ಜ.1ರಿಂದ ಹೊಸ ವಿಮಾ ನಿಯಮ ಜಾರಿ; ವಿಮೆ ಖರೀದಿಗೆ ಕೆವೈಸಿ ಕಡ್ಡಾಯ

ಪ್ರಸ್ತುತ ಒಂದು ಲಕ್ಷ ರೂ. ಮೇಲ್ಪಟ್ಟ ಆರೋಗ್ಯ ವಿಮಾ ಪಾಲಿಸಿಗಳನ್ನು ಹೊರತುಪಡಿಸಿ ಇತರ ಪಾಲಿಸಿಗಳನ್ನು ಖರೀದಿಸುವಾಗ ಕೆವೈಸಿ ದಾಖಲೆಗಳನ್ನು ನೀಡುವುದು ಕಡ್ಡಾಯವಲ್ಲ.ಆದರೆ, ಜ.1ರಿಂದ ಹೊಸ ವಿಮಾ ಪಾಲಿಸಿಗಳನ್ನು ಖರೀದಿಸಲು ಅಥವಾ ಹಳೆಯ ಪಾಲಿಸಿಗಳ ನವೀಕರಣಕ್ಕೆ ಕೆವೈಸಿ ಕಡ್ಡಾಯ. 

New insurance rules IRDAI makes KYC mandatory from January 1 2023  check details

ನವದೆಹಲಿ (ಡಿ.29): ಜನವರಿ 1 , 2023ರಿಂದ ಹೊಸ ಆರೋಗ್ಯ, ವಾಹನ, ಪ್ರಯಾಣ ಹಾಗೂ ಗೃಹ ವಿಮಾ ಪಾಲಿಸಿಗಳನ್ನು ಖರೀದಿಸುವಾಗ ನೋ ಯುವರ್ ಕಸ್ಟಮರ್ ಅಥವಾ ಕೆವೈಸಿ ದಾಖಲೆಗಳನ್ನು ಕಡ್ಡಾಯವಾಗಿ ನೀಡಬೇಕು ಎಂದು ಭಾರತೀಯ ವಿಮಾ ನಿಯಂತ್ರಣ ಹಾಗೂ ಅಭಿವೃದ್ಧಿ ಪ್ರಾಧಿಕಾರ (ಐಆರ್ ಡಿಎಐ) ತಿಳಿಸಿದೆ. ಜೀವ, ಆರೋಗ್ಯ ವಿಮೆ ಸೇರಿದಂತೆ ಎಲ್ಲ ವಿಧದ ವಿಮೆಗಳಿಗೆ ಈ ನಿಯಮ ಅನ್ವಯಿಸುತ್ತದೆ. ಪ್ರಸ್ತುತ ಒಂದು ಲಕ್ಷ ರೂ. ಮೇಲ್ಪಟ್ಟ ಆರೋಗ್ಯ ವಿಮಾ ಪಾಲಿಸಿಗಳನ್ನು ಖರೀದಿಸುವಾಗ ಮಾತ್ರ ಕೆವೈಸಿ ದಾಖಲೆಗಳು ಕಡ್ಡಾಯವಾಗಿ ಬೇಕು. ಹೊಸ ನಿಯಮದ ಪ್ರಕಾರ ಗ್ರಾಹಕರು ಕ್ಲೈಮ್ ಮಾಡುವ ತನಕ ಕಾಯುವ ಬದಲು ಪಾಲಿಸಿ ಮಾಡಿಸುವಾಗಲೇ ಕೆವೈಸಿ ದಾಖಲೆಗಳನ್ನು ಒದಗಿಸಬೇಕು. ಇನ್ನು ಈಗಾಗಲೇ ಪಾಲಿಸಿಗಳನ್ನು ಹೊಂದಿರುವ ಪಾಲಿಸಿದಾರರಿಂದ ಕೆವೈಸಿ ದಾಖಲೆಗಳನ್ನು ಸಂಗ್ರಹಿಸಲು ಐಆರ್ ಡಿಎಐ ವಿಮಾ ಕಂಪನಿಗಳಿಗೆ ನಿರ್ದಿಷ್ಟ ಸಮಯದ ಚೌಕಟ್ಟನ್ನು ವಿಧಿಸಿದೆ. ಹೀಗಾಗಿ ಆ ಸಮಯ ಮಿತಿಯೊಳಗೆ ವಿಮಾ ಕಂಪನಿಗಳು ಪಾಲಿಸಿದಾರರಿಂದ ಕೆವೈಸಿ ದಾಖಲೆಗಳನ್ನು ಸಂಗ್ರಹಿಸಿ ನೀಡಬೇಕಿದೆ. ಈ ಸಮಯ ಮಿತಿ ಕಡಿಮೆ ಅಪಾಯದ ಪಾಲಿಸಿದಾರರಿಗೆ ಎರಡು ವರ್ಷಗಳಾದ್ರೆ, ಹೈ ರಿಸ್ಕ್ ಗ್ರಾಹಕರು ಸೇರಿದಂತೆ ಇತರರಿಗೆ ಒಂದು ವರ್ಷ. 

