ಮುಂಬೈ ಮೂಲದ ಯುನಿಕಾರ್ನ್ ಮೇಲೆ ಐಟಿ ದಾಳಿ: 224 ಕೋಟಿ ರೂ. ಅಕ್ರಮ ಸಂಪತ್ತು ಪತ್ತೆ

*ಕಾಗದಕ್ಕಷ್ಟೇ ಸೀಮಿತವಾದ ಯುನಿಕಾರ್ನ್,ವಾಸ್ತವದಲ್ಲಿ ಏನೂ ಇಲ್ಲ
*ಅನಧಿಕೃತ ವ್ಯವಹಾರದ ಬಗ್ಗೆ ತಪೊಪ್ಪಿಕೊಂಡ ಕಂಪೆನಿಯ ನಿರ್ದೇಶಕರು
*ಹವಾಲಾ ಹಣದ ನೆಟ್ ವರ್ಕ್ ಹೊಂದಿರೋದು ಪತ್ತೆ

IT Department raided Maharashtra based unicorn black income of Rs 224 cr found

ಮುಂಬೈ (ಮಾ.21): ಮಹಾರಾಷ್ಟ್ರದ (Maharashtra) ಪುಣೆ (Pune) ಹಾಗೂ ಥಾಣೆ (Thane) ಮೂಲದ ಯುನಿಕಾರ್ನ್ (unicorn) ಸ್ಟಾರ್ಟ್ ಅಪ್ (start-up) ಮೇಲೆ ಇತ್ತೀಚೆಗೆ ಆದಾಯ ತೆರಿಗೆ ಇಲಾಖೆ (Income Tax department) ದಾಳಿ ನಡೆಸಿದಾಗ ಸುಮಾರು  224 ಕೋಟಿ ರೂ. ಅಕ್ರಮ ಸಂಪತ್ತು ಪತ್ತೆಯಾಗಿದೆ ಎಂದು ನೇರ ತೆರಿಗೆಗಳ ಕೇಂದ್ರೀಯ ಮಂಡಳಿ ( CBDT) ಮಾಹಿತಿ ನೀಡಿದೆ.

ಈ ಸ್ಟಾರ್ಟ್ಅಪ್ (start-up) ನಿರ್ಮಾಣ ಸಾಮಗ್ರಿಗಳ ಸಗಟು (Wholesale) ಹಾಗೂ ಚಿಲ್ಲರೆ (Retail) ವ್ಯಾಪಾರದಲ್ಲಿ ನಿರತವಾಗಿದ್ದು, ವಾರ್ಷಿಕ ಟರ್ನ್ ಓವರ್ (Turnover) 6,000 ಕೋಟಿ ರೂ. ಮೀರಿದೆ. ಮಹಾರಾಷ್ಟ್ರ, ಕರ್ನಾಟಕ, ಆಂಧ್ರ ಪ್ರದೇಶ, ಉತ್ತರ ಪ್ರದೇಶ ಹಾಗೂ ಮಧ್ಯ ಪ್ರದೇಶದ ವಿವಿಧ ಸ್ಥಳಗಳಲ್ಲಿರೋ ಸ್ಟಾರ್ಟ್ ಅಪ್ ಗೆ ಸಂಬಂಧಿಸಿದ 23 ಕಚೇರಿಗಳ ಮೇಲೆ ಆದಾಯ ತೆರಿಗೆ ಇಲಾಖೆ ಮಾ.9ರಂದು ದಾಳಿ ನಡೆಸಿದೆ. ಷೇರುಗಳನ್ನು ಅತ್ಯಧಿಕ ಪ್ರೀಮಿಯಂನಲ್ಲಿ ಮಾರಾಟ ಮಾಡಿ ಮಾರಿಷಸ್ ಮಾರ್ಗದ ಮೂಲಕ ಈ ಸಂಸ್ಥೆ ಬೃಹತ್ ಪ್ರಮಾಣದ ವಿದೇಶಿ ಹಣ ಪಡೆದಿರೋದು ಈ ದಾಳಿ ವೇಳೆ ಪತ್ತೆಯಾಗಿದೆ.  

ಈ 1ರೂ. ನಾಣ್ಯ ನಿಮ್ಮ ಬಳಿಯಿದ್ರೆ 10 ಕೋಟಿ ರೂ.ಗಳಿಸಬಹುದು; ಹೇಗೆ ಅಂತೀರಾ? ಇಲ್ಲಿದೆ ವಿವರ

ಮುಂಬೈ ಹಾಗೂ ಥಾಣೆ ಮೂಲದ ಕೆಲವು ಸೆಲ್ ಕಂಪೆನಿಗಳಿಗೆ ಸಂಬಂಧಿಸಿದ ಕೆಲವು ಹವಾಲಾ ನೆಟ್ ವರ್ಕ್ ಅನ್ನು ಕೂಡ ಪತ್ತೆ ಹಚ್ಚಲಾಗಿದೆ ಎಂದು ಸಿಬಿಡಿಟಿ ತಿಳಿಸಿದೆ. ಈ ತನಕ ಲೆಕ್ಕೆ ಸಿಗದ 1 ಕೋಟಿ ರೂ. ನಗದು ಹಾಗೂ 22 ಲಕ್ಷ ರೂ. ಮೌಲ್ಯದ ಆಭರಣಗಳನ್ನು ಈ ತನಕ ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಈ ಸಂಸ್ಥೆ ಅನೇಕ ಅನಧಿಕೃತ ಖರೀದಿಗಳನ್ನು ಮಾಡಿರೋ ಜೊತೆಗೆ ದೊಡ್ಡ ಮೊತ್ತದ ಅನಧಿಕೃತ ನಗದು ವ್ಯವಹಾರ ನಡೆಸಿರೋದು ಪತ್ತೆಯಾಗಿದೆ. ಇಂಥ ಸುಮಾರು 400 ಕೋಟಿ ರೂ. ವ್ಯವಹಾರ ನಡೆಸಿದೆ.

