Asianet Suvarna News Asianet Suvarna News

Union Budget 2023 ಮಧ್ಯಮ ವರ್ಗ ಸೇರಿದಂತೆ ಪ್ರತಿ ಕ್ಷೇತ್ರಕ್ಕೆ ಭರಪೂರ ಕೊಡುಗೆ, ಬಜೆಟ್ ಮೇಲೆ ಮೋದಿ ಭಾಷಣ!

ನಿರ್ಮಲಾ ಸೀತಾರಾಮನ್ ಬಜೆಟ್ ಮಂಡನೆ ಬಳಿಕ ಇದೀಗ ಪ್ರಧಾನಿ ನರೇಂದ್ರ ಮೋದಿ ಬಜೆಟ್ ಮೇಲೆ ಭಾಷಣ ಮಾಡಿದ್ದಾರೆ. ಮಧ್ಯಮ ವರ್ಗ, ಗೃಹಿಣಿಯರಿಗೆ ಉಳಿಯಾ ಯೋಜನೆ, ವಿಶ್ವಕರ್ಮ ಸಮುದಾಯಕ್ಕೆ ಪ್ರೋತ್ಸಾಹ ಸೇರಿದಂತೆ ಹೊಸ ಭಾರತದ ನಿರ್ಮಾಣದಲ್ಲಿ ಬಜೆಟ್ ಸಹಕಾರದ ಕುರಿತು ಮೋದಿ ಮಾತನಾಡಿದ್ದಾರೆ. ಮೋದಿ ಭಾಷಣದ ವಿವರ ಇಲ್ಲಿದೆ. 

Middle class to Women savings Budget will meet the hopes and aspiration of common people of India says PM Modi ckm
Author
First Published Feb 1, 2023, 2:47 PM IST

ನವದೆಹಲಿ(ಫೆ.01) ಅಮೃತ ಕಾಲದಲ್ಲಿ ಮಂಡಿಸಿದ ಮೊದಲ ಬಜೆಟ್ ಭಾರತವನ್ನು ಅಭಿವೃದ್ಧಿ ಪಥದಲ್ಲಿ ಕೊಂಡಯ್ಯಲು ಸಹಕಾರಿಯಾಗಿದೆ. ಈ ಬಜೆಟ್ ವಂಚಿತರಿಗ ಬರಪೂರ ಕೊಡುಗೆ ನೀಡಿದೆ. ಬಡವರು, ಮಧ್ಯಮ ವರ್ಗ, ರೈತರು ಸೇರಿದಂತೆ ಎಲ್ಲಾ ವರ್ಗದ ಜನರ ಕನಸನ್ನು ನನಸಾಗಿಸಲಿದೆ. ಈ ಐತಿಹಾಸಿಕ ಬಜೆಟ್ ಮಂಡಿಸಿದ ವಿತ್ತ ಸಚಿವೆ ಹಾಗೂ ಇಡೀ ತಂಡಕ್ಕೆ ಅಭಿವನಂದನೆ ಸಲ್ಲಿಸುತ್ತೇನೆ ಎಂದು ಮೋದಿ ತಮ್ಮ ಬಜೆಟ್ ಮೇಲಿನ ಭಾಷಣ ಆರಂಭಿಸಿದರು.

ಆತ್ಮೀಯರೆ, ಪರಂಪರಾಗತ ರೂಪದಲ್ಲಿ ಕಠಿಣ ಪರಿಶ್ರಮದ ಮೂಲಕ ಭಾರತ ಅಭಿವೃದ್ಧಿಯಲ್ಲಿ ಮಹತ್ವದ ಪಾತ್ರ ನಿರ್ವಹಿಸುತ್ತಿರುವ ವಿಶ್ವಕರ್ಮ ಸಮುದಾಯಕ್ಕೆ ಇದೇ ಮೊದಲ ಬಾರಿಗೆ ಬಜೆಟ್‌ನಲ್ಲಿ ಹಲವು ಪ್ರೋತ್ಸಾಹ ಯೋಜನೆಗಳನ್ನು ಜಾರಿಗೆ ತಂದಿದೆ. ಈ ಸಮುದಾಯದ ಜನರಿಗೆ ತರಬೇತಿ, ತಂತ್ರಜ್ಞಾನ, ಸಾಲ ಸೇರಿದಂತೆ ಎಲ್ಲಾ ಸೌಲಭ್ಯಗಳನ್ನು ನೀಡಲಿದೆ. ಪಿಎಂ ವಿಶ್ವಕರ್ಮ ಕೌಶಲ್ಯ ಯೋಜನೆ ಅಡಿಯಲ್ಲಿ ಕೋಟ್ಯಾಂತರ ವಿಶ್ವಕರ್ಮ ಸಮುದಾಯದಲ್ಲಿ ಮಹತ್ತರ ಬದಲಾವಣೆ ಆಗಲಿದೆ ಎಂದು ಮೋದಿ ಹೇಳಿದ್ದಾರೆ.

