ಜನಸಾಮಾನ್ಯರಿಗೆ ಶಾಕಿಂಗ್ ನ್ಯೂಸ್; ಎಲ್ ಪಿಜಿ ಸಿಲಿಂಡರ್ ಬೆಲೆಯಲ್ಲಿ 25ರೂ. ಏರಿಕೆ
ತಿಂಗಳ ಪ್ರಾರಂಭದಲ್ಲೇ ಜನಸಾಮಾನ್ಯರ ಜೇಬಿಗೆ ಕತ್ತರಿ ಬಿದ್ದಿದೆ. ಎಲ್ ಪಿಜಿ ವಾಣಿಜ್ಯ ಸಿಲಿಂಡರ್ ಬೆಲೆಯಲ್ಲಿ ಮತ್ತೆ ಏರಿಕೆಯಾಗಿದೆ.
ನವದೆಹಲಿ (ಡಿ.1): ಈ ಆರ್ಥಿಕ ಸಾಲಿನ ಕೊನೆಯ ತಿಂಗಳಲ್ಲಿ ಎಲ್ ಪಿಜಿ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಏರಿಕೆ ಮಾಡುವ ಮೂಲಕ ಕೇಂದ್ರ ಸರ್ಕಾರ ಗ್ರಾಹಕರಿಗೆ ಶಾಕ್ ನೀಡಿದೆ. ಇಂದಿನಿಂದ (ಮಾ.1) ಜಾರಿಗೆ ಬರುವಂತೆ 19 ಕೆಜಿ ತೂಕದ ಎಲ್ ಪಿಜಿ ವಾಣಿಜ್ಯ ಸಿಲಿಂಡರ್ ಬೆಲೆಯಲ್ಲಿ 25ರೂ. ಏರಿಕೆ ಮಾಡಲಾಗಿದೆ. ಆದರೆ, ಗೃಹ ಬಳಕೆ ಸಿಲಿಂಡರ್ ಬೆಲೆಯಲ್ಲಿ ಯಾವುದೇ ಏರಿಕೆ ಮಾಡದೆ ಯಥಾಸ್ಥಿತಿ ಕಾಯ್ದುಕೊಳ್ಳಲಾಗಿದೆ. ಇದು ಗೃಹಿಣಿಯರಿಗೆ ತುಸು ನೆಮ್ಮದಿ ನೀಡಿದೆ. ಕಳೆದ ತಿಂಗಳು ಕೂಡ ಎಲ್ ಪಿಜಿ ವಾಣಿಜ್ಯ ಸಿಲಿಂಡರ್ ಬೆಲೆಯಲ್ಲಿ ಏರಿಕೆ ಮಾಡಲಾಗಿತ್ತು. ವಾಣಿಜ್ಯ ಸಿಲಿಂಡರ್ ಬೆಲೆಯೇರಿಕೆಯಿಂದ ಹೋಟೆಲ್ ಬಿಲ್ ಸೇರಿದಂತೆ ಕೆಲವು ಅಗತ್ಯ ವಸ್ತುಗಳ ಬೆಲೆಯಲ್ಲಿ ಹೆಚ್ಚಳವಾಗಲಿದೆ. ಇದು ಜನಸಾಮಾನ್ಯರ ಜೇಬಿನ ಮೇಲಿನ ಹೊರೆಯನ್ನು ಇನ್ನಷ್ಟು ಹೆಚ್ಚಿಸಲಿದೆ.
ವಾಣಿಜ್ಯ ಎಲ್ ಪಿಜಿ (LPG) ಸಿಲಿಂಡರ್ ಹೊಸ ದರವನ್ನು ಐಒಸಿಎಲ್ (IOCL) ವೆಬ್ ಸೈಟ್ ನಲ್ಲಿ ಪ್ರಕಟಿಸಲಾಗಿದೆ. ವಾಣಿಜ್ಯ ಎಲ್ ಪಿಜಿ ಸಿಲಿಂಡರ್ ದರ ದೆಹಲಿಯಲ್ಲಿ 1795ರೂ. ಇದ್ದರೆ, ಮುಂಬೈನಲ್ಲಿ 1749ರೂ. ಹಾಗೂ ಕೋಲ್ಕತ್ತದಲ್ಲಿ 1911ರೂ. ಇದೆ. ಪ್ರತಿ ತಿಂಗಳ ಆರಂಭದಲ್ಲಿ OMC ಸೇರಿದಂತೆ ಭಾರತ್ ಪೆಟ್ರೋಲಿಯಂ ಕಾರ್ಪೋರೇಶನ್, ಹಿಂದೂಸ್ಥಾನ ಪೆಟ್ರೋಲಿಯಂ ಕಾರ್ಪೋರೇಶನ್ ಎಲ್‌ಪಿಜಿ ಸಿಲಿಂಡರ್ ಬೆಲೆ ಪರಿಷ್ಕರಣೆ ಮಾಡಲಾಗುತ್ತದೆ.
ಗೃಹ ಬಳಕೆ ಸಿಲಿಂಡರ್ ಬೆಲೆಯಲ್ಲಿ ಕಳೆದ ವರ್ಷದ ಆಗಸ್ಟ್ ಬಳಿಕ ಯಾವುದೇ ಪರಿಷ್ಕರಣೆ ಮಾಡಿಲ್ಲ. 2023ರ ಆಗಸ್ಟ್ 30ರಂದು ಗೃಹ ಬಳಕೆ ಸಿಲಿಂಡರ್ ಬೆಲೆಯಲ್ಲಿ 200ರೂ. ಕಡಿತ ಮಾಡಲಾಗಿತ್ತು. ಸದ್ಯ ಬೆಲೆ ಅಷ್ಟೇ ಇದ್ದು, ವ್ಯತ್ಯಾಸವಾಗಿಲ್ಲ.
