ಭಾರತದಲ್ಲಿ ಹೆಚ್ಚು ಟ್ಯಾಕ್ಸ್ ಪಾವತಿದಾರರು ಯಾರು? ಅಂಬಾನಿ, ಅದಾನಿ ಇವರಲ್ಲಿ ಭಾರತ ಸರ್ಕಾರದ ಖಜಾನೆ ತುಂಬಿಸೋರು ಯಾರು?
ಆದಾಯ ತೆರಿಗೆ ಇಲಾಖೆ ಪ್ರಕಾರ, ಯಾವ ಕಂಪನಿಗಳು ಎಷ್ಟು ತೆರಿಗೆ ಪಾವತಿಸುತ್ತವೆ ಎಂಬುದರ ಮಾಹಿತಿ ಬಹಿರಂಗಗೊಂಡಿದೆ. ಹಾಗೆ ಅತಿ ಹೆಚ್ಚು ತೆರಿಗೆ ಪಾವತಿಸುವ ತೆರಿಗೆದಾರರ ಅನ್ನೋ ವಿಷಯ ರಿವೀಲ್ ಆಗಿದೆ.
ನವದೆಹಲಿ:ಭಾರತದಲ್ಲಿ ನಾಗರೀಕರು ಹಲವು ಬಗೆಯ ತೆರಿಗೆಗಳನ್ನು ಪಾವತಿಸಬೇಕಾಗುತ್ತದೆ. ಇದರಲ್ಲಿ ಜಿಎಸ್‌ಟಿ, ಕ್ಯಾಪಿಟಲ್ ಗೇನ್ ಎಂಬ ತೆರಿಗೆಗಳು ಸೇರಿವೆ. ಪಡೆಯುವ ಸಂಬಳ ಅಥವಾ ವ್ಯವಹಾರದಿಂದ ಬರೋ ಆದಾಯದ ಮೇಲೆ ನಾವೆಲ್ಲರೂ ತೆರಿಗೆಯನ್ನು ಪಾವತಿಸಬೇಕಾಗುತ್ತದೆ. 2022-23ರ ಆರ್ಥಿಕ ವರ್ಷದಲ್ಲಿ ಅತಿಹೆಚ್ಚು ತೆರಿಗೆ ಪಾವತಿದಾರರ ಪೈಕಿ ಉದ್ಯಮಿಗಳಾದ ಮುಕೇಶ್ ಅಂಬಾನಿ (Mukesh Ambani) ಮತ್ತು ಅನಿಲ್ ಅಂಬಾನಿಯವರ (Anil Ambani) ರಿಲಯನ್ಸ್ ಇಂಡಸ್ಟ್ರೀಸ್ (Reliance Industries) ಟಾಪ್‌ನಲ್ಲಿದ್ದರು. ಇದೇ ಲಿಸ್ಟ್‌ನಲ್ಲಿ ಟಾಟಾ ಗ್ರೂಪ್, ಟಾಟಾ ಕನ್ಸಲ್ಸಟೆನ್ಸಿ ಸರ್ವಿಸ್ (Tata Consultancy Services), ಟಾಟಾ ಸ್ಟೀಲ್ (Tata Steal) ಅಂತಹ ದೊಡ್ಡ ಕಂಪನಿಗಳಿದ್ದವು. ಆದ್ರೆ ದೇಶದ ಎರಡನೇ ಶ್ರೀಮಂತ ವ್ಯಕ್ತಿಯಾಗಿರುವ ಗೌತಮ್ ಅದಾನಿಯವರ (Gautam Adani) ಯಾವುದೇ ಕಂಪನಿ ಟಾಪ್ 10ರಲ್ಲಿ ಇರಲಿಲ್ಲ.
ಆದಾಯ ತೆರಿಗೆ ಇಲಾಖೆಯ ಪ್ರಕಾರ, ಕ್ರಿಕೆಟಿಗ ಮಹೇಂದ್ರ ಸಿಂಗ್ ಧೋನಿ (Mahendra Singh Dhoni) ಭಾರತದಲ್ಲಿ ಅತಿ ಹೆಚ್ಚು ತೆರಿಗೆ ಪಾವತಿಸಿದವರಾಗಿದ್ದಾರೆ. ಧೋನಿ ಬಳಿಕ ಬಾಲಿವುಡ್ ನಟ ಅಕ್ಷಯ್ ಕುಮಾರ್ (Akshay Kumar) ಎರಡನೇ ಸ್ಥಾನದಲ್ಲಿದ್ದಾರೆ. ಮಹೇಂದ್ರ ಸಿಂಗ್ ಧೋನಿ 38 ಕೋಟಿ ರೂ. ಮತ್ತು ಅಕ್ಷಯ್ ಕುಮಾರ್ 29.5 ಕೋಟಿ ರೂಪಾಯಿ ತೆರಿಗೆಯನ್ನು ಪಾವತಿಸಿದ್ದಾರೆ. ಕೆಲ ವರದಿಗಳ ಪ್ರಕಾರ, ಜೆಫ್ ಬೆಜೋಸ್ (Jef Bezos) ಎಂಬವರು ಅಮೆರಿಕಾ ಸರ್ಕಾರಕ್ಕೆ 2014 ಮತ್ತು 2018ರ ಅವಧಿ ನಡುವೆ 97.3 ಕೋಟಿ ಡಾಲರ್ ತೆರಿಗೆ ಪಾವತಿ ಮಾಡಿದ್ದಾರೆ. ಜೆಫ್ ಬೆಜೋಸ್ ಅತಿ ಹೆಚ್ಚು ತೆರಿಗೆ ಪಾವತಿಸುವ ವ್ಯಕ್ತಿಯಾಗಿದ್ದಾರೆ.
