* ಬಜೆಟ್ ನಲ್ಲಿ ಕನ್ನಡ ಮತ್ತು ಸಂಸ್ರ್ಕೃತಿ ಗೆ ಭರಪೂರ* ಪಕ್ಕದ ರಾಜ್ಯಗಳಲ್ಲಿಯೂ ಕರ್ನಾಟಕ ಭವನ* ಡಾ. ಮಹಾದೇವ  ಬಣಕಾರರ  ಸಾಂಸ್ಕೃತಿಕ  ಭವನ* ಮಂಗಳೂರು ವಿಶ್ವವಿದ್ಯಾಲಯದಲ್ಲಿ ಅರೆಭಾಷೆ  ಸಂಶೋಧನಾ  ಕೇಂದ್ರ

ಬೆಂಗಳೂರು(ಮೇ. 04 ಸವಾಲಿನ ನಡುವೆ ಸಿಎಂ ಬಸವರಾಜ ಬೊಮ್ಮಾಯಿ (Basavaraj Bommai) ಕರ್ನಾಟಕ ಬಜೆಟ್ 2022ನ್ನು (Karnataka Budget 2022) ಮಂಡಿಸಿದ್ದಾರೆ. ಕನ್ನಡ (Kannada) ಭಾಷೆ ಸಂರಕ್ಷಣೆ ಮತ್ತು ಬೆಳವಣಿಗೆಗೆ ಮೊದಲ ಆದ್ಯತೆ ನೀಡಲಾಗಿದ್ದು ಸಿಕ್ಕ ಕೊಡುಗೆಗಳ ಪಟ್ಟಿ ಇಲ್ಲಿದೆ.

ಬಜೆಟ್ ಭಾಷಣ ಓದುತ್ತ ಸಿಎಂ ಬಸವರಾಜ ಬೊಮ್ಮಾಯಿ ಕವಿ ಚನ್ನವೀರ ಕಣವಿ ಅವರ ಸಾಲುಗಳನ್ನು ಉಲ್ಲೇಖ ಮಾಡಿದರು. ಕನ್ನಡ ನಾಡಿನ ಸಾಹಿತ್ಯ ಮತ್ತು ಸಂಸ್ಕೃತಿಯ ರಕ್ಷಣೆ, ಅಭಿವೃದ್ಧಿಯ ಜೊತೆಗೆ ಸಮೃದ್ಧ ನೈಸರ್ಗಿಕ ಸಂಪನ್ಮೂಲವನ್ನೂ ಕಾಪಾಡುವುದು ನಮ್ಮ ಗುರಿಯಾಗಿದೆ. ಈಗಾಗಲೇ ಪರಿಸರ ಮಾಲಿನ್ಯದಿಂದಾದ ಕೊರತೆಯನ್ನು ಸರಿದೂಗಿಸಿ, ಪರಿಸರ ಸಂರಕ್ಷಿಸುವ ಉದ್ದೇಶದಿಂದ ನೂತನ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದೇವೆ ಎಂದು ತಿಳಿಸಿದರು.

ಕರ್ನಾಟಕ ಬಜೆಟ್ ಪ್ರತಿ ಕ್ಷಣದ ಮಾಹಿತಿ

* ನಮ್ಮ ನಾಡು ನುಡಿ ಸಂಸ್ಕೃತಿ ಬಿಂಬಿಸಲು ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಹಾವೇರಿಯಲ್ಲಿ ಆಯೋಜಿಸಲು 20 ಕೋಟಿ ರೂ.ಗಳನ್ನು ಒದಗಿಸಲಾಗುವುದು 

* ಕರ್ನಾಟಕ ಕಲಾಗ್ರಾಮವನ್ನು ಪೂರ್ಣ ಪ್ರಮಾಣದಲ್ಲಿ ಸಾಂಸ್ಕೃತಿಕವಾಗಿ ಸಜ್ಜುಗೊಳಿಸಿ ನಿರಂತರವಾಗಿ ಸಾಂಸ್ಕೃತಿಕ ಚಟುವಟಿಕೆಗಳು ನಡೆಸಲು ಸಾರ್ವಜನಿಕ ಖಾಸಗಿ ಸಹಭಾಗಿತ್ವದಲ್ಲಿ ಅಭಿವೃದ್ಧಿಪಡಿಸಲಾಗುವುದು. 

* ಯಕ್ಷಗಾನ ಕಲೆಯ ಸಮಗ್ರ ಆಯಾಮಗಳ ಕುರಿತು ರಾಜ್ಯಮಟ್ಟದ ಯಕ್ಷಗಾನ ಸಮ್ಮೇಳನ ಆಯೋಜಿಸಲಾಗುವುದು. 

