ಟಾಟಾ ಒಡೆತನದ ತಾಜ್ ಹೋಟೆಲ್ ಗೆ ಸೆಡ್ಡು ಹೊಡೆಯಲು ರಿಲಯನ್ಸ್ ಸಜ್ಜು;ಜಗತ್ತಿನಾದ್ಯಂತ ಬಹುಕೋಟಿ ಆಸ್ತಿ ಖರೀದಿ
ರಿಲಯನ್ಸ್ ಗ್ರೂಪ್ ಇತ್ತೀಚಿನ ದಿನಗಳಲ್ಲಿ ತನ್ನ ಉದ್ಯಮ ವಿಸ್ತರಣೆಯಲ್ಲಿ ತೊಡಗಿದೆ. ಹೋಟೆಲ್ ಉದ್ಯಮ ಕ್ಷೇತ್ರಕ್ಕೆ ಕಾಲಿಡಲು ಕೂಡ ಸಕಲ ಸಿದ್ಧತೆ ನಡೆಸಿದ್ದು, ಅದರ ಭಾಗವಾಗಿಯೇ ಜಗತ್ತಿನಾದ್ಯಂತ ಬಹುಕೋಟಿ ಮೌಲ್ಯದ ಆಸ್ತಿಗಳನ್ನು ಖರೀದಿಸಿದೆ.
ಮುಂಬೈ (ನ.3): ರಿಟೇಲ್ ಮಾರುಕಟ್ಟೆಯಲ್ಲಿ ಪರಿಣತಿ ಹೊಂದಿರುವ ಮುಖೇಶ್ ಅಂಬಾನಿ ನೇತೃತ್ವದ ರಿಲಯನ್ಸ್ ಈಗ ಹೋಟೆಲ್ ಉದ್ಯಮದತ್ತ ಗಮನ ಕೇಂದ್ರೀಕರಿಸಿದೆ. ಇದರ ಭಾಗವಾಗಿ ಈಗಾಗಲೇ ಹೊಸ ಹೋಟೆಲ್ ಉದ್ಯಮ ಪ್ರಾರಂಭಕ್ಕೆ ಜಗತ್ತಿನಾದ್ಯಂತ ಬಹುಕೋಟಿ ಮೌಲ್ಯದ ಆಸ್ತಿಗಳನ್ನು ಖರೀದಿಸಿದೆ. ಮುಖೇಶ್ ಅಂಬಾನಿ ನೇತೃತ್ವದ ರಿಲಯನ್ಸ್ ಹಾಗೂ ರತನ್ ಟಾಟಾ ಅವರ ಟಾಟಾ ಸಮೂಹ ಸಂಸ್ಥೆ ಭಾರತದ ಎರಡು ಅತೀದೊಡ್ಡ ಉದ್ಯಮ ಸಂಸ್ಥೆಗಳಾಗಿವೆ. ಹೋಟೆಲ್ ಉದ್ಯಮದಲ್ಲಿ ಈಗಾಗಲೇ ಜನಪ್ರಿಯತೆ ಗಳಿಸಿರುವ ಟಾಟಾ ಸಮೂಹ ಸಂಸ್ಥೆಗೆ ಈಗ ರಿಲಯನ್ಸ್ ಪೈಪೋಟಿ ನೀಡಲು ಮುಂದಾಗಿದೆ. ಇತ್ತೀಚಿನ ದಿನಗಳಲ್ಲಿ ತನ್ನ ಉದ್ಯಮ ಕ್ಷೇತ್ರವನ್ನು ವಿಸ್ತರಿಸಿಕೊಳ್ಳುತ್ತಿರುವ ರಿಲಯನ್ಸ್ ಈಗ ಹೋಟೆಲ್ ಉದ್ಯಮ ಕ್ಷೇತ್ರಕ್ಕೆ ಕಾಲಿಡಲು ಸಿದ್ಧತೆ ನಡೆಸಿದೆ.