ಬಂಪರ್ ಆಫರ್: ಈ ರಾಜ್ಯದಲ್ಲಿ 428 ರೂ. ಗೆ ಸಿಗುತ್ತೆ ಎಲ್‌ಪಿಜಿ ಗ್ಯಾಸ್ ಸಿಲಿಂಡರ್!
ಕಳೆದ ತಿಂಗಳು ಕೂಡ ಎಲ್ ಪಿಜಿ ವಾಣಿಜ್ಯ ಸಿಲಿಂಡರ್ ಬೆಲೆಯಲ್ಲಿ 14ರೂ. ಹೆಚ್ಚಳ ಮಾಡಲಾಗಿತ್ತು. ಈ ವರ್ಷದ ಆರಂಭದಲ್ಲಿ ಕಮರ್ಷಿಯಲ್ ಸಿಲಿಂಡರ್ ಬೆಲೆಯಲ್ಲಿ ಕೊಂಚ ಇಳಿಕ ಮಾಡಲಾಗಿತ್ತು. ಜನವರಿ ತಿಂಗಳಲ್ಲಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ಬೆಲೆಯಲ್ಲಿ 83.5 ರೂ.ನಷ್ಟುಕಡಿತಗೊಳಿಸಲಾಗಿತ್ತು. ನವೆಂಬರ್, ಡಿಸೆಂಬರ್ ಹಾಗೂ ಜನವರಿ ಸತತ ಮೂರು ತಿಂಗಳು ಇಳಿಕೆ ಹಾದಿಯಲ್ಲಿದ್ದ ವಾಣಿಜ್ಯ ಸಿಲಿಂಡರ್ ಬೆಲೆ ಕಳೆದ ತಿಂಗಳಿಂದ ಏರಿಕೆ ಕಾಣಲು ಪ್ರಾರಂಭಿಸಿದೆ.
ಕೇಂದ್ರ ಸರ್ಕಾರ ನಿನ್ನೆ (ಫೆ. 29) ದೇಶೀಯ ನೈಸರ್ಗಿಕ ಅನಿಲದ ಬೆಲೆ ಹೆಚ್ಚಳಕ್ಕೆ ನಿರ್ಧರಿಸಿತ್ತು. ಅದರ ಬೆನ್ನಲ್ಲೇ ಇಂದು ಎಲ್ ಪಿಜಿ ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಹೆಚ್ಚಳ ಮಾಡಲಾಗಿದೆ. ಇನ್ನು ತೈಲ ಕಂಪನಿಗಳು ಜೆಟ್ ಇಂಧನ ದರದಲ್ಲಿ ಕೂಡ ಹೆಚ್ಚಳ ಮಾಡಿವೆ. ಸತತವಾಗಿ ನಾಲ್ಕು ಬಾರಿ ಜೆಟ್ ಇಂಧನ ಬೆಲೆಯಲ್ಲಿ ಇಳಿಕೆ ಮಾಡಲಾಗಿತ್ತು. ಆ ಬಳಿಕ ಈ ಏರಿಕೆ ಮಾಡಲಾಗಿದೆ. ವಿಮಾನಯಾನ ಇಂಧನದ ಹೊಸ ದರ ಕೂಡ ಇಂದಿನಿಂದ ಜಾರಿಗೆ ಬರಲಿದೆ.
ಅಕ್ಟೋಬರ್-ಡಿಸೆಂಬರ್‌ನಲ್ಲಿ ದೇಶದ ಜಿಡಿಪಿ ಶೇ.8.4ರಲ್ಲಿ ಪ್ರಗತಿ, ಕೇಂದ್ರದ ಮಾಹಿತಿ
2023ರ ಅಕ್ಟೋಬರ್ 4 ರಂದು, ಕೇಂದ್ರ ಕ್ಯಾಬಿನೆಟ್ ಅಡುಗೆ ಅನಿಲ ಸಬ್ಸಿಡಿ ಹೆಚ್ಚಿಸಿತ್ತು. ಸರಿಸುಮಾರು 96 ಮಿಲಿಯನ್ ಕಡಿಮೆ ಆದಾಯದ ಕುಟುಂಬಗಳಿಗೆ ಪ್ರತಿ ಸಿಲಿಂಡರ್‌ಗೆ ₹200 ರಿಂದ ₹300 ಕ್ಕೆ ಸಬ್ಸಿಡಿ ಹೆಚ್ಚಿಸಿತು. ಹೆಚ್ಚುವರಿ ಸಬ್ಸಿಡಿಗಳನ್ನು ಒದಗಿಸುವ ಸರ್ಕಾರದ ಕ್ರಮವು ಗ್ರಾಮೀಣ ಮಹಿಳೆಯರನ್ನು ಗುರಿಯಾಗಿಸಿಕೊಂಡಿದೆ. ಹೆಚ್ಚುವರಿ 7.5 ಮಿಲಿಯನ್ ಮಹಿಳೆಯರನ್ನು ಗುರಿಯಾಗಿಟ್ಟುಕೊಂಡು ಪ್ರಧಾನ ಮಂತ್ರಿ ಉಜ್ವಲ ಯೋಜನೆಯನ್ನು ವಿಸ್ತರಿಸಲು ಯೋಚಿಸಲಾಗಿದೆ. ಈ ವಿಸ್ತರಣೆಯು ಮುಂದಿನ ಮೂರು ವರ್ಷಗಳಲ್ಲಿ ಒಟ್ಟು ಫಲಾನುಭವಿಗಳ ಸಂಖ್ಯೆಯನ್ನು 103.5 ಮಿಲಿಯನ್‌ಗೆ (10 ಕೋಟಿ 35 ಲಕ್ಷ) ಹೆಚ್ಚಿಸಲಿದೆ.