Asianet Suvarna News Asianet Suvarna News

ಕತ್ತಲಲ್ಲಿ ಟ್ಯಾಕ್ಸಿಗೆ ಕಾಯ್ತಿದ್ದ ಸುಧಾ ಮೂರ್ತಿಯನ್ನು ನೋಡಿ ನಾರಾಯಣ ಮೂರ್ತಿಗೆ ಹೀಗೆ ಹೇಳಿದ್ರಂತೆ ಜೆಆರ್‌ಡಿ ಟಾಟಾ..!

ರತನ್‌ ಟಾಟಾ ಕೇವಲ ಕೈಗಾರಿಕೋದ್ಯಮಿಯಾಗಿದ್ದರೆ, ಅವರ ನಿಧನಕ್ಕೆ ದೇಶವೇ ಮರುಗುತ್ತಿರಲಿಲ್ಲ. ದಾನ ಹಾಗೂ ಸಮಾಜಮುಖಿ ಕಾರ್ಯಗಳಿಂದಾಗಿ ಜನಮಾನಸದಲ್ಲಿ ರತನ್‌ ಟಾಟಾ ನೆಲೆಯೂರಿದ್ದರು. ಕೇವಲ ರತನ್‌ ಟಾಟಾ ಮಾತ್ರವಲ್ಲ, ಇಡೀ ಟಾಟಾ ಸಮೂಹವೇ ತಮ್ಮ ಸ್ಫೂರ್ತಿದಾಯಕ ಜೀವನಕ್ಕೆ ಹೆಸರುವಾಸಿ.

JRD Tata Advice to Narayana Murthy Young Man Dont Make Your Wife Wait san
Author
First Published Oct 16, 2024, 6:43 PM IST | Last Updated Oct 16, 2024, 7:01 PM IST

ಬೆಂಗಳೂರು (ಅ.16): ತಮ್ಮ ಕೆಲಸ ಹಾಗೂ ಸಮಾಜಮುಖಿ ಕಾರ್ಯಗಳ ಮೂಲಕವೇ ದೇಶದ ಅನೇಕರ ಜೀವನದ ಮೇಲೆ ಶಾಶ್ವದವಾದ ಪ್ರಭಾವವನ್ನು ಬೀರಿದವರು ದಿವಂಗತ ಕೈಗಾರಿಕೋದ್ಯಮಿ ರತನ್‌ ಟಾಟಾ. ಇವರಲ್ಲಿ ಇನ್ಫೋಸಿಸ್‌ನ ಸಹ ಸಂಸ್ಥಾಪಕ ನಾರಾಯಣ ಮೂರ್ತಿ ಕೂಡ ಒಬ್ಬರು. ರತನ್‌ ಟಾಟಾ ಅವರ ಮೌಲ್ಯಗಳು ತಮ್ಮ ಜೀವನದ ಮೇಲೆ ಅತಿಯಾಗಿ ಪ್ರಭಾವ ಬೀರಿದೆ ಎಂದೂ ಹೇಳುತ್ತಿದ್ದರು. ಇತ್ತೀಚೆಗೆ ನೀಡಿದ ಸಂದರ್ಶನವೊಂದರಲ್ಲಿ ಭಾರತದ ದಿಗ್ಗಜ ಉದ್ಯಮಿ ಜೊತೆಗಿನ ಅಚ್ಚುಮೆಚ್ಚಿನ ನೆನಪುಗಳನ್ನು ಅವರು ಹಂಚಿಕೊಂಡರು. ಟಾಟಾ ವ್ಯಾಪಾರ ಪ್ರಪಂಚದ ಮೇಲೆ ಮಾತ್ರವಲ್ಲದೆ ವೈಯಕ್ತಿಕ ಸಂಬಂಧಗಳು ಮತ್ತು ಸಾಮಾಜಿಕ ಮೌಲ್ಯಗಳ ಮೇಲೂ ಪರಿಣಾಮ ಬೀರಿದೆ ಎಂದು ಹೇಳಿದರು.

