Asianet Suvarna News Asianet Suvarna News

Nirmala Sitharaman:ಎಲ್ಲಾ ರಾಜ್ಯದ ಮುಖ್ಯಮಂತ್ರಿ, ಹಣಕಾಸು ಸಚಿವರ ಜೊತೆ ನಿರ್ಮಲಾ ಸೀತಾರಾಮ್ ಸಂವಾದ!

  • ಸಿಎಂ, ಹಣಕಾಸು ಸಚಿವರು, ಕೇಂದ್ರಾಡಳಿತದ ಗರ್ನವರ್ ಜೊತೆ ಸಂವಾದ
  • ನವೆಂಬರ್ 15 ರಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಂ ಸಂವಾದ
  • ರಾಜ್ಯಗಳ ಆರ್ಥಿಕತೆ ಚೇತರಿಕೆ, ವಿದೇಶಿ ಹೂಡಿಕೆಗಳ ಒಳಹರಿವು ವೃದ್ಧಿ ಕುರಿತು ಚರ್ಚೆ
Nirmala Sitharaman hold virtual conference with Chief Ministers and State Finance Ministers ckm
Author
Bengaluru, First Published Nov 12, 2021, 6:39 PM IST

ನವದೆಹಲಿ(ನ.12): ಕೊರೋನಾ ಹೊಡೆತದಿಂದ ಚೇತರಿಸಿಕೊಳ್ಳುತ್ತಿರುವ ಭಾರತ ಆರ್ಥಿಕತೆಯಲ್ಲೂ(Indian Economy) ಬೆಳವಣಿಗೆ ಕಾಣುತ್ತಿದೆ. ಈ ಮೂಲಕ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆ ದೇಶ ಭಾರತ ಅನ್ನೋ ಹೆಗ್ಗಳಿಕೆಗೂ ಪಾತ್ರವಾಗಿದೆ. ಇದೀಗ ದೇಶದ ಹಾಗೂ ರಾಜ್ಯಗಳಲ್ಲಿ ಕೊರೋನಾ(Coronavirus) ಕಾರಣ ಕುಂಠಿತಗೊಂಡಿರುವ ಹಲವು ಆರ್ಥಿಕತೆ ಚಟುವಟಿಕೆಗಳ ಪುನರ್ ಆರಂಭ, ವಿದೇಶಿ ಹೂಡಿಕೆ(Foreign direct investment) ಸೇರಿದಂತೆ ಹಲವು ವಿಚಾರಗಳ ಕುರಿತು ಚರ್ಚಿಸಲು ಕೇಂದ್ರ ಹಣಕಾಸು ಹಾಗೂ  ಕಾರ್ಪೊರೇಟ್ ವ್ಯವಹಾರಗಳ ಸಚಿವೆ ನಿರ್ಮಲಾ ಸೀತಾರಾಮ್(Nirmala Sitharaman) ಮುಂದಾಗಿದ್ದಾರೆ. ನವೆಂಬರ್ 15 ರಂದು ನಿರ್ಮಲಾ ಸೀತಾರಾಮನ್  ರಾಜ್ಯಗಳ ಮುಖ್ಯಮಂತ್ರಿಗಳು, ರಾಜ್ಯ ಹಣಕಾಸು ಸಚಿವರು ಮತ್ತು ಕೇಂದ್ರಾಡಳಿತ ಪ್ರದೇಶಗಳ ಲೆಫ್ಟಿನೆಂಟ್ ಗವರ್ನರ್‌ಗಳೊಂದಿಗೆ ವಿಡಿಯೊ ಕಾನ್ಫರೆನ್ಸ್ ಮೂಲಕ ಸಭೆ ನಡೆಸಲಿದ್ದಾರೆ.