ಟಾಟಾ ಹೋಟೆಲ್ ಅನ್ನು ಟಾಟಾ ಗ್ರೂಪ್ 1902ರಲ್ಲಿ ಪ್ರಾರಂಭಿಸಿತು. ತಾಜ್ ಹೋಟೆಲ್ ಜಗತ್ತಿನ ಐಷಾರಾಮಿ ಹೋಟೆಲ್ ಗಳಲ್ಲಿ ಒಂದಾಗಿದ್ದು, ಜನಪ್ರಿಯತೆ ಗಳಿಸಿವೆ ಕೂಡ. ಈಗ ರಿಲಯನ್ಸ್ ಸಮೂಹ ಸಂಸ್ಥೆ ಹೋಟೆಲ್ ಉದ್ಯಮಕ್ಕೆ ಕಾಲಿಡಲು ಮುಂದಾಗಿದ್ದು, ಇದರ ಭಾಗವಾಗಿ ಜಗತ್ತಿನಾದ್ಯಂತ ಬಹುಕೋಟಿ ಮೌಲ್ಯದ ಆಸ್ತಿಗಳನ್ನು ಖರೀದಿಸಿದೆ. ಈ ಕಟ್ಟಡಗಳನ್ನು ಐಷಾರಾಮಿ ಹೋಟೆಲ್ ಗಳನ್ನಾಗಿ ಬದಲಾಯಿಸುವ ಪ್ರಯತ್ನದಲ್ಲಿದೆ ಕೂಡ.
ವಿಶ್ವದ ನಂ. 1 ಶ್ರೀಮಂತ ವ್ಯಕ್ತಿಗೆ ಈ ಕ್ಷೇತ್ರದಲ್ಲಿ ಪೈಪೋಟಿ ನೀಡಲಿರೋ ಏಷ್ಯಾದ ನಂ. 1 ಶ್ರೀಮಂತ ಮುಖೇಶ್ ಅಂಬಾನಿ!
ಇನ್ನು ಅಂಬಾನಿ ಕುಟುಂಬದ ಅತ್ಯಂತ ದುಬಾರಿ ಆಸ್ತಿಯೆಂದ್ರೆ ಅದು ಆಂಟಿಲಿಯಾ. ಇದು ಮುಂಬೈನಲ್ಲಿ ಅಂಬಾನಿ ಕುಟುಂಬ ವಾಸಿಸುತ್ತಿರುವ ಮನೆ. ಈ ಬಂಗಲೆ ವಿಶ್ವದ ಎರಡನೇ ಅತೀದುಬಾರಿ ಬಂಗಲೆಯಾಗಿದೆ. ಇದರ ಮೌಲ್ಯ 15,000 ಕೋಟಿ ರೂ. ಈಗ ಜಗತ್ತಿನ ಪ್ರಮುಖ ಸ್ಥಳಗಳಲ್ಲಿ ರಿಲಯನ್ಸ್ ಆಸ್ತಿಗಳನ್ನು ಖರೀದಿಸುತ್ತಿದ್ದು, ಅದರಿಂದ ಸಾವಿರಾರು ಕೋಟಿ ರೂ. ಆದಾಯ ಗಳಿಸುವ ಯೋಚನೆಯಲ್ಲಿದೆ.
ಹೋಟೆಲ್ ಉದ್ಯಮಕ್ಕೆ ಸಂಬಂಧಿಸಿ ಮುಖೇಶ್ ಅಂಬಾನಿ ಅವರ ಇತ್ತೀಚಿನ ಒಪ್ಪಂದವೆಂದ್ರೆ ಅದು ತಾಜ್ ಪ್ರತಿಸ್ಪರ್ಧಿ ಒಬೆರಾಯ್ ಹೋಟೆಲ್ ಹಾಗೂ ರೆಸಾರ್ಟ್ಸ್ ಖರೀದಿ. ಒಬೆರಾಯ್ ಒಡೆತನದ ಮೂರು ಹೋಟೆಲ್ ಗಳ ನಿರ್ವಹಣೆಗೆ ಸಂಬಂಧಿಸಿ ಒಪ್ಪಂದ ಮಾಡಿಕೊಂಡಿದೆ. ಈ ಮೂರು ಹೋಟೆಲ್ ಗಳಲ್ಲಿ ಎರಡು ಭಾರತದಲ್ಲಿದ್ದು, ಒಂದು ಯುನೈಟೆಡ್ ಕಿಂಗ್ ಡಮ್ ನಲ್ಲಿದೆ. ಮುಂಬೈನಲ್ಲಿರುವ ಅನಂತ್ ವಿಲಾಸ್ ಹೋಟೆಲ್, ಯುಕೆನಲ್ಲಿರುವ ಸ್ಟೋಕ್ ಪಾರ್ಕ್ ಮ್ಯಾನರ್ ಹಾಗೂ ಗುಜರಾತ್ ನಲ್ಲಿರುವ ಇನ್ನೂ ಹೆಸರಿಡದ ಒಬೆರಾಯ್ ಒಡೆತನದ ಹೋಟೆಲ್ ನಿರ್ವಹಣೆಯನ್ನು ರಿಲಯನ್ಸ್ ಮಾಡಲಿದೆ. ರಿಲಯನ್ಸ್ ಈಗಾಗಲೇ ಒಬೆರಾಯ್ ಅವರ EIH ಲಿಮಿಟೆಡ್‌ನ 19 ಪ್ರತಿಶತವನ್ನು ಹೊಂದಿದೆ ಎಂಬುದನ್ನು ಗಮನಿಸಬೇಕು.
