Asianet Suvarna News Asianet Suvarna News

LIC ಪಾಲಿಸಿದಾರರಿಗೆ ಬಿಗ್ ನ್ಯೂಸ್: ಜ.31 ರಿಂದ 23 ಪ್ಲಾನ್‌ಗಳು ಬಂದ್!

LIC ಬಂದ್ ಮಾಡಲು ಹೊರಡಿದೆ 23 ಪಾಲಿಸಿ| ನ್ಯೂ ಜೀವನ್ ಆನಂದ್,ಜೀವನ್ ಉಮಂಗ್, ಜೀವನ್ ಲಕ್ಷ್ಯ್ ನಂತಹ ಪ್ರಸಿದ್ಧ ಪ್ಲಾನ್ ಗಳೂ ಬಂದ್| ಜ. 31ರೊಳಗೆ ಪಾಲಿಸಿ ಆರಂಭಿಸಿ, ಇಲ್ಲದಿದ್ದರೆ ಪ್ರೀಮಿಯಂ ಮೊತ್ತ ಡಬಲ್ ಆಗುತ್ತೆ ಎನ್ನುತ್ತಿದ್ದಾರೆ ಏಜೆಂಟ್ಸ್

LIC to close Jeevan Anand 23 insurance plans by January 31
Author
Bangalore, First Published Jan 21, 2020, 3:48 PM IST
  • Facebook
  • Twitter
  • Whatsapp

ಒಂದು ವೇಳೆ ನೀವು LICಯ ಲೈಫ್ ಇನ್ಶೂರೆನ್ಸ್ ಪಾಲಿಸಿ ಖರೀದಿಸುವ ಯೋಚನೆ ಮಾಡುತ್ತಿದ್ದರೆ, ಈ ಸುದ್ದಿ ನಿಮಗಾಗಿ. ಯಾಕೆಂದರೆ ದೇಶದ ಅತಿ ದೊಡ್ಡ ವಿಮಾ ಕಂಪನಿ LIC ಶೀಘ್ರದಲ್ಲೇ ತನ್ನ ಸುಮಾರು 23 ಪಾಲಿಸಿ ಪ್ಲಾನ್ ಗಳನ್ನು ಬಂದ್ ಮಾಡಲು ಸಜ್ಜಾಗಿದೆ. ವರದಿಗಳನ್ವಯ IRDAIಯ ಮಾರ್ಗಸೂಚಿಯನ್ವಯ ಈ ಪಾಲಿಸಿಗಳನ್ನು ಫೆ. 1 ರಿಂದ ಹೊಸ ನಿಯಮಗಳೊಂದಿಗೆ ಲಾಂಚ್ ಮಾಡಲಾಗುತ್ತದೆ.

LIC ಬಂದ್ ಮಾಡಲು ಹೊರಟಿರುವ ಪಾಲಿಸಿಗಳಲ್ಲಿ ನ್ಯೂ ಜೀವನ್ ಆನಂದ್,ಜೀವನ್ ಉಮಂಗ್, ಜೀವನ್ ಲಕ್ಷ್ಯ್ ನಂತಹ ಪ್ರಸಿದ್ಧ ಪ್ಲಾನ್ ಗಳೂ ಇವೆ.

ಗಮನಿಸಿ..ನವೆಂಬರ್ 30 ರಿಂದ LICಯ ಈ ಪಾಲಿಸಿಗಳು ಬಂದ್!

ಹೆಚ್ಚಾಗಲಿದೆ ಪ್ರೀಮಿಯಂ ಮೊತ್ತ

ಆಂಗ್ಲ ಪತ್ರಿಕೆಯ ವರದಿಯನ್ವಯ LIC ಈ ಪ್ಲಾನ್ ಗಳನ್ನು ಬಂದ್ ಮಾಡುವ ಮೂಲಕ ರಿಟರ್ನ್ ಕಡಿಮೆಗೊಳಿಸುವುದರೊಂದಿಗೆ, ಪ್ರೀಮಿಯಂ ಮೊತ್ತವನ್ನೂ ಹೆಚ್ಚಿಸುವ ಅನುಮಾನ ವ್ಯಕ್ತವಾಗಿದೆ. ಹೀಗಾಗಿ LIC ಏಜೆಂಟ್ ಗಳು ತಮ್ಮ ಗ್ರಾಹಕರ ಬಳಿ ಜ.31ಕ್ಕೂ ಮುನ್ನ ಈ ಪಾಲಿಸಿಗಳಲ್ಲಿ ಹೂಡಿಕೆ ಮಾಡಲು ಸಲಹೆ ನೀಡುತ್ತಿವೆ. 

ಯಾವೆಲ್ಲಾ ಪಾಲಿಸಿಗಳು ಬಂದ್?

