Asianet Suvarna News Asianet Suvarna News

Digital India Effect| ಡಿಜಿಟಲ್‌ ವಹಿವಾಟು ನಂಬರ್‌ 1, ನೋಟುಗಳಿಗಿಲ್ಲ ಡಿಮ್ಯಾಂಡ್‌..!

*   ಬೀದಿ ಬದಿಯ ಅಂಗಡಿಗಳಲ್ಲೂ ಗೂಗಲ್‌ ಪೇ, ಪೋನ್‌ ಪೇ, ಪೇಟಿಎಂ
*  ಡಿಸೆಂಬರ್‌ 2021ರಲ್ಲಿ ಚಲಾವಣೆಗೆ ಬರಲಿರುವ ಡಿಜಿಟಲ್‌ ಕರೆನ್ಸಿ
*  ಡಿಜಿಟಲ್‌ ವಹಿವಾಟು ಒತ್ತು ನೀಡಿದ ಪ್ರಧಾನಿ ಮೋದಿ
 

No Demand for Notes due to Digital India Effect grg
Author
Bengaluru, First Published Nov 12, 2021, 2:19 PM IST

ವಸಂತಕುಮಾರ್‌ ಕತಗಾಲ

ಕಾರವಾರ(ನ.12): ಹಣ(Money) ಕಂಡರೆ ಹೆಣವೂ ಬಾಯಿ ಬಿಡುತ್ತದೆ ಎನ್ನುವುದು ಹಳೆಯ ಗಾದೆ. ಈಗ ಹಣ ಅಂದರೆ ನೋಟಿಗೇ ಡಿಮ್ಯಾಂಡ್‌ ಇಲ್ಲ. ಡಿಜಿಟಲ್‌ ಪೇಮೆಂಟ್‌(Digital Payment) ಹೆಚ್ಚುತ್ತಿದ್ದಂತೆ ನೋಟುಗಳು ದೂರ ಸರಿಯುತ್ತಿವೆ. ವಿಶ್ವದಲ್ಲೇ ಡಿಜಿಟಲ್‌ ವಹಿವಾಟಿನ ಸಂಖ್ಯೆಯಲ್ಲಿ ಭಾರತ(India) ಪ್ರಥಮ ಸ್ಥಾನದಲ್ಲಿದೆ. ಚೀನಾ(China), ಅಮೆರಿಕವನ್ನು(America) ಹಿಂದಿಕ್ಕಿದೆ.

ಮಾಲ್‌ಗಳು(Shopping Mall), ಹೊಟೇಲ್‌ಗಳು(Hotel) ಒತ್ತಟ್ಟಿಗಿರಲಿ, ಎಳನೀರು ಮಾರಾಟಗಾರರು, ಬೀದಿ ಬದಿಯ ಅಂಗಡಿಗಳಲ್ಲೂ ಗೂಗಲ್‌ ಪೇ(Google Pay), ಫೋನ್‌ ಪೇ(Phonepay), ಪೇಟಿಎಂ(Paytm). ಚಿಲ್ಲರೆಯ ಕಿರಿಕಿರಿ ಇಲ್ಲ. ಪೇಮೆಂಟ್‌ ಮಾಡುವುದೂ ಸಲೀಸು. ಎಲ್ಲೋ ಹೋಗುವುದಿದ್ದರೂ ಕಿಸೆಯಲ್ಲಿ ನೋಟುಗಳನ್ನು(Note) ಭರ್ತಿ ಮಾಡಿಕೊಳ್ಳಬೇಕಾಗಿಲ್ಲ. ಎಟಿಎಂಗಳಿಗೆ(ATM) ಅಲೆಯಬೇಕಿಲ್ಲ. ಹಳ್ಳಿ ಹಳ್ಳಿಗಳಲ್ಲೂ ಡಿಜಿಟಲ್‌ ಪೇಮೆಂಟ್‌ ಭರಾಟೆ ಶುರುವಾಗಿದೆ. ಇದರಿಂದಾಗಿ ನೋಟುಗಳತ್ತ ನೋಟ ಕಡಿಮೆಯಾಗಿದೆ. ಚಲಾವಣೆ ಇಳಿಮುಖವಾಗುತ್ತಿದೆ. 2009-10ರಲ್ಲಿ ದೇಶದಲ್ಲಿ ಒಟ್ಟೂ56 ಬಿಲಿಯನ್‌ ನೋಟ್‌ಗಳು ಚಲಾವಣೆಯಲ್ಲಿದ್ದವು. 2019-20ರಲ್ಲಿ 116 ಬಿಲಿಯನ್‌ ಚಲಾವಣೆಯಲ್ಲಿತ್ತು. ಮಾ. 31, 2021ಕ್ಕೆ ಇದು 124 ಬಿಲಿಯನ್‌ ಆಗಿದೆ.

