ಮಕ್ಕಳ ಬದಲು ವಯಸ್ಕರ ಡೈಪರ್ ತಯಾರಿಕೆಗೆ ಮುಂದಾದ ಕಂಪನಿ, ಕಾರಣ ಏನಿರಬಹುದು?
ಜನ, ಜಗತ್ತು ಬದಲಾದಂತೆ ವಸ್ತುಗಳ ಉತ್ಪಾದನೆಯಲ್ಲಿ ಕೂಡ ಬದಲಾವಣೆ ಕಾಣಬಹುದು. ಕೆಲ ಪ್ರಸಿದ್ಧ ಕಂಪನಿಗಳು ತಮ್ಮ ಉತ್ಪನ್ನವನ್ನು ಬೇಡಿಕೆಗೆ ತಕ್ಕಂತೆ ಬದಲಿಸುತ್ತವೆ. ಜಪಾನ್ ನ ಕಂಪನಿ ಮಕ್ಕಳ ಡೈಪರ್ ಬದಲು ವಯಸ್ಕರ ಡೈಪರ್ ತಯಾರಿಗೆ ನಿರ್ಧಾರ ಕೈಗೊಂಡಿದೆ.
ಡೈಪರ್ ಎಂದಾಗ ನಮಗೆ ಮಕ್ಕಳ ನೆನಪಾಗುತ್ತದೆ. ಹುಟ್ಟಿದ ಮಗುವಿನಿಂದ ಹಿಡಿದು ಮಗು ಒಂದರೆಡು ವರ್ಷಕ್ಕೆ ಬರುವವರೆಗೂ ಪಾಲಕರು ತಮ್ಮ ಮಕ್ಕಳಿಗೆ ಡೈಪರ್ ಬಳಸೋದು ಕಾಮನ್. ರಾತ್ರಿ – ಹಗಲು ಮಕ್ಕಳಿಗೆ ಡೈಪರ್ ಹಾಕುವ ಕಾರಣ ವಿಶ್ವದಾದ್ಯಂತ ಮಕ್ಕಳ ಡೈಪರ್‌ಗೆ ಬೇಡಿಕೆ ಹೆಚ್ಚಿದೆ. ಡೈಪರ್ ತಯಾರಿಕಾ ಕಂಪನಿಗಳು ಇದ್ರಿಂದ ಲಾಭ ಮಾಡ್ತಿವೆ. ಆದ್ರೆ ವಿಶ್ವದ ಉಳಿದ ದೇಶಗಳಿಗಿಂತ ಜಪಾನ್ ಭಿನ್ನವಾಗಿದೆ. ಜಪಾನ್ ನಲ್ಲಿ ಮಕ್ಕಳ ಡೈಪರ್ ಗೆ ಬೇಡಿಕೆ ನಿರಂತರವಾಗಿ ಕಡಿಮೆ ಆಗ್ತಿದೆ. ಇದಕ್ಕೆ ಕಾರಣ ಮಕ್ಕಳ ಸಂಖ್ಯೆ ಕಡಿಮೆ ಆಗ್ತಿರುವುದು. ಜಪಾನ್‌ನಲ್ಲಿ ಜನನ ಪ್ರಮಾಣ ಇಳಿಮುಖವಾಗಿದೆ. ಹಾಗಾಗಿ ಅನೇಕ ಕಂಪನಿಗಳು ಮಕ್ಕಳ ಡೈಪರ್ ತಯಾರಿ ನಿಲ್ಲಿಸುವ ಘೋಷಣೆ ಮಾಡಿವೆ. ಈಗಾಗಲೇ ಕೆಲ ಕಂಪನಿಗಳು ಡೈಪರ್ ತಯಾರಿ ನಿಲ್ಲಿಸಿವೆ.