ವಿಮಾ ಕಂಪನಿಗಳು ಎಸ್ಎಂಎಸ್ ಅಥವಾ ಇ-ಮೇಲ್ ಮುಖಾಂತರ ಗ್ರಾಹಕರಿಗೆ ಕೆವೈಸಿ ದಾಖಲೆಗಳನ್ನು ಯಾವಾಗ ಸಲ್ಲಿಕೆ ಮಾಡಬೇಕು ಎಂಬ ಬಗ್ಗೆ ಮಾಹಿತಿ ನೀಡುತ್ತವೆ. ಆದರೆ, ಪ್ರಸಕ್ತ  ಈಗಾಗಲೇ ಇರುವ ಪಾಲಿಸಿದಾರರಿಗೆ ಪಾಲಿಸಿಗಳನ್ನು ರಿನ್ಯೂ ಮಾಡುವಾಗ ಕೆವೈಸಿ ದಾಖಲೆಗಳನ್ನು ಸಲ್ಲಿಕೆ ಮಾಡೋದು ಕಡ್ಡಾಯವಲ್ಲ. ಆದರೆ, 2023ರ ಜನವರಿ 1ರ ಬಳಿಕ ಯಾವುದಾದ್ರೂ ಪಾಲಿಸಿಯನ್ನು ರಿನ್ಯೂ ಮಾಡಬೇಕಿದ್ರೆ ಪಾಲಿಸಿದಾರರು ಫೋಟೋ ಗುರುತು ಹಾಗೂ ವಿಳಾಸ ದೃಢೀಕರಣವನ್ನು ವಿಮಾ ಕಂಪನಿಗಳಿಗೆ ನೀಡಬೇಕು. 

2023ರಲ್ಲಿ ಈ ನಾಲ್ಕು ಬ್ಯಾಂಕುಗಳ ವಿಶೇಷ ಎಫ್ ಡಿ ಯೋಜನೆ ಸ್ಥಗಿತ

ಈ ಹೊಸ ನಿಯಮದಿಂದ ಪಾಲಿಸಿಗಳನ್ನು ಶೀಘ್ರವಾಗಿ ಕ್ಲೈಮ್ ಮಾಡಲು ಸಾಧ್ಯವಾಗಲಿದೆ. ಕೆವೈಸಿ ದಾಖಲೆಗಳನ್ನು ಮೊದಲೇ ಸಲ್ಲಿಕೆ ಮಾಡಿರುವ ಕಾರಣ ವಿಮಾ ಕಂಪನಿಗಳ ಬಳಿ ಗ್ರಾಹಕರ ಸಂಪೂರ್ಣ ಮಾಹಿತಿ ಇರುತ್ತದೆ. ಇದ್ರಿಂದ ವಂಚನೆ ಕ್ಲೈಮ್ ಗಳನ್ನು ಕೂಡ ತಡೆಯಲು ಸಾಧ್ಯವಾಗುತ್ತದೆ. ಅಲ್ಲದೆ, ವಿಮಾ ಹಣ ಪಾಲಿಸಿದಾರರ ಕಾನೂನುಬದ್ಧವಾದ ವಾರಸುದಾರರಿಗೆ ಪಾವತಿಯಾಗಿದೆ ಎಂಬುದನ್ನು ದೃಢೀಕರಿಸಲು ನೆರವು ನೀಡುತ್ತದೆ. ಹಾಗೆಯೇ ವಿಮಾ ಕಂಪನಿಗಳಿಗೆ ಪಾಲಿಸಿ ದಾಖಲೆಗಳನ್ನು ಕೇಂದ್ರೀಕೃತ ಡೇಟಾ ಬೇಸ್ ನಲ್ಲಿ ನಿರ್ವಹಣೆ ಮಾಡಲು ನೆರವು ನೀಡಲಿದೆ. 

