* ಕಚ್ಚಾ ತೈಲ ಬೆಲೆ ಏರಿಕೆ* ಆರ್ಥಿಕ ನಷ್ಟದಿಂದ ಪಾರಾಗಲು ಖಾಸಗಿ ಬಂಕ್‌ಗಳಿಗೆ ಬಾಗಿಲು* ಸರ್ಕಾರಿ ಸ್ವಾಮ್ಯದ ಕಂಪನಿಯ ಬಂಕ್‌ಗಳ ಮೇಲೆ ಹೆಚ್ಚಿದ ಒತ್ತಡ
ಬೆಂಗಳೂರು(ಏ.08): ಕಚ್ಚಾ ತೈಲ ಬೆಲೆ ಏರಿಕೆ ಹಿನ್ನೆಲೆ ಆರ್ಥಿಕ ಹೊರೆಯಿಂದ ಪಾರಾಗಾಲು ನಗರದ ಖಾಸಗಿ ಪೆಟ್ರೋಲ್ ಬಂಕ್‌ಗಳು(Petrol Bunk) ತನ್ನ ಕಾರ್ಯಾಚರಣೆಯನ್ನು ಮಿತಿಗೊಳಿಸಿವೆ. ಇದರಿಂದಾಗಿ ಸರ್ಕಾರಿ ಸ್ವಾಮ್ಯದ ಪೆಟ್ರೋಲ್ ಬಂಕ್‌ಗಳ ಮೇಲೆ ಒತ್ತಡ ಹೆಚ್ಚಳವಾಗಿ ದಾಸ್ತಾನು ಸಮಸ್ಯೆ ಎದುರಾಗಿದೆ. ಪರಿಣಾಮವಾಗಿ ಗುರುವಾರ ಪೆಟ್ರೋಲ್ ಬಂಕ್‌ಗಳ ಮುಂಭಾಗ ನೋ ಸ್ಟಾಕ್ ಬೋರ್ಡ್ ಹೆಚ್ಚಳವಾಗಿದ್ದು, ವಾಹನ ಸವಾರರು ಇಂಧನಕ್ಕೆ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿತ್ತು.
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ(International Market) ಕಚ್ಚಾತೈಲ(Crude Oil) ದರ ಏರಿಕೆಯಾಗಿದ್ದು, ದಾಸ್ತಾನು ಪೂರೈಸುವ ತೈಲ ಕಂಪನಿಗಳು ಬಂಕ್ ಮಾಲೀಕರಿಂದ ಹೆಚ್ಚು ಹಣವನ್ನು ಪಡೆಯುತ್ತಿವೆ. ಅದಕ್ಕೆ ತಕ್ಕಂತೆ ಬಂಕ್‌ಗಳು ಪೆಟ್ರೋಲ್(Petrol) ಮತ್ತು ಡೀಸೆಲ್(Diesel) ದರ ಹೆಚ್ಚಳ ಅನಿವಾರ್ಯವಾಗಿದೆ. ಆದರೆ, ಬಂಕ್‌ಗಳಲ್ಲಿ ಸರ್ಕಾರ ನಿಗದಿ ಪಡಿಸಿದ ದರಕ್ಕಿಂತ ಹೆಚ್ಚಿನ ದರ ವಸೂಲಿ ಮಾಡುವಂತಿಲ್ಲ. ಇತ್ತ ಇಂಡಿಯನ್ ಆಯಿಲ್, ಎಚ್‌ಪಿ ಸೇರಿದಂತೆ ಸರ್ಕಾರಿ ಸ್ವಾಮ್ಯದ ಕಂಪನಿಗಳಿಗೆ ಹೆಚ್ಚುವರಿ ಹಣವನ್ನು ಸರ್ಕಾರವೇ ಭರಿಸಿ ನಷ್ಟಪರಿಹಾರ ಮಾಡುತ್ತದೆ. ಆದರೆ, ಖಾಸಗಿ ಬಂಕ್‌ಗಳಾದ ರಿಲಯನ್ಸ್, ಶೆಲ್‌ನಂತಹವುಗಳಿಗೆ ಸರ್ಕಾರದಿಂದ ಯಾವುದೇ ಪರಿಹಾರ ದರ ಸಿಗುವುದಿಲ್ಲ. ಹೀಗಾಗಿ, ತೈಲ ಕಂಪನಿಗಳಿಗೆ ಹೆಚ್ಚಿನ ಹಣ ನೀಡಿ, ಸರ್ಕಾರ ನಿಗದಿ ಪಡಿಸಿದ ದರಕ್ಕೆ(Price) ಪೆಟ್ರೋಲ್, ಡೀಸೆಲ್ ಮಾರಾಟ ಮಾಡಿ ಆರ್ಥಿಕ ಹೊರೆಗೆ ತುತ್ತಾಗುವ ಬದಲು ಕಾರ್ಯಾಚರಣೆಯನ್ನೇ ಮಿತಿಗೊಳಿಸಿವೆ ಎಂದು ಪೆಟ್ರೋಲ್ ಮಾಲಿಕರ ಸಂಘದ ಸದಸ್ಯರು ತಿಳಿಸಿದರು.
