ಬರೀ 20 ಸಾವಿರ ಬಂಡವಾಳದೊಂದಿಗೆ ಮನೆಯಿಂದಲೇ ಉದ್ಯಮ ಪ್ರಾರಂಭಿಸಿದ ಈಕೆ, ಇಂದು 6000 ಕೋಟಿ ರೂ. ಕಂಪನಿ ಒಡತಿ
ದೇಶ ವಿಭಜನೆ ಸಮಯದಲ್ಲಿ ಪಾಕಿಸ್ತಾನದಿಂದ ದೆಹಲಿಗೆ ವಲಸೆ ಬಂದ ರಜನಿ ಬೆಕ್ಟರ್ 17ನೇ ವಯಸ್ಸಿಗೆ ಮದುವೆಯಾದರು.ಆದರೆ, ಅವರ ಸಾಧನೆಗೆ ಮದುವೆ ಅಡ್ಡಿಯಾಗಲಿಲ್ಲ.ಅಡುಗೆಮನೆಯಿಂದಲೇ ತಿನಿಸುಗಳನ್ನು ತಯಾರಿಸಿ ಮಾರಾಟ ಮಾಡುತ್ತಿದ್ದ ಇವರು ಇಂದು 6000 ಕೋಟಿ ರೂ. ಕಂಪನಿಯ ಒಡತಿ.
Business Desk: ನಿಮ್ಮ ಗುರಿ ಸ್ಪಷ್ಟವಾಗಿದ್ದರೆ ಹಾಗೂ ಅದನ್ನು ತಲುಪುವ ನಿಟ್ಟಿನಲ್ಲಿ ದೃಢಸಂಕಲ್ಪ ಹೊಂದಿದ್ದರೆ ನಿಮಗೆ ಯಶಸ್ಸು ಸಿಗೋದು ಖಚಿತ. ಅದನ್ನು ಯಾರಿಂದಲೂ ತಪ್ಪಿಸಲು ಸಾಧ್ಯವಿಲ್ಲ ಎಂಬುದಕ್ಕೆ ರಜನಿ ಬೆಕ್ಟರ್ ಅತ್ಯುತ್ತಮ ನಿದರ್ಶನ. ಪದ್ಮ ಶ್ರೀ ಪ್ರಶಸ್ತಿ ಪುರಸ್ಕೃತೆ ರಜನಿ ಬೆಕ್ಟರ್ ಜನಪ್ರಿಯ ಕೈಗಾರಿಕೋದ್ಯಮಿ. ಮಿಸ್ಟ್ರೆಸ್ ಬೆಕ್ಟರ್ಸ್ ಫುಡ್ ಸ್ಪೆಷಾಲಿಟೀಸ್ ಹಾಗೂ ಕ್ರಿಮಿಕ ಗ್ರೂಪ್ ಆಫ್ ಕಂಪನಿಗಳ ಒಡತಿ. ಮನೆಯ ಪುಟ್ಟ ಅಡುಗೆಮನೆಯಿಂದಲೇ ಉದ್ಯಮ ಪ್ರಯಾಣ ಆರಂಭಿಸಿದ ಬೆಕ್ಟರ್ ಇಂದು 6,700 ಕೋಟಿ ರೂ.ಗಿಂತಲೂ ಅಧಿಕ ಮಾರುಕಟ್ಟೆ ಬಂಡವಾಳ ಹೊಂದಿರುವ ಸಂಸ್ಥೆಯನ್ನು ಕಟ್ಟಿ ಬೆಳೆಸಿದ್ದಾರೆ. ಬೆಕ್ಟರ್ ಅವರ ಮಿಸ್ಟ್ರೆಸ್ ಬೆಕ್ಟರ್ಸ್ ಫುಡ್ ಸ್ಪೆಷಾಲಿಟೀಸ್ ಹಾಗೂ ಕ್ರಿಮಿಕ ಗ್ರೂಪ್ ಆಫ್ ಕಂಪನಿಗಳು ಕ್ರಿಮಿಕ ಹೆಸರಿನಡಿಯಲ್ಲಿ ಬಿಸ್ಕೆಟ್ ಗಳನ್ನು ಹಾಗೂ ಇಂಗ್ಲಿಷ್ ಒವನ್ ಬ್ರ್ಯಾಂಡ್ ಅಡಿಯಲ್ಲಿ ಬ್ರೆಡ್ ಗಳನ್ನು ಉತ್ಪಾದಿಸುತ್ತವೆ. ಪಾಕಿಸ್ತಾನದಲ್ಲಿ ಜನಿಸಿದ ಬೆಕ್ಟರ್ ಭಾರತಕ್ಕೆ ವಲಸೆ ಬಂದು ಇಲ್ಲಿ ಉದ್ಯಮ ಸ್ಥಾಪಿಸಿ ಯಶಸ್ಸು ಕಂಡ ಕಥೆ ಅನೇಕರಿಗೆ ಪ್ರೇರಣೆ.