ಜನರಲ್ ವಿಮೆಗಳಿಗೆ ಪ್ರಸ್ತುತ ಕೆವೈಸಿ ದಾಖಲೆಗಳನ್ನು ನೀಡುವುದು ಗ್ರಾಹಕರ ಸ್ವ ಆಯ್ಕೆಯಾಗಿದ್ದು, ಕಡ್ಡಾಯವೇನಲ್ಲ. ಅದರೆ, ಹೊಸ ನಿಯಮ ಜಾರಿಯಾದ ಬಳಿಕ ವಿಮಾ ಕಂಪನಿಗಳಿಗೆ ಪಾಲಿಸಿದಾರರು ಕೆವೈಸಿ ಮಾಹಿತಿಗಳನ್ನು ನೀಡುವುದು ಕಡ್ಡಾಯವಾಗಲಿದೆ. ಒಂದು ವೇಳೆ ಪಾಲಿಸಿದಾರರು ಕೆವೈಸಿ ದಾಖಲೆಗಳನ್ನು ನೀಡದಿದ್ರೆ ವಿಮಾ ಪಾಲಿಸಿ ಖರೀದಿ ಅಥವಾ ನವೀಕರಣ ಕಷ್ಟವಾಗಲಿದೆ. 

ಏನಿದು ಕೆವೈಸಿ?
ಕೆವೈಸಿ (KYC) ಅಂದ್ರೆ know your customer' ಎಂದು ಅರ್ಥ. ಗ್ರಾಹಕ ನೀಡಿರುವ ಮಾಹಿತಿಗಳು ಸಮರ್ಪಕವಾಗಿವೆ ಎಂದು ಪರಿಶೀಲಿಸಿ ದೃಢೀಕರಿಸಲು ಕೆವೈಸಿ ನೆರವು ನೀಡುತ್ತದೆ. ಹೀಗಾಗಿ ಎಲ್ಐಸಿ ಪಾಲಿಸಿ ಮಾಡುವ ಸಮಯದಲ್ಲಿ ಗ್ರಾಹಕನಿಂದ ಕೆವೈಸಿ ಮಾಹಿತಿಗಳನ್ನು ಕೋರುತ್ತದೆ.  ಹೆಸರು, ಬ್ಯಾಂಕ್ ಖಾತೆ ಸಂಖ್ಯೆ, ಪ್ಯಾನ್ ಕಾರ್ಡ್ ಸಂಖ್ಯೆ, ಆಧಾರ್ ಕಾರ್ಡ್ ಸಂಖ್ಯೆ, ಮೊಬೈಲ್ ಸಂಖ್ಯೆ ಮತ್ತು ಸಂಪೂರ್ಣ ವಿಳಾಸವನ್ನು ಕೆವೈಸಿ ಅರ್ಜಿ ಒಳಗೊಂಡಿರುತ್ತದೆ.

ಎಲ್ಐಸಿಯ ಈ ಪಾಲಿಸಿಯಲ್ಲಿ ದಿನಕ್ಕೆ 200ರೂ. ಹೂಡಿಕೆ ಮಾಡಿದ್ರೆ ಸಿಗುತ್ತೆ 28 ಲಕ್ಷ ರೂ. ರಿಟರ್ನ್!

ಎಲ್ಐಸಿಯಲ್ಲಿ ಕೆವೈಸಿ ನವೀಕರಿಸೋದು ಹೇಗೆ?
ನೀವು ಎಲ್ಐಸಿಗೆ ನೀಡಿರುವ ಕೆವೈಸಿ ಮಾಹಿತಿಗಳನ್ನು ನವೀಕರಿಸಬೇಕಿದ್ರೆ ಈ ಕೆಳಗಿನ ಹಂತಗಳನ್ನು ಅನುಸರಿಸಬೇಕು.
ಹಂತ 1:https://merchant.licindia.in ಭೇಟಿ ನೀಡಿ.
ಹಂತ 2: ಪೂರ್ಣ ಹೆಸರು, ಜನ್ಮದಿನಾಂಕ, ಸಂಪರ್ಕ ಸಂಖ್ಯೆಯನ್ನು ನಮೂದಿಸಿ.
ಹಂತ 3: Declaration ಆಯ್ಕೆ ಮೇಲೆ ಕ್ಲಿಕ್ ಮಾಡಿ.  ಆ ಬಳಿಕ submit ಮೇಲೆ ಕ್ಲಿಕ್ ಮಾಡಿ.
ಹಂತ 4: ಮುಂದಿನ ಪುಟದಲ್ಲಿ ಪಾಲಿಸಿ ಮಾಹಿತಿಗಳನ್ನು ನಮೂದಿಸಿ ಆ ಬಳಿಕ ಅದನ್ನು ಪರಿಶೀಲಿಸಿ.
 

Latest Videos
Follow Us:
Download App:
  • android
  • ios