ರೈತರಿಗೆ ನೆರವು ನೀಡೋ ಈ ಸ್ಟಾರ್ಟ್ ಅಪ್ ವಾರ್ಷಿಕ ವಹಿವಾಟು 550 ಕೋಟಿ; ನಾಲ್ಕೇ ವರ್ಷದಲ್ಲಿ ಯಶಸ್ಸು ಕಂಡ ಗೆಳತಿಯರು
ವಿನೂತನ ಯೋಚನೆ ಹೊಂದಿರೋರಿಗೆ ಯಶಸ್ಸು ಕೂಡ ಒಲಿಯುತ್ತದೆ ಎಂಬುದಕ್ಕೆ ಬೆಂಗಳೂರು ಮೂಲದ ಈ ಸ್ಟಾರ್ಟ್ ಅಪ್ ಸಾಕ್ಷಿ.ರೈತರಿಗೆ ಜಾನುವಾರು ಖರೀದಿ-ಮಾರಾಟಕ್ಕೆ ನೆರವು ನೀಡಲು ಗೆಳತಿಯರಿಬ್ಬರು ಪ್ರಾರಂಭಿಸಿದ ಈ ಸ್ಟಾರ್ಟ್ ಅಪ್ ಈಗ ವಾರ್ಷಿಕ 550 ಕೋಟಿ ರೂ. ವಹಿವಾಟು ನಡೆಸುತ್ತಿದೆ..
Business Desk: ಉದ್ಯಮ ಪ್ರಾರಂಭಿಸುವ ಸಂದರ್ಭದಲ್ಲಿ ಸಾಕಷ್ಟು ಅಡೆತಡೆಗಳು ಎದುರಾಗೋದು ಸಹಜ. ಆದರೆ, ಅವೆಲ್ಲವನ್ನೂ ಎದುರಿಸಿ ಮುನ್ನಡೆದಾಗ ಯಶಸ್ಸು ಸಿಗುತ್ತದೆ. ಪುಟ್ಟದಾಗಿ ಉದ್ಯಮ ಪ್ರಾರಂಭಿಸಿ, ಆ ಬಳಿಕ ದೊಡ್ಡ ಯಶಸ್ಸು ಕಂಡವರು ಅನೇಕರಿದ್ದಾರೆ. ಇದು ಸ್ಟಾರ್ಟ್ ಅಪ್ ಗಳಿಗೂ ಅನ್ವಯಿಸುತ್ತದೆ. ಪುಟ್ಟದಾಗಿ ಪ್ರಾರಂಭಿಸಿದ ಸ್ಟಾರ್ಟ್ ಅಪ್ ದೊಡ್ಡ ಮಟ್ಟದ ಯಶಸ್ಸು ಕಂಡ ಅನೇಕ ನಿದರ್ಶನಗಳು ಕಾಣಸಿಗುತ್ತವೆ. ಬೆಂಗಳೂರು ಮೂಲದ 'ಆನಿಮಲ್' ಕೂಡ ಇದಕ್ಕೆ ಉತ್ತಮ ನಿದರ್ಶನ. ಬೆಂಗಳೂರು ಮೂಲದ ಈ ಸ್ಟಾರ್ಟ್ ಅಪ್ ಒಂದು ಪುಟ್ಟ ಕೋಣೆಯಲ್ಲಿ ಪ್ರಾರಂಭವಾಯಿತು. ಇಬ್ಬರು ಗೆಳತಿಯರು ಪ್ರಾರಂಭಿಸಿದ ಈ ಸಂಸ್ಥೆ ಇಂದು ವಾರ್ಷಿಕ 550 ಕೋಟಿ ರೂ. ವಹಿವಾಟು ನಡೆಸುತ್ತಿದೆ. 2019ರಲ್ಲಿ ಆನಿಮಲ್ ಪ್ರಾರಂಭವಾದ ಬಳಿಕ ಈ ತನಕ 8.5 ಲಕ್ಷ ಪ್ರಾಣಿಗಳನ್ನು ಈ ಪ್ಲಾಟ್ ಫಾರ್ಮ್ ಮೂಲಕ ಮಾರಾಟ ಮಾಡಲಾಗಿದೆ. 2019ರಲ್ಲಿ ಪ್ರಾರಂಭವಾದ ಬಳಿಕ ಆನಿಮಲ್ ಅಪ್ಲಿಕೇಷನ್ ಮೂಲಕ ಈ ತನಕ ಒಟ್ಟು ಅಂದಾಜು 4,000 ಕೋಟಿ ರೂ. ಮೌಲ್ಯದ ವಹಿವಾಟು ನಡೆದಿದೆ.
