Asianet Suvarna News Asianet Suvarna News

ನೆಟ್‌ಫ್ಲಿಕ್ಸ್ ನೋಡ್ತಿರಾ?: ಎಷ್ಟು ಲಾಭ ಮಾಡ್ಕೊಂಡೈತೆ ನೋಡಿ!

ನೆಟ್‌ಫ್ಲಿಕ್ಸ್ ಆದಾಯದಲ್ಲಿ ಭಾರೀ ಹೆಚ್ಚಳ! ನೆಟ್‌ಫ್ಲಿಕ್ಸ್ ಗ್ರಾಹಕರ ಪ್ರಮಾಣದಲ್ಲಿ ಭಾರೀ ಏರಿಕೆ! ಕಂಪನಿ ಆದಾಯದಲ್ಲಿ ಶೇ.34 ರಷ್ಟು ಏರಿಕೆ! 4 ಬಿಲಿಯನ್ ಡಾಲರ್ ತಲುಪಿದ ನೆಟ್‌ಫ್ಲಿಕ್ಸ್ ಆದಾಯ

Netflix makes profit by gaining huge users
Author
Bengaluru, First Published Oct 17, 2018, 9:06 PM IST
  • Facebook
  • Twitter
  • Whatsapp

ಲಾಸ್ ಗ್ಯಾಟೋಸ್(ಅ.17): ನೆಟ್‌ಫ್ಲಿಕ್ಸ್ ನ ಬಳಕೆದಾರರು ಹೆಚ್ಚಾದ ಪರಿಣಾಮ, ಕಳೆದ ತ್ರೈಮಾಸಿಕದಲ್ಲಿ ಕಂಪನಿ ನಿರೀಕ್ಷೆಗಿಂತ ಹೆಚ್ಚಿನ ಪ್ರಮಾಣದ ಆದಾಯ ಗಳಿಸಿದೆ.

ವಿಶ್ವಾದಾದ್ಯಂತ ಸುಮಾರು 7 ಮಿಲಿಯನ್ ನಷ್ಟು ಗ್ರಾಹಕರನ್ನು ಹೊಸದಾಗಿ ಪಡೆದಿರುವ ನೆಟ್‌ಫ್ಲಿಕ್ಸ್ , ಕಳೆದ ತ್ರೈಮಾಸಿಕದಲ್ಲಿ ನೆಟ್‌ಫ್ಲಿಕ್ಸ್ ನ ಲಾಭ ಕಳೆದ ವರ್ಷಕ್ಕಿಂತ ಮೂರು ಪಟ್ಟು ಹೆಚ್ಚಾಗಿದೆ ಎನ್ನಲಾಗಿದೆ.

ನೆಟ್‌ಫ್ಲಿಕ್ಸ್ ಗ್ರಾಹಕರ ಸಂಖ್ಯೆ ಬರೋಬ್ಬರಿ 137 ಮಿಲಿಯನ್ ನಷ್ಟಾಗಿದ್ದು, ಈ ಹಿನ್ನೆಲೆಯಲ್ಲಿ ಕಳೆದ ತ್ರೈಮಾಸಿಕದಲ್ಲಿ ಅದರ ಲಾಭ 403 ಮಿಲಿಯನ್ ಡಾಲರ್ ಗೆ ಏರಿಕೆಯಾಗಿದೆ. 

ಕಂಪನಿ ಆದಾಯದಲ್ಲಿ ಶೇ.34 ರಷ್ಟು ಏರಿಕೆಯಾಗಿ, 4 ಬಿಲಿಯನ್ ಡಾಲರ್ ಗೆ ತಲುಪಿದೆ ಎಂದು ನೆಟ್‌ಫ್ಲಿಕ್ಸ್ ಇತ್ತೀಚಿಗಷ್ಟೇ ಬಿಡುಗಡೆ ಮಾಡಿದ ವರದಿಯಲ್ಲಿ ಉಲ್ಲೇಖ ಮಾಡಿದೆ.

 ಇನ್ನು ನೆಟ್‌ಫ್ಲಿಕ್ಸ್ ಲಾಭ ಗಳಿಸುತ್ತಿದ್ದಂತೆಯೇ ಷೇರು ಮಾರುಕಟ್ಟೆಯಲ್ಲೂ ನೆಟ್‌ಫ್ಲಿಕ್ಸ್ ಷೇರುಗಳು ಶೇ.12 ರಷ್ಟು ಏರಿಕೆ ಕಂಡಿದೆ. ಒರಿಜಿನಲ್ ಕಂಟೆಂಟ್‌ನಲ್ಲಿ ನೆಟ್‌ಫ್ಲಿಕ್ಸ್ 8 ಬಿಲಿಯನ್ ಡಾಲರ್ ಹೂಡಿಕೆ ಮಾಡಲು ಯೋಜನೆ ಹೊಂದಿದ್ದು, ಹೂಡಿಕೆದಾರರಿಗೆ ಲಾಭದ ಭರವಸೆ ನೀಡಲು ಸಿದ್ಧ ಎಂದು ಸಂಸ್ಥೆ ಹೇಳಿದೆ. 

Follow Us:
Download App:
  • android
  • ios