ನ್ಯೂಯಾರ್ಕ್(ಡಿ.09): ಅಮೆರಿಕ ಫೋರ್ಬ್ಸ್‌ ಮ್ಯಾಗಜಿನ್‌ ವಿಶ್ವದ 100 ಪ್ರಭಾವಿ ಮಹಿಳೆಯರ ಪಟ್ಟಿಬಿಡುಗಡೆ ಮಾಡಿದೆ. ಇದರಲ್ಲಿ ಭಾರತೀಯರು ಸ್ಥಾನ ಪಡೆಯುವ ಮೂಲಕ ಮಹಿಳಾ ಶಕ್ತಿ ಅನಾವರಣಗೊಳಿಸಿದ್ದಾರೆ.

ಕೇಂದ್ರ ಹಣಕಾಸು ಸಚಿವರನ್ನ ಭೇಟಿಯಾದ ಸಂಸದೆ ಶೋಭಾ ಕರಂದ್ಲಾಜೆ

ಈ ಪಟ್ಟಿಯಲ್ಲಿ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್‌ (41ನೇ ರಾರ‍ಯಂಕ್‌), ಎಚ್‌ಸಿಎಲ್‌ ಸಿಇಒ ರೋಶನಿ ನಾಡಾರ್‌ (55ನೇ ರಾರ‍ಯಂಕ್‌), ಬಯೋಕಾನ್‌ ಸಂಸ್ಥಾಪಕಿ ಕಿರಣ್‌ ಮಜುಂದಾರ್‌ ಶಾ (68ನೇ ರಾರ‍ಯಂಕ್‌), ಲ್ಯಾಂಡ್‌ಮಾರ್ಕ್ ಗ್ರೂಪ್‌ನ ರೇಣುಕಾ ಜಗತ್‌ಯಾನಿ (98ನೇ ರಾರ‍ಯಂಕ್‌) ಸ್ಥಾನ ಪಡೆದಿದ್ದಾರೆ.

ಇತಿಹಾಸದಲ್ಲಿ ಮೊದಲ ಬಾರಿ ಭಾರತದಲ್ಲಿ ಆರ್ಥಿಕ ಕುಸಿತ!

ಇನ್ನು ಜರ್ಮನಿ ಚಾನ್ಸಲರ್‌ ಏಂಜೆಲಾ ಮರ್ಕೆಲ್‌, ಯುರೋಪ್‌ ಕೇಂದ್ರೀಯ ಬ್ಯಾಂಕ್‌ ಮುಖ್ಯಸ್ಥೆ ಕ್ರಿಸ್ಟೀನಾ ಲಿಗಾರ್ಡೆ, ಅಮೆರಿಕದ ಚುನಾಯಿತ ಉಪಾಧ್ಯಕ್ಷೆ ಕಮಲಾ ಹ್ಯಾರೀಸ್‌ ಕ್ರಮವಾಗಿ ಮೊದಲ 3 ಸ್ಥಾನ ಪಡೆದುಕೊಂಡಿದ್ದಾರೆ.

ಯಾರಿಗೆ ಯಾವ ಸ್ಥಾನ?

ಇನ್ನು ಫೋರ್ಬ್ಸ್‌ ಶಕ್ತಿಶಾಲಿ ಮಹಿಳೆಯರ ಪಟ್ಟಿಗೆ ಹೊಸದಾಗಿ ಸೇರ್ಪಡೆಗೊಂಡಿರುವ ಸೀತಾರಾಮನ್ ಈ ಬಾರಿ 41ನೇ ಸ್ಥಾನ ಪಡೆದಿದ್ದಾರೆ. ಭಾರತೀಯರ ಪೈಕಿ ಪಟ್ಟಿಯಲ್ಲಿ ಇವರೇ ಮೊದಲಿಗರಾಗಿದ್ದಾರೆ. ಇನ್ನು ನಾಡರ್ ಮಲ್ಹೋತ್ರಾ 55ನೇ ಸ್ಥಾನ ಪಡೆದಿದ್ದಾರೆ. ನಾಡರ್‌ ಮಲ್ಹೋತ್ರಾ ಎಚ್‌ಸಿಎಲ್ ಕಾರ್ಪೊರೇಶನ್‌ನ ಸಿಇಒ ಆಗಿ, 8.9 ಬಿಲಿಯನ್ ಯುಎಸ್ಡಿ ತಂತ್ರಜ್ಞಾನ ಕಂಪನಿಯ ಎಲ್ಲಾ ಕಾರ್ಯತಂತ್ರದ ಭಾಗವಾಗಿ ದುಡಿಯುವ ಮಹಿಳಾ ಉದ್ಯಮಿಯಾಗಿದ್ದಾರೆ.