ರೈತರು ಹಾಗೂ ಅವರ ಜಾನುವಾರುಗಳ ನಡುವಿನ ಬಾಂಧವ್ಯ ಭಾರತದ ಗ್ರಾಮೀಣ ಪ್ರದೇಶದಲ್ಲಿ ಕಾಣಸಿಗುತ್ತದೆ. ಆದರೂ ದೇಶದಲ್ಲಿ ಜಾನುವಾರು ಮಾರುಕಟ್ಟೆ ಮಾತ್ರ ಸಂಘಟಿತ ರೂಪದಲ್ಲಿ ಕಾಣಸಿಗೋದಿಲ್ಲ. ಇದನ್ನು ಅರ್ಥೈಸಿಕೊಂಡ ಐಐಟಿ ದೆಹಲಿ ಹಳೆಯ ವಿದ್ಯಾರ್ಥಿಗಳಾದ ನೀತು ಯಾದವ್ ಹಾಗೂ ಕೀರ್ತಿ ಜಾಂಗ್ರ ಡಿಜಿಟಲ್ ಪ್ಲಾಟ್ ಫಾರ್ಮ್ ಮೂಲಕ ಜಾನುವಾರು ಮಾರಾಟಕ್ಕೆ ಅವಕಾಶ ಕಲ್ಪಿಸುವ ಹೊಸ ಯೋಚನೆಯೊಂದನ್ನು ಮಾಡಿದರು. ಇದರ ಫಲವಾಗಿ 'ಆನಿಮಲ್' (Animall) ಎಂಬ ಸಂಸ್ಥೆ ರೂಪ ತಾಳಿತು. ಗುರುಗ್ರಾಮವನ್ನು ಮೂಲವಾಗಿಟ್ಟುಕೊಂಡು ಕಾರ್ಯನಿರ್ವಹಿಸುತ್ತಿರುವ ಈ ಸಂಸ್ಥೆಹಾಲಿನ ಉದ್ಯಮದಲ್ಲಿ ಸಕಾರಾತ್ಮಕ ಬದಲಾವಣೆಯನ್ನು ತಂದಿದೆ.
ಭಾರತದ ಬಿಲಿಯನೇರ್ ಪುತ್ರಿ ಈಗ 18,032 ಕೋಟಿ ಬೆಲೆಬಾಳೋ ಕಂಪನಿ ಸಿಇಒ,ಈಕೆ ಸಂಪತ್ತು ಎಷ್ಟು ಕೋಟಿ ಗೊತ್ತಾ?
ಕೇವಲ ಮೂರು ತಿಂಗಳ ಅವಧಿಯಲ್ಲಿ 50 ಲಕ್ಷ ರೂ. ಬಂಡವಾಳದೊಂದಿಗೆ ನೀತು ಹಾಗೂ ಕೀರ್ತಿ 2019ರ ನವೆಂಬರ್ ನಲ್ಲಿ 'ಆನಿಮಲ್' ಸ್ಟಾರ್ಟ್ ಅಪ್ ಪ್ರಾರಂಭಿಸಿದರು. ಇವರಿಬ್ಬರ ತಂಡಕ್ಕೆ ಅನುರಾಗ್ ಬಿಸೋಯ್ ಹಾಗೂ ಲಿಬಿನ್ ವಿ. ಬಾಬು ಸೇರ್ಪಡೆಗೊಂಡರು. ಹೈನುಗಾರರ ಜೀವನಮಟ್ಟ ಸುಧಾರಿಸುವ ಹಾಗೂ ಜಾನುವಾರುಗಳ ಮಾರಾಟವನ್ನು ಸರಳಗೊಳಿಸೋದು ಆನಿಮಲ್ ಸಂಸ್ಥೆ ಉದ್ದೇಶ. 