Union Budget 2023 ಆಯವ್ಯಯ ಮಂಡನೆ ಬಳಿಕ ಯಾವುದು ದುಬಾರಿ, ಯಾವುದು ಅಗ್ಗ?

ಗೃಹಣಿಯರ ಜೀವನ ಸುಲಭವಾಗಿಸಲು ಕಳೆದ ವರ್ಷ ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. ಜಲಜೀವನ್ ಮಿಷನ್, ಪಿಎಂ ಆವಾಸ್ ಮಿಶನ್ ಸೇರಿದಂತೆ ಹಲವು ಯೋಜನೆ ಜಾರಿಗೆ ತಂದಿದೆ. ಇದರ ಜೊತೆಗೆ ಮಹಿಳೆಯರ ಸ್ವಯಂ ಸೇವ ಸಂಘಗಳು ಭಾರತದ ಆರ್ಥಿಕತೆಯಲ್ಲಿ ಮಹತ್ತರ ಪಾತ್ರ ನಿರ್ವಹಿಸುತ್ತಿದೆ. ಹೀಗಾಗಿ ಈ ಗುಂಪುಗಳಿಗೆ ಮತ್ತಷ್ಟು ಪ್ರೋತ್ಸಾಹ ನೀಡಲು ಈ ಬಜೆಟ್‌ನಲ್ಲಿ ಘೋಷಿಸಲಾಗಿದೆ. ಜನಧನ್ ಖಾತೆ ಬಳಿಕ ಸಾಮಾನ್ಯ ಗೃಹಣಿಯರಿಗೆ ಮಹಿಳಾ ಸಮ್ಮಾನ್ ಬಚತ್ ಯೋಜನೆ ಜಾರಿಗೆ ತಂದಿದೆ. ಈ ಮೂಲಕ ಮಹಿಳೆಯರು, ಗೃಹಿಣಿಯರು ಉಳಿತಾಯದ ಮೂಲಕ ಶೇಕಡಾ 7.5 ರಷ್ಟು ಬಡ್ಡಿಯನ್ನು ಪಡೆಯಲಿದ್ದಾರೆ ಎಂದು ಮೋದಿ ಹೇಳಿದ್ದಾರೆ.

ಸಹಕಾರ, ಗ್ರಾಮೀಣ ಅರ್ಥವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸುವ ಬಜೆಟ್ ಇದಾಗಿದೆ. ವಿಶ್ವದ ಅತೀ ದೊಡ್ಡ ಆಹಾರ ಶೇಖರ ಸಂಗ್ರಹಣಾ ಯೋಜನೆಯನ್ನು ಜಾರಿಗೆ ತರಲಾಗಿದೆ. ಇದರ ಜೊತೆಗೆ ಹಾಲು ಹಾಗೂ ಮತ್ಸ ಉತ್ಪಾದನೆಯಲ್ಲಿ ಮತ್ತಷ್ಟು ಅಭಿವೃದ್ಧಿ ಸಾಧಿಸುಲ ಹಲವು ಸುಂಕಗಳನ್ನು ಕಡಿತಗೊಳಿಸಲಾಗಿದೆ. 

ಡಿಜಿಟಲ್ ಸೆಕ್ಟರ್‌ನಿಂದ ಕೃಷಿ ಕ್ಷೇತ್ರದವರೆಗೆ ಹಲವು ಬದಲಾವಣೆಯಾಗಿದೆ. ಭಾರತ ಸಿರಿಧಾನ್ಯಗಳ ವರ್ಷವಾಗಿ ಆಚರಿಸುತ್ತಿದೆ. ಭಾರತದ ಸಿರಿಧಾನ್ಯ ವಿಶ್ವದ ಮೂಲೆ ಮೂಲೆ ತಲುಪಿದೆ. ಇದರ ಲಾಭ ಸಣ್ಣ ಗ್ರಾಮದಲ್ಲಿರುವ ಸಣ್ಣ ರೈತನಿಗೆ ಸಿಗಲಿದೆ. ಸಿರಿಧಾನ್ಯ ಪ್ರೋತ್ಸಾಹಕ್ಕೆ ಹಲವು ಯೋಜನೆ ಜಾರಿ ಮಾಡಲಾಗಿದೆ. ಇದರಿಂದ ಸಣ್ಣ ರೈತರಿಗೆ ಆರ್ಥಿಕ ಸಬಲೀಕರಣ ಸಾಧ್ಯವಿದೆ. ಈ ಬಜೆಟ್ ಗ್ರೀನ್ ಏಕಾನಮಿ, ಗ್ರೀನ್ ಗ್ರೋಥ್ ,  ಗ್ರೀನ್ ಎನರ್ಜಿ, ಗ್ರೀನ್ ಮೂಲಭೂತ ಸೌಕರ್ಯ ಹಾಗೂ ಹಿಸರು ಉದ್ಯೋಗ ಕ್ಷೇತ್ರವನ್ನು ಮತ್ತಷ್ಟು ಬಲಿಷ್ಠಗೊಳಿಸಲಿದೆ ಎಂದರು.