ಯಾರು ಈ ರಜನಿ ಬೆಕ್ಟರ್ ?
ಪಾಕಿಸ್ತಾನದ ಕರಾಚಿಯಲ್ಲಿ 1940ರಲ್ಲಿ ಜನಿಸಿದ ರಜನಿ ಬೆಕ್ಟರ್ ಲಹೋರ್ ನಲ್ಲಿ ಬೆಳೆದರು. ರಜನಿ ಅವರ ತಂದೆ ಅಕೌಂಟೆಂಟ್ ಜನರಲ್ ಆಗಿದ್ದರು. ಇನ್ನು ಅವರ ಇತರ ಸಂಬಂಧಿಗಳು ಸರ್ಕಾರದಲ್ಲಿ ಉನ್ನತ ಹುದ್ದೆಗಳಲ್ಲಿದ್ದರು. ದೇಶ ವಿಭಜನೆಗೊಂಡ ಸಮಯದಲ್ಲಿ ಅಂದರೆ 1947ರಲ್ಲಿ ಬೆಕ್ಟರ್ ಕುಟುಂಬ ದೆಹಲಿಗೆ ವಲಸೆ ಬಂದಿತು. 17ನೇ ವಯಸ್ಸಿನಲ್ಲಿ ಲುಧಿಯಾನ ನಿವಾಸಿ ಧರ್ಮವೀರ್ ಬೆಕ್ಟರ್ ಅವರನ್ನು ವಿವಾಹವಾದ ರಜನಿ ಬೆಕ್ಟರ್, ಆ ಬಳಿಕ ತಮ್ಮ ಶಿಕ್ಷಣ ಪೂರ್ಣಗೊಳಿಸಿದರು. ಆಕೆ ಮಿರಂಡ ಹೌಸ್ ವಿದ್ಯಾರ್ಥಿ ಕೂಡ ಆಗಿದ್ದರು.
ಕೂಲಿ ಕೆಲಸಕ್ಕೆ ಹೋಗಿ ದಿನಕ್ಕೆ ಕೇವಲ 5 ರೂ. ಸಂಪಾದಿಸ್ತಿದ್ದ ಮಹಿಳೆ, ಈಗ ಕೋಟ್ಯಾಧಿಪತಿ!
ಬೆಕ್ಟರ್ ಅವರಿಗೆ ಹೊಸ ರೆಸಿಪಿಗಳನ್ನು ಟ್ರೈ ಮಾಡಿ ನೋಡುವುದರಲ್ಲಿ ತುಂಬಾ ಆಸಕ್ತಿಯಿತ್ತು. ಹೀಗಾಗಿ ಲುಧಿಯಾನದಲ್ಲಿ ಆ ಸಮಯದಲ್ಲಿ ಲಭ್ಯವಿದ್ದ ಅಡುಗೆ ಕೋರ್ಸ್ ಗಳಿಗೆ ಅವರು ಸೇರಿದ್ದರು. ಕುಕ್ಕೀಸ್, ಸಲಾಡ್ಸ್, ಐಸ್ ಕ್ರೀಮ್ ಹಾಗೂ ಇನ್ನೂ ಅನೇಕ ರೆಸಪಿಗಳನ್ನು ಅವರು ಟ್ರೈ ಮಾಡಿ ನೋಡುತ್ತಿದ್ದರು. ಹಾಗೆಯೇ ಅವುಗಳ ರುಚಿ ನೋಡಲು ತನ್ನ ಸ್ನೇಹಿತರು ಹಾಗೂ ಅವರ ಮಕ್ಕಳನ್ನು ಬೆಕ್ಟರ್ ಆಹ್ವಾನಿಸುತ್ತಿದ್ದರು.