ಕಳೆದ 21 ವರ್ಷಗಳಿಂದ ಫಾರ್ಚುನ್ ಗ್ಲೋಬಲ್ 500ರ ಲಿಸ್ಟ್‌ನಲ್ಲಿ ರಿಲಯನ್ಸ್ ಇಂಡಸ್ಟ್ರೀಸ್ ತನ್ನ ಸ್ಥಾನ ಕಾಯ್ದುಕೊಂಡಿದೆ. ರಿಲಯನ್ಸ್ ಇಂಡಸ್ಟ್ರೀಸ್ 20,376 ಕೋಟಿ ರೂಪಾಯಿ ತೆರಿಗೆ ಪಾವತಿಸುವ ಮೂಲಕ ಮೊದಲ ಸ್ಥಾನದಲ್ಲಿದೆ. ಆಯಿಲ್ ನಿಂದ ಟೆಲಿಕಾಂ ಸೇರಿದಂತೆ ಎಲ್ಲಾ ವಲಯದಲ್ಲಿ ಯೂ ವ್ಯಾಪಾರ ಹೊಂದಿರುವ ರಿಲಯನ್ಸ್ ಇಂಡಸ್ಟ್ರೀಸ್ ಒಟ್ಟು ಆದಾಯ 9,74,864 ಕೋಟಿ ರೂಪಾಯಿ ಆಗಿದೆ. ತೆರಿಗೆ ಪಾವತಿದಾರರ ಎರಡನೇ ಸ್ಥಾನದಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (State Bank Of India) ಇದೆ. 3,50,845 ಕೋಟಿ ರೂಪಾಯಿ ಆದಾಯ ಹೊಂದಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಭಾರತ ಸರ್ಕಾರಕ್ಕೆ 16,973 ಕೋಟಿ ರೂ. ತೆರಿಗೆಯನ್ನು ಪಾವತಿಸಿದೆ.
22000 ಕೋಟಿ ಹೂಡಿಕೆ, 40000 ಉದ್ಯೋಗ ಸೃಷ್ಟಿ; ಭಾರತಕ್ಕೆ ಬಂದ ಅಮೆರಿಕದ ಕಂಪನಿ, ಮೋದಿ-ಸಿದ್ದರಾಮಯ್ಯ ಜೊತೆ ಚರ್ಚೆ
ಇನ್ನು ಮೂರನೇ ಸ್ಥಾನದಲ್ಲಿ ಹೆಚ್‌ಡಿಎಫ್‌ಸಿ ಬ್ಯಾಂಕ್ (HDFC Bank) ಇದ್ದು, 15,350 ಕೋಟಿ ರೂಪಾಯಿ ತೆರಿಗೆ ಪಾವತಿಸುತ್ತದೆ. ಟಾಟಾ ಕನ್ಸಲ್ಸಟೆನ್ಸಿ ಸರ್ವಿಸ್ ನಾಲ್ಕನೇ ಸ್ಥಾನದಲ್ಲಿದ್ದು, ಭಾರತ ಸರ್ಕಾರಕ್ಕೆ 14,604 ಕೋಟಿ ರೂಪಾಯಿ ತೆರಿಗೆಯನ್ನು ಪಾವತಿಸಿದೆ. ಐದನೇ ಸ್ಥಾನದಲ್ಲಿರುವ ಐಸಿಐಸಿಐ ಬ್ಯಾಂಕ್ (ICICI Bank) 11,973 ಕೋಟಿ ರೂಪಾಯಿ ಪಾವತಿಸಿದೆ.
ಅರನೇ ಸ್ಥಾನದಲ್ಲಿರುವ ಓಎನ್‌ಜಿಸಿ (ONGC) ಸಾರ್ವಜನಿಕ ವಲಯದಲ್ಲಿರುವ ಆಯಿಲ್ ಮಾರ್ಕೆಟಿಂಗ್ ಕಂಪನಿಯಾಗಿದೆ. ಇದು ಭಾರತ ಸರ್ಕಾರಕ್ಕೆ 10,273 ಕೋಟಿ ರೂಪಾಯಿ ತೆರಿಗೆಯನ್ನು ಪಾವತಿಸಿದೆ. ಇನ್ನು ಟಾಟಾ ಸ್ಟೀಲ್ (TATA Steal) 10,160 ಕೋಟಿ ರೂ., ಕೋಲ್ ಇಂಡಿಯಾ (Coal India) 9,876 ಕೋಟಿ ರೂ., ಇನ್ಫೋಸಿಸ್ (Infosys) 9,214 ಕೋಟಿ ರೂ ಮತ್ತು ಆಕ್ಸಿಸ್ ಬ್ಯಾಂಕ್ (Axis Bank) 7,326 ಕೋಟಿ ರೂಪಾಯಿ ತೆರಿಗೆ ಪಾವತಿಸುವ ಮೂಲಕ ಟಾಪ್ 10 ಸ್ಥಾನದಲ್ಲಿದೆ.
ಅಂಬಾನಿ ಕುಟುಂಬಕ್ಕೆ ಬಡತನ ಬಂತಾ..? ಮೊಟ್ಟ ಮೊದಲ ಬಾರಿಗೆ ಒಂದೇ ನೆಕ್ಲೇಸ್ ಎರಡು ಬಾರಿ ಧರಿಸಿದ ನೀತಾ!