Karnataka| ಹೂಡಿಕೆದಾರರಿಗೆ ಸಕಲ ನೆರವು: ಸಚಿವ ಮುರುಗೇಶ್‌ ನಿರಾಣಿ

ಡಿಜಿಟಲ್‌ ಪೇಮೆಂಟ್‌:

2010ರಲ್ಲಿ ಭಾರತದಲ್ಲಿ 252 ಮಿಲಿಯನ್‌ ಬಾರಿ ಡಿಜಿಟಲ್‌ ವಹಿವಾಟು(Digital Transaction) ನಡೆಯಿತು. ಚೀನಾದಲ್ಲಿ 661 ಮಿಲಿಯನ್‌ ಸಲ ವಹಿವಾಟು ನಡೆಯಿತು. ಅಮೆರಿಕದಲ್ಲಿ 120 ಮಿಲಿಯನ್‌ ಸಲ ವಹಿವಾಟು ಇತ್ತು.
2018ರಲ್ಲಿ ಇಂಡಿಯಾದ ಡಿಜಿಟಲ್‌ ವಹಿವಾಟು 12156ಕ್ಕೇರಿತು. ಚೀನಾದಲ್ಲಿ 12180 ಆದರೆ, ಅಮೆರಿಕದಲ್ಲಿ 941 ಆಗಿತ್ತು. 2021ರಲ್ಲಿ ಭಾರತದಲ್ಲಿ 37520 ಸಲ ಡಿಜಿಟಲ್‌ ವಹಿವಾಟು ನಡೆಯಿತು. ಚೀನಾದಲ್ಲಿ 18495 ಹಾಗೂ ಅಮೆರಿಕದಲ್ಲಿ 2438 ಸಲ ವಹಿವಾಟು ನಡೆಯಿತು. ಇದರಿಂದ ಡಿಜಿಟಲ್‌ ವಹಿವಾಟುಗಳ ಸಂಖ್ಯೆಯಲ್ಲಿ ದೇಶ ಪ್ರಪಂಚದಲ್ಲೇ(World) ಮೊದಲ ಸ್ಥಾನಕ್ಕೇರಿದೆ.

ಡಿಜಿಟಲ್‌ ವಹಿವಾಟು ಹೆಚ್ಚುತ್ತಿದ್ದಂತೆ ಬ್ಯಾಂಕ್‌ಗಳಿಗೆ(Bank) ಜನರ ಅಲೆದಾಟ ಭಾರಿ ಇಳಿಮುಖವಾಯಿತು. ನೋಟುಗಳು ಆರ್‌ಬಿಐ(RBI) ಹಾಗೂ ಬ್ಯಾಂಕ್‌ಗಳ ಗುದಾಮುಗಳಲ್ಲಿ ಡಂಪ್‌ ಆಗುತ್ತಿವೆ. ಆರ್‌ಬಿಐನ ನೋಟ್‌ ಪ್ರಿಂಟಿಂಗ್‌ ಪ್ರೆಸ್‌ಗಳಲ್ಲಿ(RBI Note Printing Press) ನೋಟ್‌ಗಳನ್ನು ಪ್ರಿಂಟ್‌ ಮಾಡಲಾಗುತ್ತಿದ್ದರೂ ಜನರು ಪಡೆಯಲು ಮುಂದಾಗುತ್ತಿಲ್ಲ. ನೋಟುಗಳಿಗೆ ಬೇಡಿಕೆಯೇ ಕಡಿಮೆಯಾಗಿದೆ.

