ಇದೇ ಮೊದಲ ಬಾರಿಗೆ ನಷ್ಟದಲ್ಲಿದೆ ಮುಖೇಶ್ ಅಂಬಾನಿ ಕಂಪನಿ! ಮುಖೇಶ್ ಅಂಬಾನಿ ಒಡೆತನದ  ಈಸ್ಟ್-ವೆಸ್ಟ್ ನ್ಯಾಚುರಲ್ ಗ್ಯಾಸ್ ಪೈಪ್‌ಲೈನ್! ನಷ್ಟದಲ್ಲಿರುವ ಕಂಪನಿ ಮಾರಾಟ ಮಾಡಲು ಮುಂದಾದ ಮುಖೇಶ್ ಅಂಬಾನಿ! ಈಸ್ಟ್-ವೆಸ್ಟ್ ನ್ಯಾಚುರಲ್ ಗ್ಯಾಸ್ ಪೈಪ್‌ಲೈನ್ ಕೊಳ್ಳಲಿದ್ದಾರೆ ಕೆನಡಾದ ಹೂಡಿಕೆದಾರ! ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ನಿಯಂತ್ರಕ ಮಂಡಳಿ ಅನುಮತಿ 

ನವದೆಹಲಿ(ಅ.28): ರಿಲಯನ್ಸ್ ಮುಖ್ಯಸ್ಥ ಮುಖೇಶ್ ಅಂಬಾನಿ ಮುಟ್ಟಿದ್ದೇಲ್ಲವೂ ಚಿನ್ನವೇ. ಮುಖೇಶ್ ಯಾವುದೇ ಕ್ಷೇತ್ರದಲ್ಲಿ ಹೂಡಿಕೆ ಮಾಡಲಿ, ಅದರಲ್ಲಿ ಅವರು ಯಶಸ್ಸು ಕಾಣುವುದು ಶತಸಿದ್ಧ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಆದರೆ ಇದೇ ಮೊದಲ ಬಾರಿಗೆ ಮುಖೇಶ್ ವ್ಯಾಪಾರದ ಲೆಕ್ಕಾಚಾರದಲ್ಲಿ ಮುಗ್ಗರಿಸಿದ್ದಾರೆ. ಮುಖೇಶ್ ಅಂಬಾನಿ ಒಡೆತನದ ಈಸ್ಟ್-ವೆಸ್ಟ್ ನ್ಯಾಚುರಲ್ ಗ್ಯಾಸ್ ಪೈಪ್‌ಲೈನ್ ನಷ್ಟದಲ್ಲಿದ್ದು, ಅದನ್ನು ಮಾರಾಟ ಮಾಡಲು ಮುಖೇಶ್ ನಿರ್ಧರಿಸಿದ್ದಾರೆ.

ಹೌದು, ಮುಖೇಶ್ ಅಂಬಾನಿ ಒಡೆತನದ ಈಸ್ಟ್-ವೆಸ್ಟ್ ನ್ಯಾಚುರಲ್ ಗ್ಯಾಸ್ ಪೈಪ್‌ಲೈನ್ ನಷ್ಟದಲ್ಲಿದ್ದು, ಇದನ್ನು ಕೆನಡಾದ ಹೂಡಿಕೆದಾರ ಬ್ರೂಕ್ ಫೀಲ್ಡ್ ಖರೀದಿಸಲು ಮುಂದೆ ಬಂದಿದ್ದಾರೆ.

ಆಂಧ್ರಪ್ರದೇಶದ ಕಾಕಿನಾಡದಿಂದ ಗುಜರಾತ್‌ನ ಬರೂಚ್ ವರೆಗಿನ ಒಟ್ಟು 1,400 ಕಿ.ಮೀ ಉದ್ದದ ಈ ಪೈಪ್‌ಲೈನ್ ಅಂಬಾನಿಗೆ ನಿರೀಕ್ಷಿತ ಲಾಭ ತಂದು ಕೊಟ್ಟಿಲ್ಲ ಎನ್ನಲಾಗಿದೆ. ಈ ಯೋಜನೆ ದಿನಕ್ಕೆ 80 ಮಿಲಿಯನ್ ಕ್ಯೂಬಿಕ್ ಮೀಟರ್ ನೈಸರ್ಗಿಕ ಇಂಧನವನ್ನು ಉತ್ಪಾದಿಸುತ್ತಿತ್ತು.

ಇನ್ನು ಅಂಬಾನಿ ಈ ಪೈಪ್ ಲೈನ್ ಅನ್ನು ಕೆನಡಾದ ಹೂಡಿಕೆದಾರ ಬ್ರೂಕ್ ಫೀಲ್ಡ್ ಅವರಿಗೆ ಮಾರಾಟ ಮಾಡಲು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ನಿಯಂತ್ರಕ ಮಂಡಳಿ ಅನುಮತಿ ನೀಡಿದೆ ಎನ್ನಲಾಗಿದೆ.