Petrol- Diesel Price Today: ಕರ್ನಾಟಕದ ಜಿಲ್ಲೆಗಳಲ್ಲಿ ಇಂದಿನ ಪೆಟ್ರೋಲ್ ಡೀಸೆಲ್ ಬೆಲೆ ಇಲ್ಲಿದೆ
ಕಾರ್ಯಾಚರಣೆ ಸ್ಥಗಿತ:
ಖಾಸಗಿ ಪೆಟ್ರೋಲ್ ಬಂಕ್‌ಗಳು 24*7 ಕಾರ್ಯಾಚರಣೆಯಿಂದ ಸದ್ಯ 16 ಗಂಟೆ ಮಾತ್ರ ಕಾರ್ಯನಿರ್ವಹಿಸುತ್ತಿವೆ. ಕೆಲವು ಕಡೆ ನೋಸ್ಟಾಕ್ ಬೋರ್ಡ್ ಹಾಕಲಾಗಿದೆ. ಇನ್ನು ಕೆಲ ಬಂಕ್‌ಗಳು ಇರುವ ಇಂಧನ ದಾಸ್ತಾನು ಖಾಲಿ ಮಾಡಿಕೊಂಡು ಕಾರ್ಯಾಚರಣೆ ಸ್ಥಗಿತಗೊಳಿಸಲು ಚಿಂತನೆ ನಡೆಸಿವೆ. ತೈಲ ಕಂಪನಿಗಳು(Oil Companies) ಬೆಲೆ ಇಳಿಕೆ ಮಾಡಿದರೆ ಅಥವಾ ಸರ್ಕಾರವೇ ಮುಂದೆ ಪೆಟ್ರೋಲ್, ಡೀಸೆಲ್ ಬೆಲೆ ಹೆಚ್ಚಳ ಮಾಡಿದರೆ ಎಂದಿನಂತೆ ಕಾರ್ಯನಿರ್ವಹಿಸುವ ಸಾಧ್ಯತೆ ಇದೆ.