2018-19ರಲ್ಲಿ 28 ಬಿಲಿಯನ್‌ ನೋಟ್‌ಗಳನ್ನು ಪ್ರಿಂಟ್‌ ಮಾಡಲಾಯಿತು. 2019-20ರಲ್ಲಿ 22.4 ಬಿಲಿಯನ್‌ ನೋಟ್‌ಗಳು ಪ್ರಿಂಟ್‌ ಆಯಿತು. 2020-21ರಲ್ಲಿ 22.3 ಬಿಲಿಯನ್‌ ನೋಟ್‌ ಪ್ರಿಂಟ್‌ ಮಾಡಲಾಯಿತು. ನೋಟುಗಳ ಪ್ರಿಂಟ್‌ ಮಾಡುವ ಪ್ರಮಾಣವೂ ಕಡಿಮೆಯಾಗುತ್ತಿದೆ. ಇಲ್ಲದಿದ್ದರೆ ವರ್ಷದಿಂದ ವರ್ಷಕ್ಕೆ ನೋಟುಗಳ ಪ್ರಿಂಟಿಂಗ್‌ ಹೆಚ್ಚುತ್ತಲೇ ಇತ್ತು.

ಭಾರತದ ಆರ್ಥಿಕಪ್ರಗತಿಯ ದರ ವಿಶ್ವದಲ್ಲೇ ಅತೀ ವೇಗದ್ದು!

2018-19ರಲ್ಲಿ 20.4 ಬಿಲಿಯನ್‌ ನೋಟ್‌ಗಳನ್ನು ನಾಶ ಮಾಡಲಾಯಿತು. 2019-20ರಲ್ಲಿ ಇದು 14.6 ಬಿಲಿಯನ್‌ಗಳಿಗೆ ಇಳಿಯಿತು. 2020-21ರಲ್ಲಿ ಕೇವಲ 9.9 ಬಿಲಿಯನ್‌ ನೋಟುಗಳನ್ನು ನಾಶ ಮಾಡಲಾಯಿತು. ನೋಟುಗಳು ಚಲಾವಣೆಯಲ್ಲಿದ್ದಾಗ ಮಾತ್ರ ಕೆಟ್ಟು ಹೋಗುತ್ತದೆ. ಆಗ ನಾಶದ ಪ್ರಮಾಣ ಕಡಿಮೆಯಾಗುತ್ತದೆ. ನೋಟು ಚಲಾವಣೆ ಕಡಿಮೆಯಾದಂತೆ ನಾಶ ಮಾಡುವ ನೋಟು ಸಂಖ್ಯೆಯೂ ಕಡಿಮೆಯಾಗುತ್ತದೆ.

ಡಿಜಿಟಲ್‌ ಕರೆನ್ಸಿ:

ಡಿಸೆಂಬರ್‌ 2021ರಲ್ಲಿ ಡಿಜಿಟಲ್‌ ಕರೆನ್ಸಿ(Digital Currency) ಚಲಾವಣೆಗೆ ಬರಲಿದೆ. ಇದರಿಂದ ನೋಟುಗಳಿಗೆ ಡಿಮ್ಯಾಂಡ್‌ ಇನ್ನೂ ಕಡಿಮೆಯಾಗಲಿದೆ. ಕೆಲವೆ ವರ್ಷಗಳಲ್ಲಿ ಶೇ. 50ರಷ್ಟು ಪ್ರಮಾಣದಲ್ಲಿ ನೋಟುಗಳ ಬಳಕೆ ತಗ್ಗಲಿದೆ. ಇದರಿಂದ ವಹಿವಾಟಿನಲ್ಲಿ ಪಾರದರ್ಶಕತೆ, ಕಪ್ಪು ಹಣ(Black Money) ನಿಯಂತ್ರಣವಾಗಲಿದೆ. ಜತೆಗೆ ಬ್ಯಾಂಕ್‌ಗಳ ಸಂಖ್ಯೆ, ಬ್ರಾಂಚ್‌ಗಳ ಸಂಖ್ಯೆ, ಬ್ಯಾಂಕ್‌ ಸಿಬ್ಬಂದಿ ಸಂಖ್ಯೆಯಲ್ಲಿ ಗಣನೀಯವಾಗಿ ಇಳಿಮುಖವಾಗಲಿದೆ. 2017ರಲ್ಲಿ ಪ್ರಧಾನಿ ನರೇಂದ್ರ ಮೋದಿ(Narendra Modi) ಒತ್ತು ನೀಡಿದ ಡಿಜಿಟಲ್‌ ವಹಿವಾಟು ಈಗ ಫಲ ನೀಡುತ್ತಿದೆ. ಹಣ ವರ್ಗಾವಣೆ, ವಹಿವಾಟಿನಲ್ಲಿ ಭಾರತ ಡಿಜಿಟಲ್‌(Digital India) ಆಗುತ್ತಿದೆ.
 

Follow Us:
Download App:
  • android
  • ios