ರಜನಿ ಅವರಿಗೆ ಮೂವರು ಗಂಡು ಮಕ್ಕಳು. ಇವರು ಶಾಲೆಗೆ ಹೋಗಲು ಪ್ರಾರಂಭಿಸಿದ ಬಳಿಕ ರಜನಿಗೆ ಮನೆಯಲ್ಲಿಏಕಾಂಗಿಯಾಗಿ ಸಮಯ ಕಳೆಯೋದು ಕಷ್ಟವಾಗತೊಡಗಿತು. ಸಾಕಷ್ಟು ಬೆಂಬಲ ಹಾಗೂ ಪ್ರೋತ್ಸಾಹದ ಬಳಿಕ ರಜನಿ ತನ್ನ ಉದ್ಯಮ ಪ್ರಾರಂಭಿಸುವ ನಿರ್ಧಾರಕ್ಕೆ ಬಂದರು. ಮನೆಯಲ್ಲೇ ಕೆಲವು ವಿದ್ಯಾರ್ಥಿಗಳಿಗೆ ಅಡುಗೆ ತರಗತಿಗಳನ್ನು ತೆಗೆದುಕೊಳ್ಳಲು ಪ್ರಾರಂಭಿಸಿದರು. ಆ ಬಳಿಕ ಪಂಜಾಬ್ ಕೃಷಿ ವಿಶ್ವವಿದ್ಯಾಲಯದ ಆಹಾರ ಹಾಗೂ ಡೈರಿ ತಜ್ಞರಾದ ಡಾ.ಎಸ್.ಸಿ.ಜೈನ್ ಪುಟ್ಟ ಐಸ್ ಕ್ರೀಮ್ ಶಾಪ್ ಅನ್ನು ಮನೆಯಲ್ಲಿ ತೆರೆಯಲು ನೆರವು ನೀಡಿದರು. ಇದಕ್ಕೆ 1978ರಲ್ಲಿ 20,000ರೂ. ವೆಚ್ಚವಾಗಿತ್ತು.
ಜವಾನ್ ಬೆಡಗಿಗೆ ಸಿಕ್ತು ಹೊಸ ಬಿರುದು; ಲೇಡಿ ಸೂಪರ್ ಸ್ಟಾರ್ ನಯನತಾರಾ ಈಗ ಪ್ರಭಾವಿ ಮಹಿಳಾ ಉದ್ಯಮಿ
ಈಗ ರಜನಿ ಬೆಕ್ಟರ್ ಕಂಪನಿ ಬಿಸ್ಕೆಟ್ ಗಳು, ಬ್ರೆಡ್ ಗಳು ಹಾಗೂ ಐಸ್ ಕ್ರೀಮ್ ಅನ್ನು 60ಕ್ಕೂ ಹೆಚ್ಚು ರಾಷ್ಟ್ರಗಳಿಗೆ ರಫ್ತು ಮಾಡಲಾಗುತ್ತಿದೆ. ಇನ್ನು ಮೆಕ್ ಡೊನಾಲ್ಡ್ ಹಾಗೂ ಬರ್ಗರ್ ಕಿಂಗ್ ಮುಂತಾದ ಫಾಸ್ಟ್ ಫುಡ್ ಚೈನ್ ಗಳಿಗೆ ಕೂಡ ರಜನಿ ಅವರು ಸಾಸ್ ಹಾಗೂ ಬ್ರೆಡ್ ಗಳನ್ನು ಪೂರೈಕೆ ಮಾಡುತ್ತಾರೆ. 2020ರಲ್ಲಿ ಸಂಸ್ಥೆ ಷೇರು ಮಾರುಕಟ್ಟೆಯಲ್ಲಿ ಲಿಸ್ಟ್ ಕೂಡ ಆಗಿದೆ. 2021ರಲ್ಲಿ ಬೆಕ್ಟರ್ ಅವರಿಗೆ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.