ಆರ್ಥಿಕತೆಯ ಚೇತರಿಕೆ:
ಕೋವಿಡ್-19 ಸಾಂಕ್ರಾಮಿಕದ ಅವಧಿಯಲ್ಲಿ ಬೆಳವಣಿಗೆ ಕುಂಠಿತವಾಗಿತ್ತು. ಆದಾಗ್ಯೂ, ಪ್ರಸಕ್ತ ಹಣಕಾಸು(financial year) ವರ್ಷದ ಮೊದಲ ತ್ರೈಮಾಸಿಕದ ನಂತರ, ಆರ್ಥಿಕತೆಯು ಚೇತರಿಕೆ ಕಾಣುತ್ತಿದ್ದು, ಪುನಶ್ಚೇತನದ ಆಶಾಭಾವ ಮೂಡಿದೆ. ಹಲವಾರು ಆರ್ಥಿಕತೆ ಸೂಚ್ಯಂಕಗಳು ಈಗ ಸಾಂಕ್ರಾಮಿಕದ  ಪೂರ್ವದ ಸ್ಥಿತಿಗೆ ಹಿಂತಿರುಗಿವೆ. ಐಎಂಎಫ್ ಮತ್ತು ವಿಶ್ವ ಬ್ಯಾಂಕ್‌ ಭಾರತದ ಜಿಡಿಪಿ ಬೆಳವಣಿಗೆ ಅಂದಾಜನ್ನು ಕ್ರಮವಾಗಿ ಸುಮಾರು 9.5% ಮತ್ತು 8.3%ಗೆ ಹೆಚ್ಚಿಸಿದ್ದು, ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಗಳಲ್ಲಿ ಒಂದಾಗಿ ಗುರುತಿಸಿವೆ.

ಎತ್ತಿನ ಮೇಲೆ QR Code: Digital ಕ್ರಾಂತಿಗೆ ಉದಾಹರಣೆ ಎಂದ ನಿರ್ಮಲಾ ಸೀತಾರಾಮನ್!

ವಿದೇಶಿ ನೇರ ಹೂಡಿಕೆ ಮೇಲೆ ಗಮನ:
ಹೂಡಿಕೆದಾರರ ಭಾವನೆ ಉತ್ತಮವಾಗಿದ್ದರೂ, ಈಗಾಗಲೇ ಸೃಷ್ಟಿಯಾಗಿರುವ ವೇಗದ ಗತಿಯನ್ನು ಬಳಸಿಕೊಳ್ಳುವ ಅಗತ್ಯವಿದೆ. 2021-22ರ ಹಣಕಾಸು ವರ್ಷದ ಮೊದಲ ನಾಲ್ಕು ತಿಂಗಳುಗಳು ಈಗಾಗಲೇ 64 ಶತಕೋಟಿ ಡಾಲರ್ ವಿದೇಶಿ ನೇರ ಹೂಡಿಕೆ (FDI) ಒಳಹರಿವಿಗೆ ಸಾಕ್ಷಿಯಾಗಿವೆ. ಭಾರತ ಸರಕಾರವು (GOI) ತನ್ನ ಕೇಂದ್ರ ಬಜೆಟ್ 2021-22ರಲ್ಲಿ(Budget) ಕಾರ್ಯವಿಧಾನಗಳನ್ನು ಸುವ್ಯವಸ್ಥಿತಗೊಳಿಸುವುದು, ಅಡಚಣೆಗಳನ್ನು ನಿವಾರಿಸಿರುವುದು ಮತ್ತು ಅಗತ್ಯ ಪ್ರೋತ್ಸಾಹಕಗಳನ್ನು ಒದಗಿಸುವುದು ಮುಂತಾದ ಕ್ರಮಗಳ ಮೂಲಕ ವಿದೇಶಿ ಹೂಡಿಕೆ ಒಳಹರಿವಿಗೆ ಮತ್ತಷ್ಟು ಉತ್ತೇಜನ ನೀಡಿದೆ.

ರಾಷ್ಟ್ರಕ್ಕಾಗಿ ಸಹಯೋಗದ ಬೆಳವಣಿಗೆಯ ದೃಷ್ಟಿಕೋನವನ್ನು ಅನುಸರಿಸಲು ಬಯಸಿರುವ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ದೇಶದಲ್ಲಿ ಹೂಡಿಕೆ ವಾತಾವರಣವನ್ನು ಮತ್ತಷ್ಟು ಉತ್ತಮಗೊಳಿಸುವ ಸಲುವಾಗಿ ಇದಕ್ಕೆ ಪೂರಕವಾದ ಮುಕ್ತ ವಿಚಾರ ವಿನಿಯಮವನ್ನು ಪ್ರೋತ್ಸಾಹಿಸಲು ಪ್ರಯತ್ನಿಸುತ್ತಾರೆ. ಹೂಡಿಕೆ ಒಳಹರಿವಿನ ನೇತೃತ್ವದ ಪ್ರಗತಿಗೆ ನೀತಿ ಬೆಂಬಲ ಒದಗಿಸಲು ಮತ್ತು ಅದಕ್ಕೆ ಅನುಕೂಲಕರ ವಾತಾವರಣವನ್ನು ಸೃಷ್ಟಿಸಲು ಉದ್ದೇಶಿತ ಸಂವಾದದ ಮೂಲಕ ಪ್ರಯತ್ನಿಸಲಾಗುವುದು. ಹೂಡಿಕೆ ಉತ್ತೇಜನಕ್ಕೆ ಸಕ್ರಿಯ ಕಾರ್ಯವಿಧಾನ ಅನುಸರಣೆ, ಸುಗಮ ವ್ಯಾಪಾರ ವಾತಾವರಣ ಸೃಷ್ಟಿಗೆ ತರಲಾದ ಸುಧಾರಣೆಗಳಿಂದ ಸಾಧಿಸಲಾದ ದಕ್ಷತೆ ಮತ್ತು ನಗರ ಸ್ಥಳೀಯ ಸಂಸ್ಥೆಗಳ (ಯುಎಲ್‌ಬಿ) ಮಟ್ಟಗಳವರೆಗೆ ಅನುಮೋದನೆಗಳು ಹಾಗೂ ಅನುಮತಿಗಳನ್ನು ತ್ವರಿತಗೊಳಿಸಲು ಒತ್ತು ನೀಡುವ ಮೂಲಕ ಇದನ್ನು ಕಾರ್ಯಸಾಧುಗೊಳಿಸಲಾಗುವುದು.

