ಟಿಲಿಕಾಂ ಕಂಪನಿಗಳಿಗೆ ಕೇಂದ್ರದ ಪ್ಯಾಕೇಜ್ : ಜಿಯೋ ವಿರೋಧ
ಎಜಿಎರ್ ಶುಲ್ಕ ಮತ್ತು ದಂಡ ಪಾವತಿಸಲಾಗದು ಎಂಬ ಟೆಲಿಕಾಂ ಕಂಪನಿಗಳ ನೋವಿಗೆ ಸ್ಪಂದಿಸಿರುವ ಕೇಂದ್ರದ ಕ್ರಮವನ್ನು ರಿಲಯನ್ಸ್ ಜಿಯೋ ವಿರೋಧಿಸಿದೆ.
ನವದೆಹಲಿ [ಅ.01]: 1.40 ಲಕ್ಷ ಕೋಟಿ ಎಜಿಎರ್ ಶುಲ್ಕ ಮತ್ತು ದಂಡ ಪಾವತಿಸಲಾಗದು ಎಂಬ ಟೆಲಿಕಾಂ ಕಂಪನಿಗಳ ನೋವಿಗೆ ಸ್ಪಂದಿಸಿರುವ ಕೇಂದ್ರದ ಕ್ರಮವನ್ನು ರಿಲಯನ್ಸ್ ಜಿಯೋ ಬಲವಾಗಿ ವಿರೋಧಿಸಿದೆ.
ವೊಡಾಫೋನ್, ಭಾರ್ತಿ ಏರ್‌ಟೆಲ್ ಮತ್ತು ರಿಲಯನ್ಸ ಕಮ್ಯುನಿಕೇಷನ್ಸ್ ಸಂಸ್ಥೆಗಳು 1.40 ಲಕ್ಷ ಕೋಟಿ ರು. ಹಣ ಕಟ್ಟುವ ಸಾಮರ್ಥ್ಯ ಹೊಂದಿವೆ. ಹೀಗಾಗಿ ಅವುಗಳಿಗೆ ಯಾವುದೇ ಆರ್ಥಿಕ ಪ್ಯಾಕೇಜ್ ಘೋಷಿಸಬಾರದು ಎಂದು ಟೆಲಿಕಾಂ ಖಾತೆ ಸಚಿವ ರವಿಶಂಕರ್ ಪ್ರಸಾದ್ ಅವರಿಗೆ ರಿಲಯನ್ಸ್ ಜಿಯೋ ಪತ್ರ ಬರೆದಿದೆ.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಒಂದು ವೇಳೆ ಸಂಕಷ್ಟಪರಿಹಾರ ಸೂತ್ರ ಜಾರಿಯಾದರೆ, ಉಚಿತ ಮೊಬೈಲ್ ಕರೆ ಹಾಗೂ ಅಗ್ಗದ ಇಂಟರ್‌ನೆಟ್ ಡೇಟಾ ಸೇವೆಗಳು ಇನ್ನುಮುಂದೆ ಸ್ಥಗಿತಗೊಳ್ಳುವ ಸಾಧ್ಯತೆ ಇದೆ. ಹೀಗಾಗಿ ಈ ಕ್ರಮಕ್ಕೆ ಜಿಯೋ ವಿರೊಧ ವ್ಯಕ್ತಪಡಿಸಿದೆ.
ಬಿಎಸ್‌ಎನ್‌ಎಲ್ ಪುನರುಜ್ಜೀವನಕ್ಕೂ ಕ್ರಮ
ನಷ್ಟದಲ್ಲಿರುವ ಸರ್ಕಾರಿ ಸ್ವಾಮ್ಯದ ದೂರಸಂಪರ್ಕ ಕಂಪನಿಗಳಾದ ಬಿಎಸ್‌ಎನ್‌ಎಲ್ ಹಾಗೂ ಎಂಟಿಎನ್‌ಎಲ್‌ಗಳ ಪುನಶ್ಚೇತನಕ್ಕೆ ಮುಂದಾಗಿದೆ. ಎರಡೂ ಕಂಪನಿಗಳನ್ನು ವಿಲೀನಗೊಳಿಸಲು ನಿರ್ಧರಿಸಿದೆ. ಅಲ್ಲದೆ ಬಿಎಸ್‌ಎನ್‌ಎಲ್ ಪುನರುಜ್ಜೀವನಕ್ಕಾಗಿ ಭರ್ಜರಿ 68751 ಕೋಟಿ ರು.ಗಳ ಪ್ಯಾಕೇಜ್ ಕೂಡಾ ಘೋಷಿಸಿದೆ.
ಬಿಎಸ್‌ಎನ್‌ಎಲ್ ಪುನರುಜ್ಜೀವನಕ್ಕೆ ಕೇಂದ್ರದಿಂದ ಹಲವು ಕ್ರಮ...