ವಿಶ್ವ ಶ್ರೀಮಂತರ ಪಟ್ಟಿಯಲ್ಲಿ ಜುಕರ್ ಬರ್ಗ್ ಗೆ 3ನೇ ಸ್ಥಾನ: ಮೊದಲೆರಡು ಸ್ಥಾನ ಯಾರದ್ದು?

First Published 7, Jul 2018, 6:13 PM IST
Mark Zuckerberg Becomes World's Third Richest Person
Highlights

ವಿಶ್ವ ಶ್ರೀಮಂತರ ಪಟ್ಟಿಯಲ್ಲಿ ಮಾರ್ಕ್ ಜುಕರ್ ಬರ್ಗ್ ಗೆ ೩ನೇಸ್ಥಾನ

ಫೇಸ್ ಬುಕ್ ಸಂಸ್ಥಾಪಕ ಮಾರ್ಕ್ ಜುಕರ್ ಬರ್ಗ್ ಗೆ ಸಿಹಿ ಸುದ್ದಿ

ಜೆಫ್ ಬೆಜೋಸ್, ಬಿಲ್ ಗೇಟ್ಸ್ ನಂತರದ ಸ್ಥಾನ ಗಳಿಸಿದ ಜುಕರ್ ಬರ್ಗ್

ಜುಕರ್ ಬರ್ಗ್ ಒಟ್ಟು ಆಸ್ತಿ ಮೌಲ್ಯ 81.6 ಶತಕೋಟಿ ಡಾಲರ್

ನ್ಯೂಯಾರ್ಕ್(ಜು.7): ಫೇಸ್ ಬುಕ್ ಸಂಸ್ಥಾಪಕ ಮಾರ್ಕ್ ಜುಕರ್ ಬರ್ಗ್ ವಿಶ್ವ ಶ್ರೀಮಂತರ ಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೆ ಏರಿಕೆ ಕಂಡಿದ್ದಾರೆ. ಅಮೆಜಾನ್ ಸಂಸ್ಥಾಪಕ ಜೆಫ್ ಬೆಜೋಸ್ ಮತ್ತು ಮೈಕ್ರೋಸಾಫ್ಟ್ ಸಹ ಸಂಸ್ಥಾಪಕ ಬಿಲ್ ಗೇಟ್ಸ್ ನಂತರದ ಸ್ಥಾನವನ್ನು ಪಡೆಯುವಲ್ಲಿ ಜುಕರ್ ಬರ್ಗ್ ಯಶಸ್ವಿಯಾಗಿದ್ದಾರೆ.

ನಿನ್ನೆ ಫೇಸ್ ಬುಕ್ ಷೇರುಗಳ ಮೌಲ್ಯ ಶೆ.2.4ರಷ್ಟು ಏರಿಕೆ ಕಂಡಿದ್ದು, ಜುಕರ್ ಬರ್ಗ್ ಶ್ರೀಮಂತರ ಪಟ್ಟಿಯಲ್ಲಿ ಮೂರನೇ ಸ್ಥಾನ ಪಡೆಯಲು ಕಾರಣವಾಗಿದೆ. ಪ್ರಸಿದ್ಧ ಉದ್ಯಮಿ ವಾರನ್ ಬಫೆಟ್ ಅವರನ್ನು ಹಿಂದಿಕ್ಕಿ ಜುಕರ್ ಬರ್ಗ್ ವಿಶ್ವ ಶ್ರೀಮಂತರ ಪಟ್ಟಿಯಲ್ಲಿ ಮೂರನೇ ಸ್ಥಾನ ಪಡೆದಿರುವುದು ವಿಶೇಷ.

ಇನ್ನು ತಂತ್ರಜ್ಞಾನ ಕ್ಷೇತ್ರಕ್ಕೆ ಸೇರಿದ ಮೂರು ಸಂಸ್ಥೆಗಳ ದಿಗ್ಗಜರು ವಿಶ್ವದ ಟಾಪ್ ಶ್ರೀಮಂತರ ಪಟ್ಟಿಯಲ್ಲಿ ಮೊದಲ ಮೂರು ಸ್ಥಾನ ಪಡೆದಿರುವುದು ಇದೇ ಮೊದಲ ಬಾರಿ ಎನ್ನಲಾಗಿದ್ದು, ಈ ಮೂಲಕ  ತಂತ್ರಜ್ಞಾನವು ಸಂಪತ್ತಿನ ಸೃಷ್ಟಿಯಲ್ಲಿ ಮುಂಚೂಣಿಯಲ್ಲಿ ನಿಲ್ಲುತ್ತದೆ ಎಂಬುದು ಮತ್ತೊಮ್ಮೆ ಸಾಬೀತಾಗಿದೆ.

ಸದ್ಯ ಮಾರ್ಕ್ ಜುಕರ್ ಬರ್ಗ್ ಅವರ ಒಟ್ಟು ಆಸ್ತಿ ಮೌಲ್ಯ 81.6 ಶತಕೋಟಿ ಡಾಲರ್ ಆಗಿದೆ.

loader