* ನಾನ್ ಲಿಂಕ್ಡ್ ಇಂಡೆಪ್ಟೆಡ್ನೆಸ್ ಇನ್ಶೂರೆನ್ಸ್ ಪ್ಲಾನ್ಸ್

* ಯೂನಿಟ್ ಲಿಂಕ್ಡ್ ಇಂಡೆಪ್ಟೆಡ್ನೆಸ್ ಇನ್ಶೂರೆನ್ಸ್ ಪ್ಲಾನ್ಸ್

* ರೈಡರ್ ಪ್ಲಾನ್ 

* ನಾನ್ ಲಿಂಕ್ಡ್ ಗ್ರೂಪ್ ಇನ್ಶೂರೆನ್ಸ್ ಪ್ಲಾನ್

* ಸಿಂಗಲ್ ಪ್ರೀಮಿಯಂ ಎಂಡೋವ್ಮೆಂಟ್ ಪ್ಲಾನ್

* ನ್ಯೂ ಎಂಡೋವ್ಮೆಂಟ್ ಪ್ಲಾನ್

* ನ್ಯೂ ಮನಿ ಬ್ಯಾಕ್ -20 ಯಿಯರ್ಸ್

* ನ್ಯೂ ಜೀವನ್ ಆನಂದ್

* ಅನ್ಮೋಲ್ ಜೀವನ್ 2

* ಲಿಮಿಟೆಡ್ ಪ್ರೀಮಿಯಂ ಎಂಡೋವ್ಮೆಂಟ್ ಪ್ಲಾನ್ 

* ನ್ಯೂ ಚಿಲ್ಡ್ರನ್ ಮನಿ ಬ್ಯಾಕ್ ಪ್ಲಾನ್

* ಜೀವನ್ ಲಕ್ಷ್ಯ್

* ಜೀವನ್ ತರುಣ್

* ಜೀವನ್ ಲಾಭ್

* ನ್ಯೂ ಜೀವನ್ ಮಂಗಲ್

* ಭಾಗ್ಯ ಲಕ್ಷ್ಮೀ ಪ್ಲಾನ್

* ಆಧಾರ್ ಪಿಲ್ಲರ್

* ಆಧಾರ್ ಶಿಲಾ

* ಜೀವನ್ ಉಮಂಗ್

* ಜೀವನ್ ಶಿರೋಮನಿ

* ಭೀಮಾ ಶ್ರೀ

* LIC ಮೈಕ್ರೋ ಸೇವಿಂಗ್ಸ್

LIC to close Jeevan Anand 23 insurance plans by January 31

#Fact Check ನಷ್ಟದಲ್ಲಿದೆಯಾ LIC?: ವೈರಲ್‌ ಪೋಸ್ಟ್‌ಗೆ ಸ್ಪಷ್ಟನೆ ಕೊಟ್ಟ ವಿಮಾ ಕಂಪನಿ

LIC ತನ್ನ ಯೂನಿಟ್ ಲಿಂಕ್ಡ್ ಪ್ಲಾನ್, ನ್ಯೂ ಎಂಡೋವ್ಮೆಂಟ್ ಪ್ಲಸ್ ಪಾಲಿಸಿಯನ್ನೂ ಬಂದ್ ಮಾಡಲು ನಿರ್ಧರಿಸಿದೆ. ಅಲ್ಲದೇ LIC ಪ್ರೀಮಿಯಂ ವೇವರ್ ಬೆನಿಫಿಟ್ ರೈಡರ್ ಕೂಡಾ ಕೊನೆಗೊಳಿಸಲಾಗುತ್ತದೆ.

ಇದಕ್ಕೂ ಮೊದಲು ನವೆಂಬರ್ 30ರೊಳಗೆ ಈ ಪಾಲಿಸಿಗಳನ್ನು ಬಂದ್ ಮಾಡುವಂತೆ ಇನ್ಶೂರೆನ್ಸ್ ರೆಗ್ಯುಲೇಟರಿ ಸೂಚಿಸಿತ್ತು. ಆದರೆ ಲೈಫ್ ಇನ್ಶೂರೆನ್ಸ್ ಕೌನ್ಸಿಲ್ ಇನ್ನಿತರ ವಿಮಾ ಕಂಪನಿಗಳು ಈ ಅವಧಿಯನ್ನು ವಿಸ್ತರಿಸುವಂತೆ ಮನವಿ ಮಾಡಿಕೊಂಡಿದ್ದವು. ಹೀಗಾಗಿ ಕಂಪನಿಗಳ ಮನವಿ ಮೇರೆಗೆ ಈ ದಿನಾಂಕವನ್ನು ಜ.31ಕ್ಕೆ ನಿಗದಿಪಡಿಸಲಾಗಿದೆ.

Follow Us:
Download App:
  • android
  • ios