* ಚಿಕ್ಕಬಳ್ಳಾಪುರ ಜಿಲ್ಲೆ ಕೈವಾರ ನಾಡಿನಲ್ಲಿ ಜನ್ಮತಾಳಿದ ಶ್ರೀ ಯೋಗಿನಾರೇಯಣಾ ಯತೀಂದ್ರರು (ಕೈವಾರ ತಾತಯ್ಯ) ಸಮಾಜ ಸುಧಾರಕರು, ವೇದಾಂತ ಸಾರವಳಿ, ತತ್ವಗಳು, ಕೀರ್ತನೆಗಳು ಹಾಗೂ ಹಲವಾರು ಪ್ರವಚನಗಳು ಆಧ್ಯಾತ್ಮಿಕ ಗ್ರಂಥಗಳನ್ನು ಬರೆದು ವರಕವಿಗಳಾಗಿದ್ದಾರೆ. ಶ್ರೀ ಯೋಗಿನಾರೇಯಣಾ ಯತೀಂದ್ರರ ಜಯಂತಿಯನ್ನು ರಾಜ್ಯ ಸರ್ಕಾರದ ವತಿಯಿಂದ ಪ್ರತಿ ವರ್ಷ ಮಾರ್ಚ್ 27ರಂದು ಆಚರಿಸಲಾಗುವುದು 

* ನಶಿಸಿ ಹೋಗುತ್ತಿರುವ ತಳಸಮುದಾಯದಲ್ಲಿರುವ ವಿಶಿಷ್ಟಕಲೆಗಳನ್ನು ಉಳಿಸಿ ಮುನ್ನಲೆಗೆ ತರಲು ರಾಜ್ಯದ ಪ್ರತಿ ವಿಭಾಗ ಮಟ್ಟದಲ್ಲಿ ಒಂರಮತೆ ಒಟ್ಟು ನಾಲ್ಕು ಸಾಂಸ್ಕೃತಿಕ ಶಿಬಿರ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು. 

* ಕರ್ನಾಟಕದ ಹೆಸರಾಂತ ಸಾಹಿತಿಗಳಾದ ಡಾ.ಸಿದ್ಧಲಿಂಗಯ್ಯ, ಡಾ. ಎಂ.ಚಿದಾನಂದಮೂರ್ತಿ, ಡಾ. ಚಂದ್ರಶೇಖರ ಪಾಟೀಲ್, ಚನ್ನವೀರ ಕಣವಿ ರವರ ಅಮೂಲ್ಯ ಸಾಹಿತ್ಯಗಳನ್ನು ಉಳಿಸಲು ವಿಶೇಷ ಯೋಜನೆ ರೂಪಿಸಲಾಗುವುದು.

Karnataka Budget 2022-23: ನಿರೀಕ್ಷೆಯಂತೆಯೇ ಬಜೆಟ್‌ನಲ್ಲಿ ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರಿಗೆ ಗುಡ್ ನ್ಯೂಸ್

* ಡಾ. ಮಹಾದೇವ ಬಣಕಾರರ ಸಾಂಸ್ಕೃತಿಕ ಭವನವನ್ನು ಹಾವೇರಿ ಜಿಲ್ಲೆಯಲ್ಲಿಎರಡು ಕೋಟಿ ರೂ.ಗಳಲ್ಲಿ ನಿರ್ಮಿಸಲಾಗುವುದು. 

* ಮಂಗಳೂರು ವಿಶ್ವವಿದ್ಯಾಲಯದಲ್ಲಿ ಅರೆಭಾಷೆ ಸಂಶೋಧನಾ ಕೇಂದ್ರವನ್ನು ಸ್ಥಾಪಿಸಲಾಗುವುದು.

* ನೆರೆ ರಾಜ್ಯಗಳಲ್ಲಿ ಕನ್ನಡ ಭಾಷೆ ಮತ್ತು ಸಂಸ್ಕೃತಿಯನ್ನು ಅಭಿವೃದ್ಧಿಪಡಿಸಲು, ಕಾಸರಗೋಡಿನಲ್ಲಿ ಕಯ್ಯಾರ ಕಿಂಞಣ್ಣ ರೈ ರವರ ಹೆಸರಿನಲ್ಲಿ, ಅಕ್ಕಲಕೋಟೆಯಲ್ಲಿ ಜಯದೇವಿತಾಯಿ ಲಿಗಾಡೆ ರವರ ಹೆಸರಿನಲ್ಲಿ ಮತ್ತು ಗೋವಾದಲ್ಲಿ ಕನ್ನಡ ಭವನವನ್ನು ನಿರ್ಮಿಸಲಾಗುವುದು. 

* ಗಡಿಯಲ್ಲಿರುವ ಪ್ರದೇಶಗಳಲ್ಲಿ ಸಂಪರ್ಕ ರಸ್ತೆಗಳು, ಕುಡಿಯುವ ನೀರಿನ ವ್ಯವಸ್ಥೆ, ಬೀದಿ ದೀಪಗಳು ಮುಂತಾದ ಮೂಲಭೂತ ಸೌಕರ್ಯಗಳನ್ನು ಗ್ರಾಮ ಪಂಚಾಯಿತಿಗಳ ಮೂಲಕ ಒದಗಿಸಿ ಸಮಗ್ರವಾಗಿ ಅಭಿವೃದ್ಧಿಪಡಿಸಲಾಗುವುದು.