'ಆನಿಮಲ್' ಸಂಸ್ಥೆಯ ಪೂರ್ಣ ಹೆಸರು 'ಆನಿಮಲ್ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್'. ಹಸುಗಳು ಹಾಗೂ ಎಮ್ಮೆಗಳ ಖರೀದಿ ಹಾಗೂ ಮಾರಾಟದ ಆನ್ ಲೈನ್ ವ್ಯವಹಾರಕ್ಕೆ ಈ ಪ್ಲಾರ್ಟ್ ಫಾರ್ಮ್ ಅವಕಾಶ ಕಲ್ಪಿಸಿದೆ. ಇದು ಜಾನುವಾರುಗಳ ಟ್ರೇಡಿಂಗ್ ಹಾಗೂ 'ಲಿಸ್ಟಿಂಗ್ ಗೆ' ಇರುವ ಆನ್ ಲೈನ್ ಮಾರುಕಟ್ಟೆ ಆಗಿದೆ. ಈ ಅಪ್ಲಿಕೇಷನ್ ಮೂಲಕ ನೀವು ಇರುವ ಪ್ರದೇಶದ 100 ಕಿ.ಮೀ. ವ್ಯಾಪ್ತಿಯಲ್ಲಿ ಮಾರಾಟಕ್ಕಿರುವ ಪ್ರಾಣಿಗಳ ಹಾಗೂ ಖರೀದಿದಾರರ ಮಾಹಿತಿ ಪಡೆಯಬಹುದು. ಅವರೊಂದಿಗೆ ಸಂಪರ್ಕ ಕೂಡ ಸಾಧಿಸಬಹುದು.
22.5 ಕೋಟಿ ಮೌಲ್ಯದ ಐಷಾರಾಮಿ ಅಪಾರ್ಟ್‌ಮೆಂಟ್ ಖರೀದಿಸಿದ 2,24,811 ಕೋಟಿ ಮೌಲ್ಯದ ಕಂಪನಿಯ ಭಾರತದ ಮುಖ್ಯಸ್ಥೆ
ಆನಿಮಲ್ ಪ್ರಾರಂಭಿಕ ದಿನಗಳಲ್ಲಿ ಸಾಕಷ್ಟು ಸವಾಲುಗಳನ್ನು ಎದುರಿಸಿತ್ತು. ನಂತರದ ದಿನಗಳಲ್ಲಿ ಎಮ್ಮೆಗಳನ್ನು ಖರೀದಿಸಲು ಆಸಕ್ತಿ ಹೊಂದಿರುವ ಜನರು ಇವರಿಗೆ ಹೆಚ್ಚಿನ ಆರ್ಡರ್ ನೀಡಲು ಪ್ರಾರಂಭಿಸಿದರು. ಇದರಿಂದ ಉದ್ಯಮದಲ್ಲಿ ಸಾಕಷ್ಟು ಪ್ರಗತಿ ಕಂಡುಬಂತು. ಈ ಸಂಸ್ಥೆಯ ಏಂಜೆಲ್ ಹೂಡಿಕೆದಾರರಲ್ಲಿ ಶಾದಿ ಡಾಟ್ ಕಾಮ್ ಸ್ಥಾಪಕರಾದ ಅನುಪಮ್ ಮಿತ್ತಲ್, ಝೊಮ್ಯಾಟೋ ಸ್ಥಾಪಕ ಹಾಗೂ ಸಿಇಒ ದೀಪೇಂದ್ರ ಗೋಯೆಲ್ . ಇವರ ಜೊತೆಗೆ ಅಂಜಲಿ ಬನ್ಸಾಲ್, ಮೋಹಿತ್ ಕುಮಾರ್ ಹಾಗೂ ಶಹಿಲ್ ಬರೌ ಕೂಡ ಸೇರಿದ್ದಾರೆ.
ಪ್ರಸ್ತುತ ಅಂದಾಜು 80ಲಕ್ಷ ರೈತರು ಆನಿಮಲ್ ಜೊತೆಗೆ ತೊಡಗಿಕೊಂಡಿದ್ದಾರೆ. ಆನಿಮಲ್ ನಿಂದ ಈ ತನಕ 850,000 ಪ್ರಾಣಿಗಳನ್ನು ಖರೀದಿಸಲಾಗಿದೆ. ಅಲ್ಲದೆ, ಆನಿಮಲ್ ಮೂಲಕ ಪ್ರತಿ ತಿಂಗಳು ಅಂದಾಜು 350 ಕೋಟಿ ರೂ. ವಹಿವಾಟು ನಡೆಸಲಾಗುತ್ತಿದೆ.