Petrol, Diesel Price Today: ರಾಜ್ಯದ 2 ಜಿಲ್ಲೆಗಳಲ್ಲಿ ಇಂಧನ ದರ ಇಳಿಕೆ, ಉಳೆದೆಡೆ ಏರಿಕೆ
ಸರ್ಕಾರಿ ಸ್ವಾಮ್ಯದ ಬಂಕ್‌ಗಳತ್ತ ಜನ:
ಖಾಸಗಿ ಬಂಕ್‌ಗಳ ಕಾರ್ಯಾಚರಣೆ ವ್ಯತ್ಯಯವಾದ ಹಿನ್ನೆಲೆ ಸರ್ಕಾರಿ ಸ್ವಾಮ್ಯದ ಬಂಕ್‌ಗಳಿಗೆ ಹೆಚ್ಚಿನ ಮಂದಿ ತೆರಳುತ್ತಿದ್ದಾರೆ. ಇದರಿಂದಾಗಿ ಈ ಬಂಕ್‌ಗಳ ಮುಂದೆ ದೊಡ್ಡ ಮಟ್ಟದ ಸರತಿ ಕಂಡು ಬಂದಿದೆ. ಜತೆಗೆ ಸಾಮಾನ್ಯ ದಿನಗಳಿಗಿಂತ ಹೆಚ್ಚಿನ ಮಂದಿ ಆಗಮಿಸಿದ ಹಿನ್ನೆಲೆ ದಾಸ್ತಾನು ಸಮಸ್ಯೆ ಎದುರಾಗಿದೆ. ಶೀಘ್ರವೇ ಪೆಟ್ರೋಲ್, ಡೀಸೆಲ್ ದಾಸ್ತಾನು ಖಾಲಿಯಾಗುತ್ತಿದೆ. ಹೀಗಾಗಿ, ತೈಲ ಕಂಪನಿಗಳಿಗೆ ಹೆಚ್ಚಿನ ಬೇಡಿಕೆ ಇಟ್ಟರೂ ಪೂರೈಕೆ ಸಮಸ್ಯೆಯಾಗುತ್ತಿದೆ ಎಂದು ಇಂಡಿಯನ್ ಆಯಿಲ್ ಡೀಲರ್ಟ್ ಅಸೋಸಿಯೇಷನ್ ಕಾರ್ಯದರ್ಶಿ ರಂಜಿತ್ ಹೆಗಡೆ ತಿಳಿಸಿದರು. ಗುರುವಾರದ ಅಂತ್ಯಕ್ಕೆ ಬೆಂಗಳೂರಿನಲ್ಲಿ ಪ್ರತಿ ಲೀಟರ್ ಪೆಟ್ರೋಲ್ ದರ 111.09 ರು., ಡೀಸೆಲ್ ದರ 94.79 ರು. ಇದೆ.
ಪೆಟ್ರೋಲ್ ಖಾಲಿಯಾಗಿ ನಡುರಸ್ತೆಯಲ್ಲಿ ನಿಂತಿದ್ದ ಅಣ್ಣತಂಗಿಗೆ ಸ್ವಿಗ್ಗಿ ಬಾಯ್ ಸಹಾಯ
ಮಧ್ಯರಾತ್ರಿ ನಡುರಸ್ತೆಯಲ್ಲಿ ಪೆಟ್ರೋಲ್ ಖಾಲಿಯಾಗಿ ಸಂಕಷ್ಟದಲ್ಲಿದ್ದ ಅಣ್ಣ ತಂಗಿಗೆ ಸ್ವಿಗ್ಗಿ ಡೆಲಿವರಿ ಬಾಯ್ ಒಬ್ಬರು ಸಹಾಯ ಮಾಡುವ ಮೂಲಕ ಮಾನವೀಯತೆ ಮರೆದಿದ್ದಾರೆ. ತಮ್ಮದೇ ವಾಹನದಿಂದ ಪೆಟ್ರೋಲ್ ತೆಗೆದು ಈ ಅಣ್ಣ ತಂಗಿಗೆ ನೀಡುವ ಮೂಲಕ ಸಹಾಯ ಮಾಡಿದ್ದು, ಇವರ ಸಹಾಯವನ್ನು ಸಹೋದರಿ ಸಾಮಾಜಿಕ ಜಾಲತಾಣವಾದ ಲಿಂಕ್ಡಿನ್‌ನಲ್ಲಿ ಬರೆಯುವ ಮೂಲಕ ಕೃತಜ್ಞತೆ ಸಲ್ಲಿಸಿದ್ದಾರೆ. ಈ ಪೋಸ್ಟ್ ಇನ್ಸ್ಟಾಗ್ರಾಮ್‌ನಲ್ಲಿ ವೈರಲ್ ಆಗಿದೆ. ಅಲ್ಲದೇ ಡೆಲಿವರಿ ಬಾಯ್ ಸಹಾಯಕ್ಕೆ ಇನ್ಸ್ಟಾಗ್ರಾಮ್ ಬಳಕೆದಾರರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