ಸಂದರ್ಶನದಲ್ಲಿ ರತನ್‌ ಟಾಟಾ ಕರುಣೆಯ ವ್ಯಕ್ತಿ ಮತ್ತು ಮಾನವನ ಜೀವನದ ನಿಜವಾದ ಸಾಕಾರ ಮೂರ್ತಿ ಎಂದು ಹೇಳಿದರು. 'ರತನ್‌ ಟಾಟಾ ಎಲ್ಲರೊಂದಿಗೆ ಸಹಾನುಭೂತಿ ಇರುವ ವ್ಯಕ್ತಿಯಾಗಿದ್ದರು' ಎಂದು ಹೇಳಿದ್ದಾರೆ.ಸಾರ್ವಜನಿಕರಿಗೆ ಕಡಿಮೆ ದರದಲ್ಲಿ ಉತ್ತಮ ಸಾರಿಗೆ ಇರಬೇಕು ಎನ್ನುವ ನಿಟ್ಟಿನಲ್ಲಿ ಟಾಟಾ ನ್ಯಾನೋದಂಥ ಕನಸು ಕಂಡಿದ್ದಲ್ಲದೆ, ಅದನ್ನು ನನಸು ಮಾಡಿದ್ದೂ ಕೂಡ ಸಮಾಜಕ್ಕೆ ಅವದ ಬದ್ದತೆಗೆ ಸಾಕ್ಷಿಯಾಗಿದೆ ಎಂದರು. ಭಾರತೀಯರು ಕೂಡ ತಮ್ಮದೇ ಆದ ಸ್ವಂತ ಕಾರುಗಳನ್ನು ಉತ್ಪಾದನೆ ಮಾಡಬಹುದು ಎಂದು ಕನಸು ಕಂಡವರಲ್ಲಿ ರತನ್‌ ಟಾಟಾ ಮೊದಲಿಗರು. ದೇಶದ ಮೇಲಿದ್ದ ಅವರ ಪ್ರೀತಿಯೂ ಅನನ್ಯವಾದದ್ದು ಎಂದಿದ್ದಾರೆ.

ರತನ್ ಟಾಟಾ ಅವರು ಇತರರಿಗೆ ಮಾರ್ಗದರ್ಶನ ನೀಡುವ ಮತ್ತು ಸ್ಫೂರ್ತಿ ನೀಡುವ ಹಲವಾರು ಸಂದರ್ಭಗಳಿವೆ.ಅಂಥ ಒಂದು ಕ್ಷಣವನ್ನು ನಾರಾಯಣ ಮೂರ್ತಿ ಹಂಚಿಕೊಂಡರು. 1999ರಲ್ಲಿ ರತನ್‌ ಟಾಟಾ ಅವರಿಗೆ ನನ್ನ ಮಗಳನ್ನು ಪರಿಚಯಿಸಿದ್ದೆ. ಈ ವೇಳೆ ಅವರು ಆಕೆಗೆ ನಾಯಕತ್ವ, ದುರಾದೃಷ್ಟ ಹಾಗೂ ಜೀವನದಲ್ಲಿ ತೆಗೆದುಕೊಳ್ಳಬೇಕಾದ ಕಠಿಣ ನಿರ್ಧಾರಗಳ ಅಗತ್ಯವನ್ನು ತಿಳಿಸಿ ಹೇಳಿದರು. ಇದು ಆಕೆಗೆ ನಾಯಕತ್ವದ ಬಗ್ಗೆ ಸಿಕ್ಕಿದ ಅದ್ಭುತ ಪಾಠವಾಗಿತ್ತು. ಇದು ಆಕೆಗೆ ಮಾತ್ರವಲ್ಲದೆ, ನನಗೆ ಹಾಗೂ ಸುಧಾ ಮೂರ್ತಿಗೂ ಸಿಕ್ಕ ಉತ್ತಮ ಪಾಠ' ಎಂದು ಹೇಳಿದ್ದಾರೆ.