2023 ರಲ್ಲಿ ಜಪಾನ್ (Japan) ನಲ್ಲಿ ಜನಿಸಿದ ಶಿಶುಗಳ ಸಂಖ್ಯೆ ಕೇವಲ 758,631. ಹಿಂದಿನ ವರ್ಷಕ್ಕೆ ಹೋಲಿಸಿದ್ರೆ ಜನನ ಪ್ರಮಾಣ ಶೇಕಡಾ 5.1ರಷ್ಟು ಕಡಿಮೆಯಾಗಿದೆ. 19ನೇ ಶತಮಾನದ ನಂತರ ಜಪಾನ್‌ನಲ್ಲಿ ಇದು ಅತಿ ಕಡಿಮೆ ಜನನ (Birth) ದರ ಎಂದು ವರದಿಯಾಗಿದೆ. ವಿಶ್ವದಲ್ಲೇ ಅತಿ ಹೆಚ್ಚು ವೃದ್ಧರನ್ನು ಹೊಂದಿರುವ ದೇಶವೆಂದ್ರೆ ಜಪಾನ್. ಜಪಾನ್ ನ ಶೇಕಡಾ 30ರಷ್ಟು ಜನರು 65 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನವರು. ಕಳೆದ ವರ್ಷ 80 ವರ್ಷಕ್ಕಿಂತ ಮೇಲ್ಪಟ್ಟ ಜನರ ಪ್ರಮಾಣವು ಮೊದಲ ಬಾರಿಗೆ ಶೇಕಡಾ 10 ಮೀರಿತ್ತು. ಜಪಾನ್ ನಲ್ಲಿ ಮಕ್ಕಳ ಡೈಪರ್ (Diaper) ಗಿಂತ ವೃದ್ಧರಿಗೆ ಈಗ ಡೈಪರ್ ಅವಶ್ಯಕತೆ ಇದೆ. ವೃದ್ಧರ ಡೈಪರ್ ಗೆ ಬೇಡಿಕೆ ಹೆಚ್ಚಿರುವ ಕಾರಣ ಮಕ್ಕಳ ಡೈಪರ್ ಉತ್ಪಾದನೆ ನಿಲ್ಲಿಸಿ ವೃದ್ಧರ ಡೈಪರ್ ತಯಾರಿಸಲು ಒಜಿ ಹೋಲ್ಡಿಂಗ್ಸ್ ನಿರ್ಧರಿಸಿದೆ.
ಎಸ್‌ಬಿಐ ಡೆಬಿಟ್ ಕಾರ್ಡ್ ಯೂಸ್ ಮಾಡ್ತಾ ಇದ್ದೀರಾ? ಕಿಸೆಗೆ ಮತ್ತೆ ಕತ್ತರಿ ಹಾಕಿದ ಬ್ಯಾಂಕ್!
ಒಜಿ ಹೋಲ್ಡಿಂಗ್ಸ್ ಮಕ್ಕಳ ಡೈಪರ್ ತಯಾರಿಸುವ ಪ್ರಮುಖ ಕಂಪನಿಯಾಗಿತ್ತು. ಪ್ರತಿ ವರ್ಷ 400 ಮಿಲಿಯನ್ ಡೈಪರ್ ತಯಾರಿಸುತ್ತಿತ್ತು, ವೇಗವಾಗಿ ಮಕ್ಕಳ ಜನನ ಪ್ರಮಾಣ ಕಡಿಮೆ ಆಗ್ತಿರುವ ಕಾರಣ ಒಜಿ ಹೋಲ್ಡಿಂಗ್ಸ್ ಡೈಪರ್ ಕಂಪನಿಗೆ ನಷ್ಟದ ಭಯ ಶುರುವಾಗಿದೆ. 2001 ರಿಂದ ಮಕ್ಕಳ ಡೈಪರ್ ಉತ್ಪಾದನೆಯಲ್ಲಿ ಕುಸಿತವಾಗಿತ್ತು. ಈಗ ಅದು ಅರ್ಧಕ್ಕೆ ಬಂತು ನಿಂತಿದೆ. ಇದೇ ಕಾರಣಕ್ಕೆ ಕಂಪನಿ ವೃದ್ಧರ ಡೈಪರ್ ಉತ್ಪಾದನೆಯತ್ತ ತನ್ನ ಗಮನ ಹರಿಸಿದೆ.
