕಲು ಅನಕ್ಷರತೆ ಅವಕಾಶ ನೀಡುವುದಿಲ್ಲ ಎಂದು ವಿಶ್ವ ಬ್ಯಾಂಕ್ ಸಿಇಒ ಕ್ರಿಸ್ಟಲಿನಾ ಜಾರ್ಜಿವಾ ಅಭಿಪ್ರಾಯಪಟ್ಟಿದ್ದಾರೆ. ಶಿಕ್ಷಣದಲ್ಲಿ ಅಸಮಾನತೆ ಸಂಕೀರ್ಣ ಸಮಸ್ಯೆಯಾಗಿದ್ದು, ಹುಡುಗ ಹಾಗೂ ಹುಡುಗಿಯರಿಗೆ ಸಮಾನ ಶಿಕ್ಷಣ ನೀಡಬೇಕು ಎಂದರು.

Follow Us:
Download App:
  • android
  • ios