Union Budget 2023 ಮಧ್ಯಮ ವರ್ಗಕ್ಕೆ ಬಂಪರ್, ಆದಾಯ ತೆರಿಗೆ ಮಿತಿ 7 ಲಕ್ಷ ರೂಗೆ ಏರಿಕೆ!

ಎಲ್ಲಾ ಕ್ಷೇತ್ರದಲ್ಲಿ ಆಧುನಿಕ ಮೂಲಭೂತ ಸೌಕರ್ಯ ಬಯಸುತ್ತಿದೆ. ಅಂದರೆ ಮುಂದಿನ ಪೀಳಿಗೆಯ ಮೂಲಭೂತ ಸೌಕರ್ಯದ ಅಗತ್ಯವಿದೆ. ಈ ಬಾರಿ ಮೂಲಭೂತ ಸೌಕರ್ಯ ಹೆಚ್ಚಿಸಲು 10 ಲಕ್ಷ ಕೋಟಿ ರೂಪಾಯಿ ಮೀಸಲಿಟ್ಟಿದೆ. ಇದರಿಂದ ಯುವ ಸಮೂಹಕ್ಕೆ ಉದ್ಯೋಗ ಒದಗಿಸಲಿದೆ. ಈ ಬಜೆಟ್‌ನಲ್ಲಿ ಉದ್ಯೋಗ ಕ್ಷೇತ್ರಕ್ಕೆ ಹೊಸ ಕೂಡುಗೆ ನೀಡಿದೆ. ಮಧ್ಯಮ ಹಾಗೂ ಸಣ್ಣ ಕೈಗಾರಿಗೆ ಕ್ಷೇತ್ರದ ಉತ್ತೇಜನೆಕ್ಕೆ ಕಡಿಮೆ ಬಡ್ಡಿದರಲ್ಲಿ ಸಾಲದ ಜೊತೆಗೆ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲಾಗಿದೆ.

ಮಧ್ಯಮ ವರ್ಗದ ಕುಟುಂಬ ಪ್ರಭುತ್ವ ಸಾಧಿಸುತ್ತಿದೆ. ಸಮೃದ್ಧ ಹಾಗೂ ಅಭಿವೃದ್ಧಿ ಭಾರತದ ಕನಸಿಗೆ ಮಧ್ಯಮ ವರ್ಗ ಕುಟುಂಬ ಮತ್ತಷ್ಟು ಶಕ್ತಿ ನೀಡಿದೆ. ಭಾರತದಕ್ಕೆ ಯುವ ಶಕ್ತಿ ಯಾವ ರೀತಿ ಶಕ್ತಿ ನೀಡಿದೆಯೋ ಅದೇ ರೀತಿ ಮಧ್ಯಮ ವರ್ಗವೂ ಭಾರತದ ಶಕ್ತಿಯಾಗಿದೆ. ಮಧ್ಯಮ ವರ್ಗದ ಜೀವನ ಸುಲಭ ಹಾಗೂ ಸುಂದರಗೊಳಿಸಲು ಹಲವು ಕ್ರಮಗಳನ್ನು ಕೈಗೊಂಡಿದೆ. ಮಧ್ಯಮ ವರ್ಗದ ಆದಾಯ ತೆರಿಗೆ ಮಿತಿಯನ್ನು ಹೆಚ್ಚಿಸಿದೆ. ಈ ಮೂಲಕ ಭಾರತದ ಸಂಪೂರ್ಣ ಮಧ್ಯಮ ವರ್ಗಕ್ಕೆ ಈ ಬಜೆಟ್ ಅತೀ ಹೆಚ್ಚಿನ ಪ್ರಯೋಜನ ಹಾಗೂ ಸಹಕಾರ ನೀಡಲಿದೆ. 

ಹೊಸ ಬಜೆಟ್ ನಿಮ್ಮ ಮುಂದಿದೆ. ಹೊಸ ಕನಸುಗಳೊಂದಿಗೆ ಮುನ್ನಡೆಯೋಣ. 20247ರ ವೇಳೆಗೆ ಹೊಸ ಭಾರತವನ್ನು ಕಟ್ಟೋಣ ಎಂದು ಪ್ರಧಾನಿ ಮೋದಿ ತಮ್ಮ ಬಜೆಟ್ ಮೇಲಿನ ಭಾಷಣ ಮುಗಿಸಿದರು.
 

Follow Us:
Download App:
  • android
  • ios