Asianet Suvarna News Asianet Suvarna News

LICಯ ನೂತನ ವಿಮಾ ಪಾಲಿಸಿ ‘ಬಚತ್‌ ಪ್ಲಸ್‌’!

ಎಲ್‌ಐಸಿಯ ನೂತನ ವಿಮಾ ಪಾಲಿಸಿ ‘ಬಚತ್‌ ಪ್ಲಸ್‌’| ರಕ್ಷಣೆ ಜೊತೆಗೆ ಉಳಿತಾಯವೂ ಕೂಡ

LIC Bachat Plus Schem New Policy Combination of protection and savings pod
Author
Bangalore, First Published Mar 16, 2021, 8:01 AM IST

ಮುಂಬೈ(ಮಾ.16): ಭಾರತೀಯ ಜೀವ ವಿಮಾ ನಿಗಮ ಸೋಮವಾರ ‘ಬಚತ್‌ ಪ್ಲಸ್‌’ ಎಂಬ ನೂತನ ವಿಮಾ ಪಾಲಿಸಿಯೊಂದನ್ನು ಪರಿಚಯಿಸಿದೆ. ಈ ವಿಮಾ ಯೋಜನೆ ಗ್ರಾಹಕರಿಗೆ ಸಾವಿನ ಬಳಿಕದ ರಕ್ಷಣೆಯ ಜೊತೆಗೆ ಉಳಿತಾಯ ಎರಡನ್ನೂ ಒದಗಿಸಲಿದೆ.

ಐದು ವರ್ಷಕ್ಕೆ ಮೆಚೂರ್‌ ಆಗುವ ವಿಮಾ ಯೋಜನೆ ಇದಾಗಿದೆ. ಒಂದು ವೇಳೆ ಪಾಲಿಸಿದಾರ ಮೆಚುರಿಟಿಗಿಂತಲೂ ಮೊದಲು ಮೃತಪಟ್ಟರೆ ಆತ/ ಆಕೆಯ ಕುಟುಂಬಕ್ಕೆ ಹಣಕಾಸು ನೆರವು ದೊರೆಯಲಿದೆ. ಜೊತೆಗೆ ಮೆಚೂರಿಟಿಯ ಬಳಿಕ ಪಾಲಿಸಿದಾರರಿಗೆ ಒಂದು ನಿರ್ದಿಷ್ಟಮೊತ್ತ ದೊರೆಯಲಿದೆ. ಸಾವಿನ ಬಳಿಕ ವಿಮಾ ಮೊತ್ತ ಪಡೆಯುವ ಆಯ್ಕೆಗೆ ಒಂದೇ ಬಾರಿಗೆ ಪ್ರೀಮಿಯಂ ಪಾವತಿಸುವ ಮತ್ತು ಕಂತುಗಳಲ್ಲಿ ಪಾವತಿಸುವ ಆಯ್ಕೆಯನ್ನೂ ಈ ಯೋಜನೆ ಪಾಲಿಸಿದಾರರಿಗೆ ಒದಗಿಸಲಿದೆ.

ಒಂದು ವೇಳೆ ಪಾಲಿಸಿದಾರ ಪಾಲಿಸಿ ಮುಗಿದ ಬಳಿಕ ಆದರೆ, ವಿಮೆಯ ಮೆಚೂರಿಟಿಗೂ ಮುನ್ನ ಸಾವಿಗೀಡಾದರೆ ಖಾತರಿಪಡಿಸಿದ ಮೊತ್ತವನ್ನು ಗೌರವ ಧನದ ಜೊತೆಗೆ ನೀಡಲಾಗುತ್ತೆ. ಇದಕ್ಕೆ ಕನಿಷ್ಠ ಖಾತರಿ ಮೊತ್ತ 1 ಲಕ್ಷ ರು. ಆಗಿದ್ದು, ಗರಿಷ್ಠ ಮೊತ್ತಕ್ಕೆ ಮಿತಿ ಇರುವುದಿಲ್ಲ. ಯೋಜನೆಯ ಮೇಲೆ ಸಾಲ ಸೌಲಭ್ಯವನ್ನೂ ಪಡೆದುಕೊಳ್ಳಬಹುದಾಗಿದೆ ಎಂದು ಎಲ್‌ಐಸಿಯ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Follow Us:
Download App:
  • android
  • ios