ಮುಕೇಶ್ ಅಂಬಾನಿಯವರ ಪುತ್ರ ಅನಂತ್ ಅಂಬಾನಿಯವರ ಹೆಸರಿಟ್ಟಿರುವ ಅನಂತ್ ವಿಲಾಸ್ ಹೋಟೆಲ್ ಅನ್ನು ಮುಂಬೈನ ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್ (BKC) ನಲ್ಲಿ ಸ್ಥಾಪಿಸುತ್ತಿರುವ ಬಗ್ಗೆ ವರದಿಯಾಗಿದೆ.
ಬಿಲಿಯನೇರ್ ಮುಕೇಶ್ ಅಂಬಾನಿಗೆ ಕೊಲೆ ಬೆದರಿಕೆ: 20 ಕೋಟಿ ರೂ.ಗೆ ಬೇಡಿಕೆ ಇಟ್ಟು ಇಮೇಲ್!
ಮುಖೇಶ್ ಅಂಬಾನಿ ಅವರ ಅತ್ಯಂತ ದುಬಾರಿ ಆಸ್ತಿಗಳಲ್ಲಿ ನ್ಯೂಯಾರ್ಕ್ ನಲ್ಲಿ 2022ರಲ್ಲಿ ಖರೀದಿಸಿದ ಮ್ಯಾಂಡರಿನ್ ಒರಿಯೆಂಟಲ್ ಹೋಟೆಲ್ ಸೇರಿದೆ. ಈ ಹೋಟೆಲ್ ಅನ್ನು 98.15 ಮಿಲಿಯನ್ ಅಮೆರಿಕನ್ ಡಾಲರ್ ಮೊತ್ತಕ್ಕೆ (ಭಾರತೀಯ ಕರೆನ್ಸಿಯಲ್ಲಿ 817 ಕೋಟಿ ರೂ.) ಖರೀದಿಸಲಾಗಿತ್ತು. ರಿಲಯನ್ಸ್ ಮತ್ತು ಒಬೆರಾಯ್ ಒಟ್ಟು 59 ಕೊಠಡಿಗಳನ್ನು ಹೊಂದಿರುವ ಸ್ಟೋಕ್ ಪಾರ್ಕ್ ಆಸ್ತಿಯನ್ನು ನಿರ್ವಹಿಸಲು ಮತ್ತು ವಾಣಿಜ್ಯೀಕರಣಗೊಳಿಸಲು ಕೈಜೋಡಿಸಿದ್ದಾರೆ. ರಿಲಯನ್ಸ್ 2021 ರಲ್ಲಿ ಯುಕೆಯಲ್ಲಿ ಬೃಹತ್ ಆಸ್ತಿಯನ್ನು 529 ಕೋಟಿ ರೂ.ಗೆ ಖರೀದಿಸಿತ್ತು.
ಇನ್ನು ಮುಖೇಶ್ ಹಾಗೂ ನೀತಾ ಅಂಬಾನಿ ದುಬೈ ಪಾಮ್ ಜುಮೆರ್ಹದಲ್ಲಿ 665 ಕೋಟಿ ರೂ. ಅಮೆರಿಕನ್ ಡಾಲರ್ ಮೌಲ್ಯದ ದೊಡ್ಡ ಕಟ್ಟಡ ಖರೀದಿಸಿದ್ದಾರೆ. ಇದರಲ್ಲಿ 10 ಸ್ಪಾಗಳು, 2 ಸ್ವಿಮ್ಮಿಂಗ್ ಫೂಲ್ಸ್, ಒಂದು ಬೀಚ್ ಹಾಗೂ ಅನೇಕ ಮೂಲಸೌಕರ್ಯಗಳಿವೆ. ರಜೆಯ ಮಜಾ ಪಡೆಯಲು ರೆಸಾರ್ಟ್ ಗಳಿಗೆ ಭೇಟಿ ನೀಡೋರಿಗೆ ಇದು ಹೇಳಿ ಮಾಡಿಸಿದ ತಾಣ.