ನವದೆಹಲಿ: ಮಾನಸಿಕ ಅಸ್ವಸ್ಥರಾದವರೂ ಇನ್ನು ಮುಂದೆ ತಮ್ಮ ಚಿಕಿತ್ಸೆಗೆ ಆರೋಗ್ಯ ವಿಮೆ ಪಡೆಯಬಹುದು. ಮಾನಸಿಕ ಅನಾರೋಗ್ಯಕ್ಕೂ, ದೈಹಿಕ ಆರೋಗ್ಯ ಸಮಸ್ಯೆಗಳ ರೀತಿಯಲ್ಲೇ ವೈದ್ಯಕೀಯ ವಿಮೆ ಸೌಲಭ್ಯ ನೀಡುವಂತೆ ವಿಮಾ ನಿಯಂತ್ರಕ ಮತ್ತು ಅಭಿವೃದ್ಧಿ ಪ್ರಾಧಿಕಾರ(ಐಆರ್‌ಡಿಎ) ವಿಮಾ ಕಂಪೆನಿಗಳಿಗೆ ಸೂಚಿಸಿದೆ.

ಮಾನಸಿಕ ಆರೋಗ್ಯ ಸಂರಕ್ಷಣೆ ಕಾಯ್ದೆಯ ಕಲಂ 21(4)ರ ಅನ್ವಯ ಐಆರ್‌ಡಿಎ ವಿಮಾ ಕಂಪೆನಿಗಳಿಗೆ ಈ ನಿರ್ದೇಶನ ನೀಡಿದೆ. ಕಾಯ್ದೆಯ ಪ್ರಕಾರ, ದೈಹಿಕ ಅನಾರೋಗ್ಯದ ಚಿಕಿತ್ಸೆಗೆ ದೊರೆಯುವ ವಿಮಾ ಸೌಲಭ್ಯ ಮಾನಸಿಕ ಅನಾರೋಗ್ಯದ ಚಿಕಿತ್ಸೆಗೂ ದೊರೆಯುವಂತೆ ವಿಮಾ ಸಂಸ್ಥೆಗಳು ನಿಯಮ ರೂಪಿಸುವಂತೆ ನಿರ್ದೇಶಿಸಲ್ಪಟ್ಟಿದೆ.