ಕೇಂದ್ರದಿಂದ ರಾಜ್ಯ ಸರ್ಕಾರಕ್ಕೆ ಬಂಪರ್ : ಸಿಎಂ ಬೊಮ್ಮಾಯಿ

ಸಂವಾದದ ವೇಳೆ, ರಾಜ್ಯಗಳು ಹೂಡಿಕೆಯ ವಾತಾವರಣವನ್ನು ಮತ್ತಷ್ಟು ಉತ್ತಮಗೊಳಿಸುವ ಬಗ್ಗೆ ತಮ್ಮ ಆಲೋಚನೆಗಳು ಮತ್ತು ದೃಷ್ಟಿಕೋನವನ್ನು ಹಂಚಿಕೊಳ್ಳಬಹುದು. ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಯಾಗುವತ್ತ ಭಾರತವು ಸೂಕ್ತ ಪಥದಲ್ಲಿ ಸಾಗಲು ವ್ಯಾಪಕ ಒಮ್ಮತಕ್ಕೆ ಇದು ದಾರಿ ಮಾಡಬಹುದು. ಈ ನಿಟ್ಟಿನಲ್ಲಿ ನಿರ್ಮಲಾ ಸೀತಾರಾಮ್ ಕರೆದಿರುವ ವಿಡಿಯೋ ಕಾನ್ಫೆರೆನ್ಸ್ ಸಭೆ ಮಹತ್ವ ಪಡೆದುಕೊಂಡಿದೆ.  ಈ ಮಹತ್ವದ ಸಭೆಯಲ್ಲಿ  ಭಾರತ ಸರಕಾರದ ಸಂಬಂಧಪಟ್ಟ ಸಚಿವಾಲಯಗಳ ಕಾರ್ಯದರ್ಶಿಗಳು, ಮುಖ್ಯ ಕಾರ್ಯದರ್ಶಿಗಳು ಮತ್ತು ರಾಜ್ಯಗಳ ಹಣಕಾಸು ಕಾರ್ಯದರ್ಶಿಗಳು ಭಾಗವಹಿಸಲಿದ್ದಾರೆ.

ರಾಜ್ಯ ಸರ್ಕಾರ ಜೊತೆ ಕೇಂದ್ರ ಸಚಿವರು ಸತತ ಸಭೆಗಳನ್ನು ನಡೆಸುತ್ತಿದ್ದಾರೆ. ಇತ್ತೀಚೆಗೆ ಕೇಂದ್ರ ಆರೋಗ್ಯ ಸಚಿವ ಮನ್ಸುಕ್ ಮಾಂಡವಿಯಾ, ಎಲ್ಲಾ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶದ ಆರೋಗ್ಯ ಸಚಿವರ ಜೊತೆ ಮಹತ್ವದ ಸಭೆ ನಡೆಸಿದ್ದರು. ಕೊರೋನಾ ಲಸಿಕೆ ಅಭಿಯಾನವನ್ನು ಮತ್ತಷ್ಟು ಚುರುಕುಗೊಳಿಸುವ ನಿಟ್ಟಿನಲ್ಲಿ ಚರ್ಚೆ ನಡೆಸಲಾಗಿತ್ತು.

Follow Us:
Download App:
  • android
  • ios