ಕಂಪನಿ ಇಂಡೋನೇಷ್ಯಾ ಹಾಗೂ ಮಲೇಷ್ಯಾದಲ್ಲಿ ಶಾಖೆ ಹೊಂದಿದ್ದು, ಅಲ್ಲಿ ಮಕ್ಕಳ ಡೈಪರ್ ತಯಾರಿ ಮುಂದುವರೆಯಲಿದೆ ಎಂದು ಕಂಪನಿ ಹೇಳಿದೆ. ಅತಿದೊಡ್ಡ ಡೈಪರ್ ತಯಾರಕ ಕಂಪನಿ ಯುನಿಚಾರ್ಮ್ ಕೂಡ ಮಕ್ಕಳಿಗಿಂತ ವೃದ್ಧರ ಡೈಪರ್ ತಯಾರಿಸುತ್ತಿದೆ. 2011 ರಲ್ಲಿ ವಯಸ್ಕರ ಡೈಪರ್‌ಗಳ ಮಾರಾಟ ಮಗುವಿನ ಡೈಪರ್‌ಗಳ ಮಾರಾಟಕ್ಕಿಂತ ಹೆಚ್ಚಿದೆ ಎನ್ನುವ ಮೂಲಕ ಕಂಪನಿ ಸಂಚಲನ ಮೂಡಿಸಿತ್ತು.
ಫ್ಯಾಷನ್ ಕ್ಷೇತ್ರದಲ್ಲಿ ಬ್ಯುಸಿನೆಸ್ ಶುರು ಮಾಡಿದ್ರೂ ಒಂದೇ ವರ್ಷದಲ್ಲಿ ಲಕ್ಷಾಂತರ ವ್ಯವಹಾರ
ಜಪಾನ್ ನಲ್ಲಿ ಜನಸಂಖ್ಯೆ ಕುಸಿತ, ವಯಸ್ಸಾದವರ ಸಂಖ್ಯೆಯಲ್ಲಿ ಹೆಚ್ಚಳ ಹಾಗೂ ಜನನ ಪ್ರಮಾಣದಲ್ಲಿ ಇಳಿಕೆ ಜಪಾನ್ ಆರ್ಥಿಕತೆಗೆ ನಷ್ಟವನ್ನುಂಟು ಮಾಡಿದೆ. ಜಪಾನ್ ಸರ್ಕಾರ, ಜನಸಂಖ್ಯೆ ಹೆಚ್ಚಳಕ್ಕೆ ಸಾಕಷ್ಟು ಪ್ರಯತ್ನ ನಡೆಸುತ್ತಿದೆ. ದಂಪತಿಗೆ ಹೊಸ ಹೊಸ ಆಫರ್ ನೀಡ್ತಿದೆ. ಮಕ್ಕಳ ಶಿಕ್ಷಣದ ಜವಾಬ್ದಾರಿ ವಹಿಸಿಕೊಳ್ಳುವ, ಆರ್ಥಿಕ ನೆರವು ನೀಡುವ ಘೋಷಣೆ ಮಾಡಿದೆಯಾದ್ರೂ ಜನರು ಮಕ್ಕಳನ್ನು ಹೆರಲು ಮುಂದೆ ಬರ್ತಿಲ್ಲ. ಜಪಾನ್ ನಲ್ಲಿ ಮದುವೆಯಾಗುವವರ ಸಂಖ್ಯೆಯೇ ಕಡಿಮೆ ಆಗಿದ್ದು, ಮದುವೆ ಆದವರು ಕೂಡ ಮಕ್ಕಳನ್ನು ಪಡೆಯಲು ಹಿಂದೇಟು ಹಾಕ್ತಿದ್ದಾರೆ.