ನವದೆಹಲಿ[ಮಾ.06]: ರಿಲಯನ್ಸ್‌ ಇಂಡಸ್ಟ್ರೀಸ್‌ ಮುಖ್ಯಸ್ಥ ಮುಕೇಶ್‌ ಅಂಬಾನಿ ಫೋರ್ಬ್ಸ್ ವಿಶ್ವದ ಶ್ರೀಮಂತ ವ್ಯಕ್ತಿಗಳ ಪಟ್ಟಿಯಲ್ಲಿ 13ನೇ ಸ್ಥಾನ ಪಡೆದಿದ್ದಾರೆ. 3.5 ಲಕ್ಷ ಕೋಟಿ ರು. ಆಸ್ತಿಯಯೊಂದಿಗೆ ಅವರು ಈ ಸ್ಥಾನ ಪಡೆದಿದ್ದಾರೆ.

ಇನ್ನು 9.17 ಲಕ್ಷ ಕೋಟಿ ರು. ಆಸ್ತಿಯೊಂದಿಗೆ ಅಮೆಜಾನ್‌ ಸಂಸ್ಥಾಪಕ ಜೆಫ್‌ ಬೆಜೋಸ್‌ ವಿಶ್ವದ ನಂ.1 ಶ್ರೀಮಂತರಾಗಿ ಹೊರಹೊಮ್ಮಿದ್ದಾರೆ.

ಇನ್ನು ಕರ್ನಾಟಕ ಮೂಲದ ವಿಪ್ರೋ ಅಧ್ಯಕ್ಷ ಅಜೀಂ ಪ್ರೇಮ್‌ ಜೀ ಅವರು 22.6 ಬಿಲಿಯನ್‌ ಡಾಲರ್‌(1.5 ಲಕ್ಷ ಕೋಟಿ ರು.) ಮೂಲಕ 36ನೇ ರಾರ‍ಯಂಕ್‌, ಬಯೋಕಾನ್‌ ಸಂಸ್ಥಾಪಕಿ ಕಿರಣ್‌ ಮಜೂಂದಾರ್‌ ಶಾ(617) ಹಾಗೂ ಇಸ್ಫೋಸಿಸ್‌ ಸಹ ಸಂಸ್ಥಾಪಕ ಎನ್‌.ಆರ್‌. ನಾರಾಯಣ ಮೂರ್ತಿ ಅವರು ಈ ಪಟ್ಟಿಯಲ್ಲಿ 962ನೇ ಸ್ಥಾನ ಪಡೆದಿದ್ದಾರೆ.