ಇದು ಎನ್‌ಡಿಎ ವರ್ಸಸ್ ಯುಪಿಎ ಸಾಧನೆ! ಬಂಡವಾಳ ಹಿಂತೆಗೆತ ವಿಚಾರದಲ್ಲಿ ಯಾರು ನಂಬರ್ 1?! 1991 ರ ನಂತರ ಎನ್‌ಡಿಎ ಅವಧಿಯಲ್ಲಿ ಅತಿ ಹೆಚ್ಚು ಬಂಡವಾಳ ಹಿಂತೆಗೆತ! 2.1 ಲಕ್ಷ ಕೋಟಿ ರೂ. ಬಂಡವಾಳ ಹಿಂತೆಗೆತ ಮಾಡಿದ ಮೋದಿ ಸರ್ಕಾರ

ನವದೆಹಲಿ(ನ.19): ಬಂಡವಾಳ ಹೂಡಿಕೆ, ಇದು ಪ್ರಧಾನಿ ನರೇಂದ್ರ ಮೋದಿ ತಮ್ಮ ಭಾಷಣದಲ್ಲಿ ಆಗಾಗ ಪ್ರಸ್ತಾಪಿಸುವ ಶಬ್ದ. ಆದರೆ ಈ ಶಬ್ದ ಇದೀಗ ಕೇವಲ ಅಲಂಕಾರಿಕವೇ ಎಂಬ ಅನುಮಾನ ಮೂಡತೊಡಗಿದೆ.

ಕಾರಣ ಬಂಡವಾಳ ಹಿಂತೆಗೆತದ ವಿಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರ ಯುಪಿಎ ಸರ್ಕಾರವನ್ನು ಮೀರಿಸಿದೆ ಎಂಬುದು ಹೊಸ ಅಂಕಿ ಅಂಶಗಳಿಂದ ಬಯಲಾಗಿದೆ.

ಹೌದು ಬಂಡವಾಳ ಹಿಂತೆಗೆತದಲ್ಲಿ ಪ್ರಸಕ್ತ ಎನ್‌ಡಿಎ ಸರ್ಕಾರ ಮುಂದಿದ್ದು, ನಾಲ್ಕುವರೆ ವರ್ಷಗಳ ಅವಧಿಯಲ್ಲಿ ವಿವಿಧ ವಲಯದಲ್ಲಿ 2.1 ಲಕ್ಷ ಕೋಟಿ ರೂ. ಬಂಡವಾಳ ಹಿಂತೆಗೆತ ಮಾಡಿದೆ.

1991ರಿಂದ ಇದುವರೆಗೆ ಒಟ್ಟು 3.63 ಲಕ್ಷ ಕೋಟಿ ರೂ. ಬಂಡವಾಳ ಹಿಂತೆಗೆತ ಮಾಡಲಾಗಿದ್ದು, ಅದರಲ್ಲಿ ಎನ್‌ಡಿಎ ಸರ್ಕಾರವೇ ಸುಮಾರು 2.1 ಲಕ್ಷ ಕೋಟಿ ರೂ. ಬಂಡವಾಳ ಹಿಂತೆಗೆತ ಮಾಡಿದೆ.

ನಾಲ್ಕುವರೆ ವರ್ಷಗಳ ಅವಧಿಯಲ್ಲಿ ಒಟ್ಟು ಶೇ. 58 ರಷ್ಟು ಬಂಡವಾಳ ಹಿಂತೆಗೆತ ಪ್ರಕ್ರಿಯೆ ಪೂರ್ಣಗೊಳಿಸಲಾಗಿದೆ. ಅಲ್ಲದೇ 2018-19ರಲ್ಲಿ 80 ಸಾವಿರ ಕೋಟಿ ರೂ. ಬಂಡವಾಳ ಹಿಂತೆಗೆತ ಮಾಡುವ ನಿರ್ಧಾರ ಕೈಗೊಳ್ಳಲಾಗಿದೆ. ಇದು ಕಾರ್ಯರೂಪಕ್ಕೆ ಬಂದರೆ 1991ರ ಬಳಿಕ ಎನ್‌ಡಿಎ ಅವಧಿಯಲ್ಲಿ ಶೇ.65 ರಷ್ಟು ಬಂಡವಾಳ ಹಿಂತೆಗೆತ ಮಾಡಿದಂತಾಗುತ್ತದೆ.

ಹಣಕಾಸಿನ ಕೊರತೆ ಮತ್ತು ಆರ್ಥಿಕ ಅಭಿವೃದ್ಧಿ ಸಾಧನೆಗೆ ಬಂಡವಾಳ ಹಿಂತೆಗೆತ ಅನಿವಾರ್ಯ ಪ್ರಕ್ರಿಯೆ ಎಂಬುದು ಕೇಂದ್ರ ಸರ್ಕಾರದ ನಿಲುವಾಗಿದೆ.