ಇನ್ಫೋಸಿಸ್‌ಗೆ ಅದೃಷ್ಟದ ವಾರ, ಐದೇ ದಿನದಲ್ಲಿ ಕೋಟ್ಯಂತರ ಹಣ; ನಾರಾಯಣ ಮೂರ್ತಿ ಫುಲ್‌ ಖುಷ್‌

ಅದರೊಂದಿಗೆ ರತನ್‌ ಟಾಟಾಗೂ ಮುನ್ನ ಟಾಟಾ ಗ್ರೂಪ್‌ನ ಚೇರ್ಮನ್‌ ಆಗಿದ್ದ ಜೆಆರ್‌ಡಿ ಟಾಟಾ ಜೊತೆಗಿನ ಘಟನೆಯೊಂದನ್ನೂ ನೆನಪಿಸಿಕೊಂಡಿದ್ದಾರೆ. ಒಮ್ಮೆ ಅವರನ್ನು ಭೇಟಿಯಾಗಲು ಹೋಗಿದ್ದ ವೇಳೆ ಸುಧಾ ಮೂರ್ತಿ ಕತ್ತಲಲ್ಲಿ ಟಾಕ್ಸಿಗಾಗಿ ಕಾಯುತ್ತಿರುವುದನ್ನು ನೋಡಿದರು. ಈ ವೇಳೆ ನನ್ನ ಕರೆದ ಅವರು, 'ಯಂಗ್‌ ಮ್ಯಾನ್‌, ಭವಿಷ್ಯದಲ್ಲಿ ಇನ್ನೊಂದು ನಿನ್ನ ಪತ್ನಿ ಕತ್ತಲಲ್ಲಿ ಕಾಯುವಂತೆ ಮಾಡಬೇಡ..' ಎಂದಿದ್ದರು. ಮನುಷ್ಯ ಜೀವಗಳಿಗೆ ಟಾಟಾದ ವ್ಯಕ್ತಿಗಳು ಎಷ್ಟು ಪ್ರಾಮುಖ್ಯತೆ ನೀಡುತ್ತಿದ್ದರು ಹಾಗೂ ಅವರ ಶ್ರೇಷ್ಠತೆಗೆ ಇದು ಸಾಕ್ಷಿಯಾಗಿತ್ತು ಎಂದಿದ್ದಾರೆ.

ನೋಯೆಲ್‌ ಟಾಟಾ ಸೊಸೆ ಮಾನಸಿ, ಟಾಟಾ ಮೋಟಾರ್ಸ್‌ನ ಪ್ರಮುಖ ಎದುರಾಳಿ ಕಂಪನಿಯ ಒಡತಿ!

ಇದೇ ವೇಳೆ ಸುಧಾ ಮೂರ್ತಿ ಅವರು ಆರಂಭಿಸಿದ್ದ ಅಕ್ಷಯ ಪಾತ್ರಾ ಕಿಚನ್‌ನ ಉದ್ಘಾಟನೆಗೆ ರತನ್‌ ಟಾಟಾ ಅವರನ್ನು ಕರೆದಿದ್ದ ದಿನಗಳನ್ನು ನೆನಪಿಸಿಕೊಂಡರು. ಅಂದು ಅವರು ದೊಡ್ಡ ನಾಯಕರೊಂದಿಗೆ ಮಾತ್ರವಲ್ಲ, ಎಲ್ಲಾ ಜನರೊಂದಿಗೂ ಮುಕ್ತವಾಗಿ ಬೆಳೆದರು. ಅವರಲ್ಲಿದ್ದ ನಮ್ರತೆ ಮತ್ತು ಸಹಾನುಭೂತಿ ಬಂಡವಾಳಶಾಹಿಗಳಿಗೆ ಸಿಗುವ ದೊಡ್ಡ ಪಾಠ ಎಂದು ನಾರಾಯಣಮೂರ್ತಿ ತಿಳಿಸಿದರು. ನಾರಾಯಣ ಮೂರ್ತಿಯವರ ಈ ಎಲ್ಲಾ ನೆನಪುಗಳು ರತನ್ ಟಾಟಾ ಅವರ ಮೇಲಿನ ಗೌರವ ಮತ್ತು ಪ್ರೀತಿಯನ್ನು ತೋರಿಸುತ್ತವೆ, ಅವರ ಕೆಲಸ ಮತ್ತು ಮಾತುಗಳ ಮೂಲಕ ಅನೇಕರನ್ನು ಪ್ರೇರೇಪಿಸಿದ ವ್ಯಕ್ತಿಯಾಗಿದ್ದಾರೆ.
 

Latest Videos
Follow Us:
Download App:
  • android
  • ios