Asianet Suvarna News Asianet Suvarna News

ಒಟ್ಟಿಗೆ 300 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ ಎಲ್ಐಸಿ!

ಎಲ್ಐಸಿ ಹೌಸಿಂಗ್‌ ಫೈನಾನ್ಸ್ ಲಿಮಿಟೆಡ್‌ ಅರ್ಜಿ ಆಹ್ವಾನ! ಅಸಿಸ್ಟೆಂಟ್‌ ಅಸೋಸಿಯೇಟ್‌ ಮತ್ತು ಅಸಿಸ್ಟೆಂಟ್‌ ಮ್ಯಾನೇಜರ್‌ ಹುದ್ದೆ! ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಸೆಪ್ಟೆಂಬರ್ 6! ಅಕ್ಟೋಬರ್ 6 ಮತ್ತು 7 ರಂದು ಆನ್‌ಲೈನ್‌ ಪರೀಕ್ಷೆ
 

LIC invites application for Assistant Manager and other posts
Author
Bengaluru, First Published Aug 21, 2018, 5:29 PM IST

ಬೆಂಗಳೂರು(ಆ.21): ದೇಶದ ಅತಿ ದೊಡ್ಡ ಹೌಸಿಂಗ್‌ ಫೈನಾನ್ಸ್ ಕಂಪನಿಯಾಗಿರುವ ಸರ್ಕಾರಿ ಸ್ವಾಮ್ಯದ ಎಲ್ಐಸಿ ಹೌಸಿಂಗ್‌ ಫೈನಾನ್ಸ್ ಲಿಮಿಟೆಡ್‌, ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ.

ಅಸಿಸ್ಟೆಂಟ್‌ ಅಸೋಸಿಯೇಟ್‌ ಮತ್ತು ಅಸಿಸ್ಟೆಂಟ್‌ ಮ್ಯಾನೇಜರ್‌ಗಳ ನೇಮಕಕ್ಕೆ ಎಲ್ಐಸಿ ಹೌಸಿಂಗ್‌ ಫೈನಾನ್ಸ್ ಲಿಮಿಟೆಡ್‌ ಅಧಿಸೂಚನೆ ಹೊರಡಿಸಿದ್ದು, ಅರ್ಜಿ ಸಲ್ಲಿಸಲು ಸೆಪ್ಟೆಂಬರ್ 6 ಕೊನೆಯ ದಿನಾಂಕ ಎಂದು ಘೊಷಿಸಿದೆ.

ಒಟ್ಟು 300 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ್ದು, ಆನ್‌ಲೈನ್‌ ಪರೀಕ್ಷೆಯನ್ನು ಅಕ್ಟೋಬರ್‌ 6 ಮತ್ತು 7 ರಂದು ನಡೆಸಲಾಗುವುದು ಎಂದು ಅಧಿಸೂಚನೆಯಲ್ಲಿ ತಿಳಿಸಿದೆ. ಹುದ್ದೆಗಳಿಗೆ ತಕ್ಕಂತೆ ಅರ್ಹತೆಯನ್ನು ನಿಗದಿಪಡಿಸಿದ್ದು, ಪದವಿ, ಎಂಬಿಎ, ಎಂಎಂಎಸ್ ಕೋರ್ಸ್ ಗಳು ಶೈಕ್ಷಣಿಕ ವಿದ್ಯಾರ್ಹತೆಗಳಾಗಿವೆ. 

ಈ ಹುದ್ದೆಗಳಿಗೆ ಕನಿಷ್ಠ 21 ಮತ್ತು ಗರಿಷ್ಠ 28 ವಯೋಮಿತಿಯನ್ನು ನಿಗದಿಗೊಳಿಸಲಾಗಿದ್ದು, ರಾಜ್ಯದಲ್ಲಿ ಬೆಂಗಳೂರು ಮತ್ತು ಮೈಸೂರಿನಲ್ಲಿ ಮಾತ್ರ ಪರೀಕ್ಷಾ ಕೇಂದ್ರಗಳು ಇರಲಿವೆ ಎಂದು ಅಧಿಸೂಚನೆಯಲ್ಲಿ ಸ್ಪಷ್ಟಪಡಿಸಲಾಗಿದೆ.

ಈ ಕುರಿತು ಹೆಚ್ಚಿನ ಮಾಹಿತಿಗಾಗಿ www.lichousing.com ಗೆ ಭೇಟಿ ನೀಡುವಂತೆ ಮನವಿ ಮಾಡಲಾಗಿದೆ.

Follow Us:
Download App:
  • android
  • ios