ಈ ಕಂಪನಿಯ ನಿರ್ದೇಶಕರನ್ನು ವಿಚಾರಣೆ ನಡೆಸಿದಾಗ 224 ಕೋಟಿ ರೂ. ಅನಧಿಕೃತ ವ್ಯವಹಾರ ನಡೆಸಿರೋದನ್ನು ಒಪ್ಪಿಕೊಂಡಿದ್ದಾರೆ ಎಂದು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಈ ಸೆಲ್ ಕಂಪೆನಿ ಕಾಗದಕ್ಕೆ ಮಾತ್ರ ಸೀಮಿತವಾಗಿದೆ ಎಂದು ಕೂಡ ಅವರು ಮಾಹಿತಿ ನೀಡಿದ್ದಾರೆ. ಆದ್ರೆ ಸಿಬಿಡಿಟಿ ಎಲ್ಲಿಯೂ ಕಂಪೆನಿಯ ಹೆಸರನ್ನು ಬಹಿರಂಗಪಡಿಸಿಲ್ಲ. 

ಗುಜರಾತ್ ಗುಟ್ಕಾ ಸಂಸ್ಥೆ ಮೇಲೆ ಐಟಿ ದಾಳಿ
ಗುಜರಾತ್ (Gujarat) ಮೂಲದ ಗುಟ್ಕಾ (Gutkha) ವಿತರಕ (distribution)ಸಂಸ್ಥೆ ಮೇಲೆ 2021ರ  ನವೆಂಬರ್‌ ನಲ್ಲಿ ಆದಾಯ ತೆರಿಗೆ ಇಲಾಖೆ (Income tax department) ದಾಳಿ (raid) ನಡೆಸಿದ ಸಮಯದಲ್ಲಿ 100 ಕೋಟಿ ರೂ.ಗೂ ಅಧಿಕ ಅಕ್ರಮ ಆದಾಯ  (Unaccounted Income) ಪತ್ತೆಯಾಗಿತ್ತು. ಆದಾಯ ತೆರಿಗೆ ಅಧಿಕಾರಿಗಳು ಗುಟ್ಕಾ ವಿತರಕರ ಗುಂಪಿಗೆ ಸೇರಿದ 15 ಸ್ಥಳಗಳ ಮೇಲೆ ದಾಳಿ ನಡೆಸಿದ್ದರು. ಈ ಸಂದರ್ಭದಲ್ಲಿ ದಾಖಲೆಗಳಿರದ ಸುಮಾರು 7.5 ಕೋಟಿ ರೂ. ನಗದು ಹಾಗೂ 4 ಕೋಟಿ ರೂ. ಮೌಲ್ಯದ ಒಡವೆಗಳನ್ನು ವಶಪಡಿಸಿಕೊಂಡಿದ್ದರು. 

EPF ಖಾತೆದಾರರಿಗೆ ಮತ್ತೊಂದು ಶಾಕ್; 2.50 ಲಕ್ಷ ರೂ. ಮೀರಿದ ಕೊಡುಗೆಗೆ ತೆರಿಗೆ

ಇದೇ ಸಮಯದಲ್ಲಿ ಗುಜರಾತ್ ಮೂಲದ ರಾಸಾಯನಿಕ ಉತ್ಪಾದನಾ ಹಾಗೂ ರಿಯಲ್‌ ಎಸ್ಟೇಟ್‌ ಉದ್ಯಮ ಸಂಸ್ಥೆಗೆ ಸಂಬಂಧಿಸಿದ 20 ಸ್ಥಳಗಳ ಮೇಲೆ ಕೂಡ ಆದಾಯ ತೆರಿಗೆ ಇಲಾಖೆ  ದಾಳಿ ನಡೆಸಿತ್ತು. ಆಗ ಈ ಸಂಸ್ಥೆಯು ಬೃಹತ ಮೊತ್ತದ ಅಕ್ರಮ ಆಸ್ತಿ ಸಂಪಾದಿಸಿರೋದು ಹಾಗೂ ವಿವಿಧ ಸ್ಥಿರಾಸ್ತಿಗಳಲ್ಲಿ ಹೂಡಿಕೆ ಮಾಡಿರೋ ಬಗ್ಗೆ ಸಾಕಷ್ಟು ದಾಖಲೆಗಳು ಹಾಗೂ ಡಿಜಿಟಲ್‌ ಸಾಕ್ಷ್ಯಗಳು ಲಭಿಸಿತ್ತು. ದಾಳಿ ಸಂದರ್ಭದಲ್ಲಿ 2.5 ಕೋಟಿ ರೂ. ಅಘೋಷಿತ ನಗದು ಹಾಗೂ 1ಕೋಟಿ ರೂ. ಮೌಲ್ಯದ ಒಡವೆಗಳನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದರು. 
 

Latest Videos
Follow Us:
Download App:
  • android
  • ios